ಸಾಂಸ್ಕೃತಿಕ ಕ್ರೀಡಾ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟನೆ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.29- ಸಮಾಜದ ಅಭಿವೃದ್ಧಿಯಲ್ಲಿ ಯುವ ಪೀಳಿಗೆ ಪಾತ್ರ ಮಹತ್ವವಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಎಸ್.ಕೆ ಆಕಾಶ್ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬಿಜಿಎಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ಸಾಂಸ್ಕೃತಿಕ ಕ್ರೀಡಾ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು, ಕಾಲೇಜು ದಿನಗಳು ನಮ್ಮ ಜೀವನದಲ್ಲಿ ಎಂದು ಮರೆಯಲಾಗದ ಅನುಭವ ನೀಡುತ್ತವೆ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಪೆÇೀಷಕರ ಕನಸು ನನಸು ಮಾಡುವಂತೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಕಲಿಕೆಯ ಜೊತೆ ಒಳ್ಳೆಯ ಸಂಸ್ಕಾರ ಕಲಿತು ಅಬ್ದುಲ್ ಕಲಾಂ ರಂತಹ ಆದರ್ಶ ವ್ಯಕ್ತಿಗಳ ಜೀವನ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಮಾತನಾಡಿ ಶಿಕ್ಷಣ ದಾಸೋಹ ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಿಜಿಎಸ್ ವಿದ್ಯಾಸಂಸ್ಥೆ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾದದ್ದು ಎಂದರು.
ನಿಲಯ ಪಾಲಕರಾದ ಕೃಷ್ಣೇಗೌಡ ಅವರು ಮಾತನಾಡಿ ಶೈಕ್ಷಣಿಕ ಚಟುವಟಿಕೆ ಸಂದರ್ಭ ಏನೇ ತೊಡಕುಗಳು ಬಂದರೂ ನಮ್ಮ ಗುರಿ ಸಾಧನೆಯ ಕಡೆ ಇರಬೇಕು ಎಂದರು.
ಚಿತ್ರನಟಿ ಖುಷಿ ನಾಯರ್ ಮಾತನಾಡಿ ನಾವು ಯಾವುದೇ ಕೆಲಸ ಮಾಡುವ ಸಂದರ್ಭ ಅನೇಕ ವಿಜ್ಞಗಳು ಎದುರಾಗುತ್ತವೆ ಅವನ್ನು ಮೆಟ್ಟಿ ನಿಂತಾಗ ಸಾಧನೆಯ ಶಿಖರ ತಲುಪಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ಕುಮಾರ್ ಅವರು ಮಾತನಾಡಿ ಬದುಕು ಸರಳವಲ್ಲ ಅದನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಕೆಟ್ಟದ್ದನ್ನು ಮರೆತು ಒಳ್ಳೆಯದನ್ನು ಆರಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬಾಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮೈಸೂರು ಶಾಖಾ ಪೀಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಮಾತನಾಡಿ ಜೀವನದಲ್ಲಿ ನೈತಿಕತೆ ಪ್ರಾಮಾಣಿಕತೆ ಶ್ರದ್ಧೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಮಾದರಿ ವ್ಯಕ್ತಿಗಳಾಗಿ ಜೀವನ ನಡೆಸುವಂತೆ ಆಶೀರ್ವಚನ ನೀಡಿದರು.
ಪ್ರಾಂಶುಪಾಲರಾದ ಕೆ.ಆರ್ ಪ್ರವೀಣ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸಂಸ್ಥೆ ಪ್ರಾರಂಭವಾದಾಗಿನಿಂದ ಶ್ರಮಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಾದ ಅನನ್ಯ ಮುತ್ತುರಾಜ್ ತುಳಸಿ ಅನಿಸಿಕೆ ಹಂಚಿಕೊಂಡರು, ಚಿತ್ರನಟಿ ಖುಷಿ ನಾಯರ್ ನಡೆಸಿಕೊಟ್ಟ ಕಾರ್ಯಕ್ರಮ ರಂಜಿಸಿತು, ಐಶ್ವರ್ಯ ಮತ್ತು ತಂಡ ಪ್ರಾರ್ಥನೆ ಮಾಡಿದರು, ಉಪನ್ಯಾಸಕರಾದ ಕೆ.ಎಲ್ ಅವಿನಾಶ್ ನಿರೂಪಣೆ, ಜೆ.ಎಂ ಅವಿನಾಶ್ ಸ್ವಾಗತ, ಎಚ್.ಕೆ ಶಿಲ್ಪ ವಂದನಾರ್ಪಣೆ ನಡೆಸಿಕೊಟ್ಟರು.
ಈ ಸಂದರ್ಭ ಸಂಸ್ಥೆಯ ಆಡಳಿತ ಅಧಿಕಾರಿ ಹೆಚ್.ಎನ್ ಸುಧಾಕರ್, ಉಪನ್ಯಾಸಕರಾದ ಸಾಹಿತಿ ಶೆಟ್ಟಹಳ್ಳಿ ಮಹದೇವ್, ಇಲಿಯಾಸ್ ಖಾನ್, ಸ್ವಾಮಿ, ಪ್ರಸಾದ್ ಕುಮಾರ್, ದಿವ್ಯ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.