ರದ್ದೇವಾಡಗಿ: ಮುಂಗಾರು ಬೀಜ ದಿನೋತ್ಸವ
ಕಲಬುರಗಿ,ಮೇ.28-ರದ್ದೇವಾಡಗಿಯ ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೀಜ ದಿನೋತ್ಸವ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ತರಬೇತಿ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ.ಪಿ.ವಾಸುದೇವ ನಾಯ್ಕ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಮತ್ತು ಕೇಂದ್ರದಲ್ಲಿ ದೊರೆಯುವ ಸೌ¯ಭ್ಯಗಳ ಕುರಿತು ಮಾಹಿತಿ ನೀಡಿದರು. ಎಲ್ಲಾ ವರ್ಷಗಳಂತೆ ಈ ವರ್ಷ ಹೆಚ್ಚಿನ ಉತ್ತಮ ಗುಣಮಟ್ಟದ ಬೀಜಗಳು ಲಭ್ಯವಿದ್ದು, ಅದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ವರ್ಷ ರೈತರಿಗೆ ಉತ್ತಮ ಮಳೆಯಿಂದ ಬೆಳೆ ಚೆನ್ನಾಗಿ ಬಂದು ಉತ್ತಮ ಲಾಭ ಪಡೆಯಬೇಕೆಂಬ ಅಭಿಲಾಷೆಯನ್ನು ತಮ್ಮ ಮನದಾಳದಿಂದ ವ್ಯಕ್ತಪಡಿಸಿದರು ಮತ್ತು ರೈತರೊಂದಿಗೆ ಚರ್ಚಿಸಿ ಅವರ ವಿವಿಧ ಪ್ರಶ್ನೆಗಳಿಗೆ
ಸಮಂಜಸವಾಗಿ ಉತ್ತರಿಸಿದರು. ಹಾಗೆಯೇ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರವು ರೈತರ ಸಹಾಯಕ್ಕಾಗಿ ಸದಾ ಸಿದ್ದವಿರುತ್ತದೆ ಎಂದು ತಿಳಿಸಿದರು.
ವಿಜ್ಞಾನಿ (ತೋಟಗಾರಿಕೆ) ಡಾ.ಚೇತನ್ ಟಿ ಅವರು ಮಾತನಾಡಿ, ಹಿಂದಿನ ವರ್ಷಗಳಿಗಿಂತ ಈ ವರ್ಷ ಮುಂಗಾರು ಅತಿಬೇಗ ಬರುತ್ತಿರುವುದರಿಂದ ಹೆಚ್ಚಿನ ಮಳೆಯಾಗುವ ಸಾದ್ಯತೆ ಇದ್ದು, ರೈತರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೆಕು ಎಂದು ತಿಳಿಸಿದರು. ತೊಗರಿಯಲ್ಲಿ ಬೀಜೋಪಚಾರ, ಕುಡಿ ಚಿವುಟುವುದು, ಬೋದುಗಳಲ್ಲಿ ಬಿತ್ತನೆ ಮತ್ತು ಪಲ್ಸ ಮ್ಯಾಜಿಕ ಕುರಿತು ವಿವರವಾಗಿ ತಿಳಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಡಾ.ಉಮೇಶ ಬಾರಿಕಾರ್ ಅವರು ಮಾತನಾಡಿ, ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ಇಳಿಜಾರಿಗೆ ಅಡ್ಡ ಬಿತ್ತನೆ , ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ನೀರು ನಿಲ್ಲದಂತೆ ಹೊರ ಹಾಕುವಂತೆ ವ್ಯವಸ್ಥೆಮಾಡಿ ಬಸಿಗಾಲುವೆಗಳನ್ನು ನಿರ್ಮಿಸುವುದು, ಸಮಪಾತಳ ಒಡ್ಡು ನಾಶಮಾಡದೇ ಅದರ ಉಪುಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಹಿರಿಯ ತಾಂತ್ರಿಕ ಅಧಿಕಾರಿ (ಮಣ್ಣು ವಿಜ್ಞಾನ) ಫರ್ಜಾನಾ ಎಮ್.ಕೆ ಅವರು ಮಾತನಾಡಿ, ತಾಂತ್ರಿಕ ಕಾರ್ಯಗಾರದಲ್ಲಿ ಮಣ್ಣು ಮತ್ತು ನೀರು ಪರೀಕ್ಷೆ ಅತಿ ಅವಶ್ಯವಾಗಿರುತ್ತದೆ ಇಂದಿನ ಪರಿಸ್ಥಿತಿಯಲ್ಲಿ ಕಾರಣ ತಪ್ಪದೇ ಪರೀಕ್ಷೆ ಮಾಡಿಸಬೇಕೆಂದು ತಿಳಿಸಿದರು.
ತಾಂತ್ರಿಕ ಅಧಿಕಾರಿ ಸಂಜೀವಕುಮಾರ ಪಾಟೀಲ ಅವರು ಮಾತನಾಡಿ, ಎಲ್ಲ ರೈತ ಬಾಂಧವರು ತಮ್ಮ ಹೆಸರು, ಮೂಬೈಲ ಮತ್ತು ಊರು ಹೆಸರು ನೊಂದಾಯಿಸಬೇಕೆಂದು ತಿಳಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಮೊಬೈಲ್ ಸಂಖ್ಯೆಗೆ ಕೇಂದ್ರ ಕಾರ್ಯಚಟುವಟಿಕೆಗಳ ಮತ್ತು ಇತರೆ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ರೈತರ ಅಭಿಪ್ರಾಯ: ಪ್ರತಿ ವರ್ಷ ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರದಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ನೀಡುತ್ತಿದ್ದಾರೆ ಅದರ ಜೊತೆಗೆ ಕೇಂದ್ರದ ವಿಜ್ಞಾನಿಗಳಿಂದ ಉತ್ತಮವಾದ ಸಲಹೆಗಳನ್ನು ಪಡೆದು ಹೆಚ್ಚಿನ ಇಳುವರಿ ಮತ್ತು ಲಾಭ ಪಡೆಯಬೇಕು ಎಂದರು.
ತಾಂತ್ರಿಕ ಅಧಿಕಾರಿ (ಕ್ಷೇತ್ರ ವ್ಯವಸ್ಥಾಪಕ) ಎಮ್. ಸಿ. ಪಾಟೀಲ್ ಅವರು ಕಾರ್ಯಕ್ರಮದ ನೀರೂಪಣೆಯನ್ನು ನಡೆಸಿಕೊಟ್ಟುರು ಮತ್ತು ಕೊನೆಯದಾಗಿ ತಾಂತ್ರಿಕ ಅಧಿಕಾರಿ (ಗಣಕಯಂತ್ರ) ಸಂಜೀವಕುಮಾರ ಪಾಟೀಲ ವಂದಿಸಿದರು. ಸುಮರು 110 ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿಯ ಲಾಭ ಪಡೆದರು ಮತ್ತು ಸಾಲಿನಲ್ಲಿ ನಿಂತು ತೊಗರಿ ಜಿಆರ್‍ಜಿ-152 &ಚಿmಠಿ; 811 ಹಾಗೂ ಹೆಸರು ಬಿಜಿಎಸ್-9 ನ್ನು ಜೇವರ್ಗಿ ಸುತ್ತಮುತ್ತಲಿನ ಹಳ್ಳಿಗಳ ರೈತರು ಹಾಗೂ ಸಿಂದಗಿ, ಮುದ್ದೇಬಿಹಾಳ, ವಿಯಪುರ ಮತ್ತು ಲಿಂಗಸುಗೂರು ರೈತರು ಟೋಕನ್ ಪಡೆದು ಬೀವಜವನ್ನು ಖರಿದಿಸಿದರು.