ದೊಡ್ಡಹಾಗಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾದನಾ ಪ್ರಶಸ್ತಿ
ಆನೇಕಲ್.ಸೆ.೨೪:ದೊಡ್ಡಹಾಗಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರ ಪ್ರಗತಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ. ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ದೊಡ್ಡಹಾಗಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೊಡ್ಡಹಾಗಡೆ ಶಂಕರ್ ರವರಿಗೆ ೨೦೨೨-೨೩ ನೇ ಸಾಲಿನ ಅತ್ಯುತ್ತಮ ಸಾದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್. ಬಮೂಲ್ ನಿರ್ದೇಶಕ ಬಿ.ಜೆ.ಆಂಜಿನಪ್ಪ. ವಣಕನಹಳ್ಳಿ ಸೋಮಶೇಖರ್ ರೆಡ್ಡಿ. ಮಡಿವಾಳ ಮಣಿಮಂಠ. ಹಾರಗದ್ದೆ ನಟರಾಜ್ ಮತ್ತಿತರು ಹಾಜರಿದ್ದರು.