ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿರೂ. ಹಗರಣ ಇಂಜಿನಿಯರ್‍ಆತ್ಮಹತ್ಯೆ: ಹೈಕೋರ್ಟ್ ಜಡ್ಜ್ ತನಿಖೆ ನಡೆಸಲಿ:ವಿಜಯೇಂದ್ರಒತ್ತಾಯ
ಕಲಬುರಗಿ:ಮೇ.28: ರಾಜ್ಯದ ಮಹರ್ಷಿ ವಾಲ್ಮೀಕಿಅಭಿವೃದ್ಧಿ ನಿಗಮದಲ್ಲಿ ನಡೆದಿರುವ ರೂ.85 ಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆಇಂಜಿನಿಯರ್‍ಒಬ್ಬರುಆತ್ಮಹತ್ಯೆ ಮಾಡಿಕೊಂಡಘಟನೆಕುರಿತಂತೆರಾಜ್ಯದ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಆತ್ಮಹತ್ಯೆಗೂ ಮುನ್ನಇಂಜಿನಿಯರ್‍ಡೆತ್‍ನೋಟ್‍ನಲ್ಲಿ ಕೆಲವು ಉನ್ನತ ಅಧಿಕಾರಿಗಳ ಹೆಸರು ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿಯಿದೆ. ಹಾಗಾಗಿ, ಘಟನೆಗೆ ಸಂಬಂಧಿಸಿದಂತೆ ಸಚಿವ ನಾಗೇಂದ್ರಕೂಡಲೇತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದುತಾಕೀತು ಮಾಡಿದರು.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮಾತನಾಡುವಕಾಂಗ್ರೆಸ್ ಸರಕಾರ ಈಗ ಮತ್ತೊಮ್ಮೆಎಡವಿದೆ.ಕಾಂಗ್ರೆಸ್‍ಭ್ರμÁ್ಟಚಾರದ ಪಿತಾಮಹಎಂಬುದುಇದರಿಂದಪುನಃ ಸಾಬೀತಾಗಿದೆ.ಭ್ರμÁ್ಟಚಾರಕಾಂಗ್ರೆಸ್ ಪಕ್ಷದ ಪಾಪದ ಕೂಸು.ಇದೆಲ್ಲವನ್ನೂ ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಸಚಿವ ನಾಗೇಂದ್ರಅವರನ್ನು ಮಂತ್ರಿಮಂಡಲದಿಂದಕೈಬಿಡದೆ ಹೋದರೆರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆಎಂದು ವಿಜಯೇಂದ್ರಎಚ್ಚರಿಕೆ ನೀಡಿದರು.
ಸಾಧನೆ ಶೂನ್ಯ
ರಾಜ್ಯದಲ್ಲಿಕಾಂಗ್ರೆಸ್‍ಸರಕಾರ ಬಂದುಒಂದು ವರ್ಷವಾದರೂಅಭಿವೃದ್ಧಿ ಮಾತ್ರ ಶೂನ್ಯಎಂದು ಟೀಕಿಸಿದ ವಿಜಯೇಂದ್ರ, ಸರಕಾರದಒಂದು ವರ್ಷದ ಹನಿಮೂನ್ ಸಮಯ ಮುಗಿದಿದೆ. ಜನಸಾಮಾನ್ಯರು ಮಾತಾಡಿಕೊಳ್ಳುತ್ತಿರುವ ಪ್ರಕಾರಅಭಿವೃದ್ಧಿಅನ್ನೊದು ಸಂಪೂರ್ಣವಾಗಿ ಸ್ಥಗಿತಗೊಂಡಿದೆಎಂದರು.
ಮುಖ್ಯಮಂತ್ರಿಗಳು ಸೇರಿದಂತೆಯಾವುದೇಇಲಾಖೆಯ ಸಚಿವರುಈವರೆಗೆಯಾವುದೇಗುದ್ದಲಿಪೂಜೆ, ಶಂಕುಸ್ಥಾಪನೆ ನೆರವೇರಿಸಿಲ್ಲ. ಭೀಕರ ಬರದಿಂದ ತತ್ತರಿಸಿದ ರಾಜ್ಯಕ್ಕೆಕೇಂದ್ರ ಸರಕಾರಅನುದಾನಕೊಟ್ಟಿಲ್ಲಎಂದು ಬೊಬ್ಬೆ ಹೊಡೆದರು.ಈಗ ಕೇಂದ್ರಅನುದಾನ ನೀಡಿದರೂಅದನ್ನುರೈತರಿಗೆ ಹಂಚಿಕೆ ಮಾಡುವ ಕೆಲಸವನ್ನುರಾಜ್ಯ ಸರಕಾರ ಮಾಡುತ್ತಿಲ್ಲಎಂದುಅಸಮಾಧಾನ ವ್ಯಕ್ತಪಡಿಸಿದರು.
ಕಟಿಂಗ್‍ಖರ್ಚುಕೊಡ್ತೇವೆ
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪಅವರ ಹೇರ್‍ಸ್ಟೈಲ್‍ಕುರಿತು ಪ್ರಸ್ತಾಪಿಸಿದ ವಿಜಯೇಂದ್ರ, ಅವರಿಗೆ ಪ್ರತಿ ತಿಂಗಳು ಕಟಿಂಗ್ ಮಾಡಿಕೊಳ್ಳಲಿ ಬಿಜೆಪಿ ಕಾರ್ಯಕರ್ತರಿಂದಲೇ ಬೇಕಾದರೆ ಹಣ ಹೊಂದಿಸಿಕೊಡುವುದಾಗಿ ಲೇವಡಿ ಮಾಡಿದರು.
ಒಬ್ಬ ಶಿಕ್ಷಣ ಸಚಿವರಾಗಿಅವರು ಹೇಗಿರಬೇಕುಎಂಬುದನ್ನುದಾವಣಗೆರೆಯಲ್ಲಿ ಸ್ವತಃ ಶಿಕ್ಷಕರೇ ಪ್ರಸ್ತಾಪಿಸಿದ್ದಾರೆ.ಹೀಗಾಗಿ, ಇನ್ನಾದರೂ ಮಧು ಬಂಗಾರಪ್ಪಅರ್ಥ ಮಾಡಿಕೊಳ್ಳಬೇಕು ಎಂದು ಸೂಚ್ಯವಾಗಿ ನುಡಿದರು.
ಪ್ರಜ್ವಲ್ ಹೇಳಿಕೆಗೆ ಸ್ವಾಗತ
ಹಾಸನ ಸಂಸದಪ್ರಜ್ವಲ್‍ರೇವಣ್ಣಮೇ 31ರಂದುರಾಜ್ಯಕ್ಕೆ ಆಗಮಿಸುವ ಕುರಿತು ವಿಡಿಯೊ ಮೂಲಕ ಹೇಳಿಕೆ ನೀಡಿರುವುದನ್ನು ಬಿ.ವೈ. ವಿಜಯೇಂದ್ರ ಸ್ವಾಗತಿಸಿದರು.
ಡಿಕೆಶಿ ಇವಿಎಂ ಹೇಳಿಕೆಗೆ ವ್ಯಂಗ್ಯ
ಈ ಬಾರಿ ಲೋಕಸಭಾಚುನಾವಣೆಯಲ್ಲಿಬಿಜೆಪಿ ಗೆದ್ದರೆಅದಕ್ಕೆಇವಿಎಂ ದೋಷವೇಕಾರಣ ಎಂಬ ಉಪಮುಖ್ಯಮಂತ್ರಿಡಿ.ಕೆ.ಶಿ ಹೇಳಿಕೆಗೆ ವಿಜಯೇಂದ್ರವ್ಯಂಗ್ಯದಧಾಟಿಯಲ್ಲಿತಿರುಗೇಟು ನೀಡಿದರು.
ಚುನಾವಣೆ ಫಲಿತಾಂಶ ಬಂದಮೇಲೆ ಮತ್ತೆಸಿಎಂ ಮತ್ತು ಡಿಸಿಎಂ ಇದೇಹೇಳಿಕೆ ಪುನರಾವರ್ತನೆÉ ಮಾಡುತ್ತಾರೆ.ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿಕಾಂಗ್ರೆಸ್‍ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆಎಂದುಕೊಂಡಿದ್ದಾರೆ.ಆದರೆಮುಂದಿನ ನಾಲ್ಕೈದು ದಿನದಲ್ಲಿಕಾಂಗ್ರೆಸ್‍ಗೆ ನಿರಾಸೆಯಾಗೋದುಖಚಿತಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿಗೃಹಸಚಿವರುಇದ್ದಾರಾ?
ರಾಜ್ಯದಕಾನೂನು ಸುವ್ಯವಸ್ಥೆಕುರಿತುಇಡೀದೇಶದಲ್ಲಿಚರ್ಚೆ ನಡೆಯುತ್ತಿದೆ. ಚನ್ನಗಿರಿಯಲ್ಲಿ ನಡೆದಘಟನೆ ಪೆÇಲೀಸರಿಗೆ ಪೆÇಲೀಸರೇರಕ್ಷಣೆಕೊಡಬೇಕಾದ ಪರಿಸ್ಥಿತಿ ಸೃಷ್ಟಿಸಿದೆ.ಚನ್ನಗಿರಿಯಲ್ಲಿಮಟ್ಕಾಗೆ ಸಂಬಂಧಿಸಿದಂತೆ ಘಟನೆ ನಡೆದಿದೆ.ಅರೆಸ್ಟ್‍ಆಗಿದ್ದ ವ್ಯಕ್ತಿ ಪೊಲೀಸ್‍ಠಾಣೆಯಲ್ಲಿ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಾವಿರಾರುಜನರುಠಾಣೆಗೆ ನುಗ್ಗಿ ಪೆÇಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.ಇದೆಲ್ಲವನ್ನೂ ನೋಡುತ್ತಿದ್ದರೆರಾಜ್ಯದಕಾನೂನು ಸುವ್ಯವಸ್ಥೆಎಲ್ಲಿಗೆ ಬಂದುತಲುಪಿದೆಎಂಬುದರಅಂದಾಜು ಲಭಿಸುತ್ತದೆ.ಈ ರಾಜ್ಯದಲ್ಲಿ ಗೃಹ ಸಚಿವರುಇದ್ದಾರೋಇಲ್ಲವೋಎನ್ನುವಅನುಮಾನಕಾಡುತ್ತಿದೆಆತಂಕ ವ್ಯಕ್ತಪಡಿಸಿದರು.