ಮಾನವನ ಸೇವೆಯೇ ಮಾಧವನ ಸೇವೆ: ಡಾ. ಜಿ.ಎಸ್. ಕುಲಕರ್ಣಿ
ಕಲಬುರಗಿ:ಮೇ.28: “ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದೆ ಇರುವಂತಹ ಕಲುಷಿತ ವಾತಾವರಣದಲ್ಲಿ ಮಾನವನ ಸೇವೆಯೇ ಮಾಧವನ ಸೇವೆ” ಎಂದು ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರು ಡಾ. ಜಿ.ಎಸ್.ಕುಲಕರ್ಣಿಯವರು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಶ್ರೀಕಾಂತ್ ಎಖಳಿಕರ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಸೃಷ್ಟಿ ಕುಲಕರ್ಣಿ ಶಿಬಿರದ ವರದಿಯನ್ನು ವಾಚಿಸಿದರು. ಕುಮಾರಿ ರಕ್ಷಿತಾ ಪ್ರಾರ್ಥನೆ ಗೀತೆ ಹಾಡಿದರೆ, ಕುಮಾರಿ ತ್ರಿವೇಣಿ ಹಾಗೂ ಸಂಗಡಿಗರು ಜೊತೆಗೂಡಿ ಎನ್.ಎಸ್.ಎಸ್. ಗೀತೆಯನ್ನು ಪ್ರಸ್ತುತ ಪಡಿಸಿದರು. ಡಾ. ವಿಷ್ಣು ಗುಂಡಗುರ್ಕಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಅಧಿಕಾರಗಳು ಹಾಗೂ ಈ ವಿಶೇಷ ಶಿಬಿರದ ರೂವಾರಿಗಳಾದ ಡಾ. ದಯಾನಂದ ಶಾಸ್ತ್ರೀಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.‌