ಸಾಲಕ್ಕೆ ಜಮೆಯಾದ ವಿದವಾ ವೇತನದ ಹಣ ಅಕೌಂಟಿಗೆ ವಾಪಸ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.28: ತಾಲೂಕಿನ ಮೋಕಾ ಗ್ರಾಮದ ವಿಧವೆ ಮಾರೆಕ್ಕ ಅವರಿಗೆ ಬ್ಯಾಂಕಿನಿಂದ ಸಾಲದ ಖಾತೆಗೆ ಜಮೆ ಮಾಡಿಕೊಂಡಿದ್ದ ಹಣವನ್ನು ಹಿಂದಿರಿಗಿಸಿ ಕೊಡುವಲ್ಲಿ ರೈತ ಸಂಘ ಹೋರಾಟ ಮಾಡಿ ಯಶ ಕಂಡಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ, ಸ್ವತಃ ಮುಖ್ಯ ಮಂತ್ರಿಗಳು ಸಹ, ಸರ್ಕಾರ ರೈತರಿಗೆ ನೀಡುವ ಬರಪರಿಹಾರ, ವಿಧವಾ, ವೃದ್ಧಾಪ್ಯ, ಭಾಗ್ಯಲಕ್ಷ್ಮಿ ಮೊದಲಾದ  ಸೌಲಭ್ಯಗಳ ಹಣವನ್ನು ರೈತರ  ಸಾಲದ ಖಾತೆಗೆ ಜಮಾ ಮಾಡಬಾರದೆಂದು ಸೂಚಿಸಿದ್ದರೂ, ಬ್ಯಾಂಕುಗಳು ಮಾತ್ರ ತಮ್ಮ ಚಾಳಿ ಬಿಟ್ಟಿರಲಿಲ್ಲ.
ರೈತರ ಖಾತೆಗೆ ಡಿಬಿಟಿ ಮೂಲಕ ಬಂದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದೇ ರೀತಿ ಮೊಕಾದ ಯೂನಿಯನ್ ಬ್ಯಾಂಕಿನಲ್ಲಿ ಖಾತೆ ಇರುವ ಮಾರೆಕ್ಕನಿಗೆ ಬಂದ ಐದು ತಿಂಗಳ ವಿಧವಾ ವೇತನವನ್ನು ಬ್ಯಾಂಕ್ ಸಾಲದ ಖಾತೆಗೆ ಜಮೆ ಮಾಡಿತ್ತು.
ಉದನ್ನು ತಿಳಿದು ರೈತ ಸಂಘದ ಆರ್.ಮಾಧವರೆಡ್ಡಿ ಮತ್ತವರ ತಂಡ ಮಾರೆಕ್ಕಳೊಂದಿಗೆ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದ್ದಕ್ಕಾಗಿ. ಬ್ಯಾಂಕ್ ಮುರಿದುಕೊಂಡಿದ್ದ ಹಣವನ್ನು ಮಾರೆಕ್ಕಳ ಉಳಿತಾಯ ಖಾತೆಗೆ  ಹಣವನ್ನು ಹಿಂದುರಿಗಿಸಿದೆ ಎಂದು ಸಾಮಾಜಿಕ ಹೋರಾಟಗಾರ ಶ್ರೀಶೈಲ ಆಲದಹಳ್ಳಿ ಹೇಳಿದ್ದಾರೆ.
ಮೋಕಾ ಗ್ರಾಮಾದ ಕಾರ್ಪೊರೇಷನ್ ಬ್ಯಾಂಕ್ ವಿಧವಾ ವೇತನವನ್ನು ಸಾಲಕ್ಕೆ ಜಮಾ ಮಾಡಿಕೊಂಡಿರುವುದನ್ನ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘವು ಬ್ಯಾಂಕಿನ ಎದುರು ಪ್ರತಿಭಟನೆ ನಡೆಸಿ ಸಾಲಕ್ಕೆ ಜಮಾ ಮಾಡಿದ ಮಾರೆಕ್ಕ ಇವರ ಖಾತೆಗೆ ವಾಪಸು ಹಾಕುವಂತೆ ಒತ್ತಾಯಿಸಲಾಯಿತು..