ಹಾಲು ಸಹಕಾರ ಸಂಘದ ಸಾಮನ್ಯ ಸಭೆ
ವಿಜಯಪುರ.ಸೆ೨೪:ಹೋಬಳಿಯ ಮಂಡಿಬೆಲೆ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಸಂಘದ ಅಧ್ಯಕ್ಷ ವಿ.ವಸಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಾಲು ಉತ್ಪಾದಕರ ಮಕ್ಕಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಆರ್.ಕೇಶವ ಅವರು, ೧೦ ಮಂದಿಗೆ ತಲಾ ೨ ಸಾವಿರದಂತೆ ಪ್ರತಿಭಾ ಪುರಸ್ಕಾರ ನೀಡಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಣ್ಣ ಅವರು ಸಂಘದ ವಾರ್ಷಿಕ ವರದಿ ಮಂಡಿಸಿದರು. ಸಂಘದಲ್ಲಿ ೪೬೬ ಮಂದಿ ಸದಸ್ಯರಲ್ಲಿ ೧೪೨ ಮಂದಿ ಸಕ್ರಿಯವಾಗಿದ್ದಾರೆ. ವಾರ್ಷಿಕವಾಗಿ ೫ ಲಕ್ಷ ೧೯ ಸಾವಿರದ ೩೪೬ ಲೀಟರ್ ಹಾಲು ಪೂರೈಕೆಯಾಗಿದೆ. ೧ ಕೋಟಿ ೭೩ ಲಕ್ಷ ೭೬ ಸಾವಿರದ ೮೦೧ ರೂಪಾಯಿ ವ್ಯವಹರಿಸಲಾಗಿದೆ. ರೈತರಿಗೆ ಮಿನರಲ್ ಮಿಕ್ಸರ್, ಗೋದಾರ್ ಶಕ್ತಿ ಜಂತುಹುಳ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಹಸಿರು ಮೇವು ಬೆಳೆಯಲು ಜೋಳ ವಿತರಣೆ ಮಾಡಲಾಗಿದೆ. ಸರ್ಕಾರದಿಂದ ಪ್ರೋತ್ಸಾಹಧನದ ರೂಪದಲ್ಲಿ ೨೨ ಲಕ್ಷ ೫೫ ಸಾವಿರದ ೦೨೭ ರೂಪಾಯಿ ರೈತರಿಗೆ ಜಮೆ ಆಗಿದೆ. ಹಾಲು ಮಾರಾಟ, ಪಶುಆಹಾರ ಮಾರಾಟ, ಮುಂತಾದ ಆದಾಯಗಳಿಂದಾಗಿ ೧೪ ಲಕ್ಷ ೭೩ ಸಾವಿರ ೯೦೪ ರೂಪಾಯಿ ವ್ಯಾಪಾರ ಲಾಭಗಳಿಸಿದ್ದು, ಒಟ್ಟು ೪ ಲಕ್ಷ ೦೧ ಸಾವಿರದ ೧೫೪ ನಿವ್ವಳ ಲಾಭ ಗಳಿಸಿದೆ ಎಂದರು.
ಬಮೂಲ್ ನಿರ್ದೇಶಕ ಇರಿಗೇನಹಳ್ಳಿ ಬಿ.ಶ್ರೀನಿವಾಸ್ ಮಾತನಾಡಿ, ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘವನ್ನು ಉನ್ನತಿಗೆ ತರಬಹುದಾಗಿದೆ. ಒಕ್ಕೂಟದಿಂದ ಪೌಷ್ಟಿಕಾಂಶಭರಿತವಾದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕು. ಈಗಾಗಲೇ ಮ್ಯಾಟ್ ಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಡೇರಿಗಳಿಗೆ ಬಣ್ಣಗಳು, ಮೇವು ಕತ್ತರಿಸುವ ಯಂತ್ರ ಹೀಗೆ ಹಲವಾರು ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ವಿ.ವಸಂತ್ ಕುಮಾರ್ ಮಾತನಾಡಿ, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸಂಘಕ್ಕೆ ಪೂರೈಕೆ ಮಾಡಿದರೆ, ಸಂಘವನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗುವುದರ ಜೊತೆಗೆ ಒಕ್ಕೂಟದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಉತ್ಪಾದಕರಿಗೆ ತಲುಪಿಸುವಂತಹ ಕೆಲಸ ಮಾಡಲಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆರ್.ಕೇಶವ, ಸಂಘದ ಉಪಾಧ್ಯಕ್ಷೆ ಎಂ.ವಿ.ಸರಿತಾ, ಬೆಂಗಳೂರು ಹಾಲು ಒಕ್ಕೂಟ ದೇವನಹಳ್ಳಿ ಶಿಬಿರದ ಸಹಾಯಕ ವ್ಯವಸ್ಥಾಪಕ ಡಿ.ಕೆ.ಮಂಜುನಾಥ್, ನಿರ್ದೇಶಕರಾದ ಎಂ.ಕೇಶವಮೂರ್ತಿ, ಕೆ.ಗೋಪಾಲ, ಆರ್.ನಾರಾಯಣರೆಡ್ಡಿ, ಎಂ.ಮುನೇಗೌಡ, ಸಿ.ನಾಗೇಶ, ಎನ್.ಗೌರಮ್ಮ, ಎನ್.ನವೀನ್ ಕುಮಾರ್, ಸಿ.ಮುನಿರಾಜು, ಸರಸ್ವತಮ್ಮ, ಕೆ.ಶಿವಕುಮಾರ, ಎಂ.ದೇವರಾಜು, ಸಿಬ್ಬಂದಿ ಡಿ.ರಾಮಕೃಷ್ಣಪ್ಪ, ಎನ್.ರಾಜಣ್ಣ, ಕೆ.ಕೇಶವ ಹಾಜರಿದ್ದರು.