ಕ್ರೀಡೆಯಲ್ಲಿ ನಿರಂತರ ಅಭ್ಯಾಸ ಅಗತ್ಯ

ಸಂಜೆವಾಣಿ ವಾರ್ತೆ
ಶಿವಮೊಗ್ಗ.ಮೇ.೨೯; ಕ್ರೀಡೆಯಲ್ಲಿ ನಿರಂತರ ಅಭ್ಯಾಸವನ್ನ ಮಾಡಿದ್ದೆ ಆದರೆ ಆ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಪತ್ರಕರ್ತ ಜಿಸಿ ಸೋಮಶೇಖರ್ ಹೇಳಿದರುನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಕರಾಟೆ ಅಸೋಸಿಯೇಷನ್ ಏರ್ಪಡಿಸಿದ್ದ ಕರಾಟೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರಾಟೆ ಕೇವಲ ದೈಹಿಕ ಸಾಮರ್ಥ್ಯವನ್ನು ಗಳಿಸಿ ಕೊಡುವುದಿಲ್ಲ ಮಾನಸಿಕ ಸಾಮರ್ಥ್ಯವನ್ನು ಕೂಡ ಇದು ಪ್ರತಿಯೊಬ್ಬ ಕ್ರೀಡಾಪಟುವಿಗೆ ತಂದುಕೊಡುತ್ತದೆ ಎಂದು ಹೇಳಿದರುಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವ ಗಾದೆಯಂತೆ ಕೇವಲ ಪಂದ್ಯಾವಳಿ ಇದ್ದಾಗ ಮಾತ್ರ ಅಭ್ಯಾಸ ಮಾಡದೆ ಪ್ರತಿನಿತ್ಯವೂ ಕೂಡ ಕ್ರೀಡೆಯಲ್ಲಿ ಅಭ್ಯಾಸವನ್ನು ಮಾಡಿದ್ದೆ ಆದರೆ ಮುಂಬರುವ ಪಂದ್ಯಾವಳಿಗಳಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕರಾಟೆ ರಕ್ಷಣಾತ್ಮಕ ಆಟವಾಗಿದೆ ಈ ಆಟದಿಂದ ದೇಹ ಗಟ್ಟಿಮುಟ್ಟಾಗುವುದಲ್ಲದೆ ಮಾನಸಿಕವಾಗಿಯೂ ಕೂಡ ಉತ್ತಮ ಆರೋಗ್ಯವನ್ನು ಸಂಪಾದಿಸಬಹುದಾಗಿದೆ ಎಂದು ಹೇಳಿದರು