ಶಿರೂರು ಗುಡ್ಡ ಕುಸಿತ: ಮೂರನೇ  ದಿನದ ಕಾರ್ಯಾಚರಣೆ ಮುಂದುವರಿಕೆ; ಲಾರಿಯ ಚಕ್ರಗಳು, ಹೈಟೆನ್ಶನ್ ವಯರ್, ಬಿಡಿಭಾಗಗಳು ಪತ್ತೆ
ಕಾರವಾರ: ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ನಡೆದ ಗುಡ್ಡ ಕುಸಿತದಲ್ಲಿ ನದಿ ಸೇರಿದ ಮೂವರ ಹುಡುಕಾಟ ನಡೆದಿದ್ದು, ಮೂರನೇ ದಿನ , ಲಾರಿಯ ಚಕ್ರಗಳು, ಹೈಟೆನ್ಶನ್ ವಯರ್ ಹಾಗೂ ಕಂಬದ ಬಿಡಿಭಾಗಗಳು ಸಿಕ್ಕಿವೆ.ಕೆಲ ಬಟ್ಟೆಗಳು ಸಹ ದೊರೆತಿವೆ. ಕಾರ್ಯಾಚರಣೆ ಒಂದೊಂದೇ ಹೆಜ್ಜೆ ಮುಂದೆ ಸಾಗುತ್ತಿದೆ.
ಸೇನೆಯ ನಿವೃತ್ತ ಮೇಜರ್ ಇಂದ್ರ ಬಾಲನ್: ಸೇನೆಯ ನಿವೃತ್ತ ಮೇಜರ್ ಇಂದ್ರ ಬಾಲನ್ ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದ್ದು, ನಾಳೆ ಕೇರಳದ ಭಾರತ್ ಬೆಂಜ್ ಲಾರಿ ಇರುವ ಕಡೆ ಡ್ರಜ್ಜಿಂಗ್ ಯಂತ್ರದ ಮೂಲಕ ಹುಡುಕಾಟಕ್ಕೆ ತಾಂತ್ರಿಕ ಸಲಹೆ ನೀಡಲಿದ್ದಾರೆ. ಈ ವರೆಗೆ ನಡೆದ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ.
ನೇವಿ ಸೋನಾರ್ ಟೆಕ್ನಾಲಜಿ ಮೂಲಕ ಕಬ್ಬಿಣದ ವಸ್ತು ನದಿಯಲ್ಲಿ ಇರುವ ಬಗ್ಗೆ ಸುಳಿವು ನೀಡಿತ್ತು . ನೀರಲ್ಲಿ ವಸ್ತು ಪತ್ತೆ ಹಚ್ಚುವ ರೆಡಾರ್ ತಂತ್ರಜ್ಞಾನವನ್ನು ಇಂದ್ರಬಾಲನ್ ಬಳಸಿದ್ದರು. ನದಿಯಲ್ಲಿ ಅವಶೇಣಗಳು ಇರುವ ನಾಲ್ಕು ಸ್ಥಳಗಳನ್ನು ಅವರು ಗುರುತಿಸಿದ್ದರು . ನಾಳೆ ಲಾರಿ ಇರುವ ನಾಲ್ಕನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಯಲಿದೆ.
ಈಶ್ವರ ಮಲ್ಪೆ ಕುರಿತು ಎಸ್ಪಿ ಸ್ಪಷ್ಟನೆ : ಈಶ್ವರ ಮಲ್ಪೆ ತಂಡ ಜಿಲ್ಲಾಡಳಿತ ಕರೆಯದೇ ಶಿರೂರು ಸ್ಥಳಕ್ಕೆ ಬಂದಿತ್ತು. ಡ್ರಜ್ಜಿಂಗ್ ಕಂಪನಿಯ ಮುಳುಗು ತಜ್ಞರು ಇದ್ದರೂ, ಇವರು ಕರೆಯದೇ ಬಂದು, ತಾವಾಗಿಯೇ ಮರಳಿದ್ದಾರೆ. ಮೊದಲ ಹಂತದ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸರಿಂದ ಸಹಕಾರ ಪಡೆದು ಹೊಗಳಿದ್ದ ಇವರು, ಈಗ ನಡೆದ ಕಾರ್ಯಾಚರಣೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದ್ದರು. ಮೇಲಾಗಿ ಇವರ ತಂಡವನ್ನು ಜಿಲ್ಲಾಡಳಿತ ಕರೆದಿರಲಿಲ್ಲ. ಹಾಗೂ ಶಿರೂರು ಸ್ಥಳದಿಂದ ಹೊರ ನಡೆಯಲು ಸಹ ಹೇಳಿಲ್ಲ. ಆದರೂ
ಜಿಲ್ಲಾಡಳಿತ, ಪೊಲೀಸರಿಂದ ಸಹಕಾರ ಸಿಗಲಿಲ್ಲ ಎಂದು ಆರೋಪಿಸಿ ವಿಡಿಯೋ ವೈರಲ್ ಮಾಡಿರುವುದು, ಆ ವಿಡಿಯೋ ದಲ್ಲಿನ ವಿಷಯ ಸತ್ಯಕ್ಕೆ ದೂರವಾಗಿದೆ ಎಂದು ಎಸ್ಪಿ ಎಂ.ನಾರಾಯಣ ತಿಳಿಸಿದ್ದಾರೆ.
