ಋತುಮತಿಯಾಗುವುದು ಭಯವಲ್ಲ ಹೆಣ್ಣಿಗೆ ಸಹಜ ಪ್ರಕ್ರಿಯೆ: ಡಾ. ಜಮೀಲ್ ಬೇಗ್
ಕಲಬುರಗಿ:ಮೇ.28:ಶಹಾಬಾದ್ ಪಟ್ಟಣದ ಚೌಡೇಶ್ವರಿ ಭವನದಲ್ಲಿ, ಜಿಲ್ಲಾ ಪಂಚಾಯತ್ ಕಲಬುರ್ಗಿ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರ್ಗಿ , ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ್ ವಿಸ್ತರಣಾ ಆರೋಗ್ಯ ಕೇಂದ್ರ ಹೊನಗುಂಟ ಹಾಗೂ ಕೆ ಎಚ್ ಪಿ ಟಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಅಡಿಯಲ್ಲಿ ಅಂತರಾಷ್ಟ್ರೀಯ ಮುಟ್ಟು ನೈರ್ಮಲ್ಯ ದಿನಾಚರಣೆಯನ್ನ ಚೌಡೇಶ್ವರಿ ಭವನದಲ್ಲಿ ಹೊನಗುಂಟದಲ್ಲಿ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಯುಷ್ಯ ವೈದ್ಯಾಧಿಕಾರಿಗಳು ಡಾ. ಜಮೀಲ್ ಬೇಗ್ ರವರು ಮಾತನಾಡುತ್ತಾ ಶೈಕ್ಷಾ ವ್ಯವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪುತ್ತಿದ್ದಂತೆ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಋತುಚಕ್ರದ ಪ್ರಕ್ರಿಯೆ ಅದರ ಪೂರ್ವ ಲಕ್ಷಣಗಳು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಋತುಚಕ್ರ ತ್ಯಾಜ್ಯ ವಿಧವಾರಿ ಕುರಿತಾಗಿ ಎಳೆ ಎಳೆಯಾಗಿ ವಿವರಿಸಿದರು ಋತುಚಕ್ರ ಎಂಬುವುದು ಹೆಣ್ಣಿನ ದೇಹದಲಾಗುವ ನಿಸರ್ಗದತ್ತ ಸಹಜ ಪ್ರಕ್ರಿಯೆ ಎಂಬುದನ್ನು ಅರಿತುಕೊಳ್ಳಬೇಕು ಪ್ರಪಂಚದಲ್ಲಿ ಮಗುವಿಗೆ ಜೀವ ಕೊಡುವ ಸಾಧ್ಯತೆ ಇರುವುದು ಕೇವಲ ಮಹಿಳೆಯರಿಗೆ ಮಾತ್ರ ಕೊಟ್ಟಿರುವ ವರವಾಗಿದೆ ಒಬ್ಬ ಮಹಿಳೆ ಮಗು ಜನಿಸುವುದಕ್ಕೆ ಸಾಧ್ಯವಾಗುವುದು ಆಕೆ ಋತುಮತಿಯಾದ ನಂತರವಷ್ಟೇ ಯಾವಾಗ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುತ್ತಿದೆಯೋ ಅದನ್ನು ಅಂಡಾನು ಬಿಡುಗಡೆ ಎಂದು ಕರೆಯುತ್ತಾರೆ ಗರ್ಭಕೋಶದ ಒಳಪದರಲಿ ಮೆದುವಾದ ಪದರು ತಯಾರಾಗುತ್ತದೆ ಈ ಪೊಗರು ಹೆಚ್ಚಾಗಿ ಸಣ್ಣ ಸಣ್ಣ ರಕ್ತನಾಳಗಳಿಂದ ಕೂಡಿರುತ್ತದೆ ಆ ಪದರಿನ ಒಡೆದು ಹೊರಬರುವ ಅಂಡಾಣುವೆ ಋತುಚಕ್ರ ಎಂದು ಕರೆಯುತ್ತಾರೆ ಎಂದು ಹೇಳಿದರು.
ಇದೆ ಸಂಧರ್ಭದಲ್ಲಿ ಆರ್ ಕೆ ಎಸ್ ಕೆ. ಆಪ್ತ ಸಮಾಲೋಚಕ ಅಮರೇಶ್ ಇಟಗಿ ,ಮಾತನಾಡುತ್ತಾ ದೊಡ್ಡವರಾಗುವುದು ಅಂದರೆ ನಾವು ಪ್ರೌಢ ವ್ಯವಸ್ಥೆಯನ್ನು ತಲುಪುವುದು ಇದನ್ನು ನಾವು ಋತುಮತಿ ಅನ್ನುತ್ತೇವೆ ಸಾಮಾನ್ಯವಾಗಿ ಹತ್ತು ವರ್ಷ ಮೇಲ್ಪಟ್ಟ ಬಾಲಕಿಯರಿಗೆ ಯಾರಿಗೆ ಬೇಕಾದರೂ ಋತುಸ್ರಾವ ಆಗಬಹುದು ಹೆಣ್ಣಿನ ದೈಹಿಕ ರಚನೆ ಕಾರ್ಯ ವಿಧಾನಗಳು ವಿಶಿಷ್ಟವಾಗಿವೆ ಹೆಣ್ಣಿನ ಕೆಳ ಹೊಟ್ಟೆಯಲ್ಲಿ ಗರ್ಭಕೋಶವಿರುತ್ತದೆ ಅದರ ಪಕ್ಕದಲ್ಲಿ ಅಂಡಾಣು ತಯಾರಾಗುವ ಅಂಡಾಶಯ ಅಂದವನ್ನು ಗರ್ಭಕ್ಕೆ ವಯ್ಯುವ ಅಂಡನಾಳ ಗರ್ಭ ಕೊರಳು ಯೋನಿ ಇರುತ್ತದೆ ಈ ಮೂಲಕ ಋತುಸ್ರಾವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಲಾಯಿತು.
ಅದೇ ರೀತಿಯಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತ , ಹಿರಿಯ ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನೆ ಶಾಹಬಾದ್ ಮೀನಾಕ್ಷಿ ಅವರು ಮಾತನಾಡುತ್ತಾ ಹೆಣ್ಣು ಮಕ್ಕಳಿಗೆ ಋತುಮತಿಯಾಗುವುದು ಪ್ರಾಕೃತಿಕ ಸಹಜ ಪ್ರಕ್ರಿಯೆಯಾಗಿದೆ ಋತುಚಕ್ರ ಸಮಯದಲ್ಲಿ ಪ್ರತಿ ತಿಂಗಳು ಹೆಣ್ಣು ಮುಟ್ಟಾಗುವ ಸಂದರ್ಭ ಬಂದೇ ಬರುತ್ತದೆ ಆ ಮುಟ್ಟಿನ ಸಮಯದಲ್ಲಿ ಪೌಷ್ಟಿಕಾಂಶದ ಆಹಾರ ವೈಯಕ್ತಿಕ ಸ್ವಚ್ಛತೆ ಸಮತೋಲನ ಆಹಾರ ಸೇವಿಸಬೇಕೆಂದು ಹೇಳಿದರು ಅದೇ ರೀತಿಯಾಗಿ ಅದೇ ಏರಿಯಾದ ಹೆಣ್ಣು ಮಕ್ಕಳು ಪ್ರತಿ ತಿಂಗಳು ಮುಟ್ಟಾದಾಗ ಒಣಗಿದ ಬಟ್ಟೆಗಳನ್ನು ಹಾಗೂ ನ್ಯಾಪ್ಕಿನ್ ಪ್ಯಾಡ್ ಗಳನ್ನು ಉಪಯೋಗಿಸಬೇಕು ಹೇಳಿದರು ಈ ಬಟ್ಟೆಯನ್ನು ಪ್ರತ್ಯೇಕವಾಗಿ ಬಿಸಿನೀರು ಮತ್ತು ಸೋಪು ಬಳಸಿ ಸ್ವಚ್ಛಗೊಳಿಸಿ ಬಿಸಿಲಿನಲ್ಲಿಯೇ ಒಣಗಿಸಬೇಕು ಒಣಗಿಸಬೇಕು ಉಪಯೋಗ ಮಾಡಿರುವ ಸ್ಯಾನಿಟರಿ ಪ್ಯಾಡನ್ನು ಒಂದು ಕಾಗದದಲ್ಲಿ ಸುತ್ತಿ ಕಸದ ಬುಟ್ಟಿಯಲ್ಲಿ ಹಾಕಬೇಕು ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹನುಗುಂಟ ಮೆಹಬೂಬ್ ಪಟೇಲ್ , ಕೆಎಚ್ ಪಿಟಿ ತಾಲೂಕು ಸಂಯೋಜಕರು ರೇಣುಕಾ ಶಹಾಬಾದ್ . ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ಇರತಕ್ಕಂತಹ ಹದಿಹರೆಯದ ಮಕ್ಕಳು ನಾಗರಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಐಶ್ವರ್ಯ ಈ ಕಾರ್ಯಕ್ರಮವನ್ನು ನಿರೂಪಿಸಿದರು ರೇಣುಕಾ ವಂದಿಸಿದರು.