ರೈತರ ಅನುಕೂಲಕ್ಕೆ ಸಿಂಗಟಾಲೂರು ಏತಾ ನೀರಾವರಿಗೆ ಆದ್ಯತೆ: ಪ್ರತಾಪ್ ರೆಡ್ಡಿ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮೇ.28  ತಾಲೂಕು ಸೇರಿದಂತೆ ಕೂಡ್ಲಿಗಿ ಕೊಟ್ಟೂರು ಭಾಗಕ್ಕೆ ರೈತರಿಗೆ ಅನುಕೂಲ ಮಾಡಲು ಸಿಂಗಟಲೂರು ಏತ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುವುದು ಎಂದು ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎನ್ ಪ್ರತಾಪ್ ರೆಡ್ಡಿ ಹೇಳಿದರು.
 ಪಟ್ಟಣದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮತಯಾಚಿಸಿ ಮಾತನಾಡಿದರು. ಈಶಾನ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಅಮ್ ಆದ್ಮಿ ಮತ್ತು ಸಿ ಪಿ ಎಂ ಪಕ್ಷ ಬೆಂಬಲ ಘೋಷಿಸಿದೆ.  ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಾಗ ನನಗೆ ಬೆಂಬಲಿಸಿ ಮತ ನೀಡಿದ್ದಾರೆ. ಕೆಲವು ಕುಲಗೆಟ್ಟ ಮತಗಳಿಂದಾಗಿ ಸ್ವಲ್ಪದರಲ್ಲಿ ಪರಾಭವ ಕೊಂಡಿರುವೆ. ಆದರೂ ನಾನು ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಪದವೀಧರೊಂದಿಗೆ ಸಂಪರ್ಕ ಹೊಂದಿರುವೆ. ಈ ಬಾರಿ ನನ್ನ ಗೆಲುವು ನಿಶ್ಚಿತ ಗೆದ್ದ ಮೊದಲ ನನ್ನ ಕೆಲಸ ನೀರಾವರಿಗೆ ಸಂಭಂದಪಟ್ಟಿದ್ದು. ಕೆರೆಗಳು ಸೇರಿದಂತೆ ನೀರಾವರಿ  ಗೆ ಒತ್ತು ನೀಡಿದರೆ ಅಂತರ್ಜಲ ಹೆಚ್ಚಾಗುತ್ತದೆ. ರೈತರ ಪಂಪ್ ಸೆಟ್ ಗಳಿಗೆ ಅನುಕೂಲವಾಗುತ್ತದೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದಕ್ಕೆ     ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಉಚ್ಚಾಟಿಸಿದರು. ಕಾಂಗ್ರೆಸ್ ಪಕ್ಷ ಯಾವಾಗಲೂ ಇದನ್ನೇ ಮುಂದುವರಿಸಿಕೊಂಡು ಬಂದಿದೆ. ಅವರ ಉಚ್ಚಾಟನೆಗೆ ನಾನು ಜಗ್ಗುವುದಿಲ್ಲ. . ಚುನಾವಣೆಯಲ್ಲಿ ನನಗೆ ಬೆಂಬಲಿಸಿ ಪ್ರಥಮ ಪ್ರಾಶಸ್ತ್ಯ ಮತ ನೀಡಿದರೆ ಕ್ಷೇತ್ರದ ಶೈಕ್ಷಣಿಕ ಮತ್ತು ಔದ್ಯೋಗಿಕ ಸೇವೆ ಮಾಡುತ್ತೇನೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ  ಮಾಡುವ ಮೂಲಕ ಉದ್ಯೋಗವನ್ನು ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಸಪ ಅಧ್ಯಕ್ಷ  ನಿಷ್ಟಿ ರುದ್ರಪ್ಪ, ಮುಖಂಡರಾದ ಕೇಶವ ರೆಡ್ಡಿ ಲಿಂಗರಾಜ್, ಇದ್ದರು