ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳ ವಿಶೇಷ ಸಭೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ. ಮೇ.೨೯; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಯಲ್ಲಿ  ಪದಾಧಿಕಾರಿಗಳ, ಜಿಲ್ಲಾ ಸಹಾಯಕ ಆಯುಕ್ತರುಗಳ, ತರಬೇತಿ ನಾಯಕರುಗಳ ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳ ವಿಶೇಷ ಸಭೆಯನ್ನು ಜಿಲ್ಲಾ ಸ್ಕೌಟ್ ಭವನ ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ನೂತನ ಜಿಲ್ಲಾ ಮುಖ್ಯ ಆಯುಕ್ತರಾದ  ಕೆ.ಪಿ.ಬಿಂದುಕುಮಾರ  ವಹಿಸಿದ್ದರು. 2024-25ನೇ ಸಾಲಿನ ಮೊದಲ ಸಭೆ ಇದಾಗಿದ್ದು ಅಲ್ಲದೆ ನಾನು ಜಿಲ್ಲಾ ಮುಖ್ಯ ಆಯುಕ್ತರನ್ನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಸಭೆ ಆಗಿದ್ದು ತಾವೆಲ್ಲರೂ ಬಂದಿದ್ದಿರಾ ಇಲ್ಲಿಯವರೆಗೆ ತಾವೆಲ್ಲರೂ ಸಹಾಯ ಸಹಕಾರಿ ನೀಡಿದ್ದಿರಿ ಅದೆ ರೀತಿ ನನ್ನ ಅಧಿಕಾರಾವಧಿಯಲ್ಲೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ಬೇಕಾಗಿದೆ ಮಕ್ಕಳ ಹಾಗೂ ವಯಸ್ಕನಾಯಕರ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸೋಣ ಅಲ್ಲದೆ ಪ್ರತಿಯೊಂದು ಶಾಲೆಯಲ್ಲಿ ಸ್ಕೌಟ್ ಗೈಡ್ ಮಕ್ಕಳು ಇರುವಂತೆ ಶ್ರಮವಹಿಸುವ ಎಂದು ಮಾತನಾಡಿದರು. ಶಿಕಾರಿಪುರ ಎಡಿಸಿ ವೇಣುಗೋಪಾಲ  ನೂತನ ಜಿಲ್ಲಾ ಮುಖ್ಯ ಆಯುಕ್ತರಿಗೆ ಶಾಲು ಹೊದಿಸಿ ಹೂಗುಚ್ಚ ಕೊಟ್ಟು ಸನ್ಮಾನಿಸಿದರು. ಸಭೆಗೆ ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ  ನೇರವೇರಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ಹಾಗೂ ನಡೆಸಬೇಕಾಗಿರುವ ಕಾರ್ಯಕ್ರಮದ ಬಗ್ಗೆ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ್  ವಿವರಿಸಿ ಸಭೆಯ ನಿರೂಪಣೆಯನ್ನು ನಿರ್ವಹಿಸಿದರು. ವಂದನೆಯನ್ನು ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ವಿಜಯಕುಮಾರ ನೇರವೇರಿಸಿದರು.