ಹಮ್ ದೋ ಹಮಾರೆ ಬಾರಾ ಚಲನಚಿತ್ರ ನಿಷೇಧಕ್ಕೆ ಆಗ್ರಹ
ಕಲಬುರಗಿ,ಮೇ 28: ಬರುವ ಜೂನ್ 7 ರಂದು ಬಿಡುಗಡೆಯಾಗಲಿರುವ ಹಮ್ ದೋ ಹಮಾರೆ ಬಾರಾ ಚಲನಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಸ್‍ಡಿಪಿಐ ಆಗ್ರಹಿಸಿದೆ.ಈ ಕುರಿತು ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಈ ಚಿತ್ರವು ಮುಸ್ಲಿಂ ಸಮುದಾಯದ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿಸುವುದು ಮತ್ತು ದ್ವೇಷವನ್ನು ಉತ್ತೇಜಿಸುತ್ತದೆ. ಚಿತ್ರದಲ್ಲಿ ಕುರಾನ್‍ನ ವಚನಗಳನ್ನು ತಪ್ಪಾಗಿ ಉಲ್ಲೇಖಿಸಿ, ಇಸ್ಲಾಮ್ ಧರ್ಮವನ್ನು ತಾಳ್ಮೆಯಿಲ್ಲದ ಧರ್ಮವೆಂದು ತೋರಿಸಲಾಗಿದೆ. ಇದರಿಂದ ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಹಿಂಸೆಯನ್ನು ಪ್ರೇರೇಪಿಸುವ ಸಾಧ್ಯತೆ ಇದೆ ಎಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಸೈಯದ ದಸ್ತಗೀರ್,ರಾಜ್ಯ ಉಪಾಧ್ಯಕ್ಷೆಸೈಯದ ಸಾದಿಯಾ,ಪದಾಧಿಕಾರಿಗಳಾದ ಅಬ್ದುಲ್ ರಹೀಮ್ ಪಟೇಲ್,ಡಾ. ರಿಜ್ವಾನ್ ಅಹಮದ್,ಸೈಯದ ಅಲೀಮ್ ಇಲಾಹಿ,ಮೊಹಮ್ಮದ್ ಮೊಹ್ಸಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.