ಜಗಳೂರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಮರೇನಹಳ್ಳಿ ಟಿ.ಬಸವರಾಜ್

ಸಂಜೆವಾಣಿ ವಾರ್ತೆ
ಜಗಳೂರು.ಮೇ.೨೮; ತಾಲೂಕಿನ ಕೂಗಳತೆ ದೂರದಲ್ಲಿರುವ ಕುಗ್ರಾಮ ವಾದ ಮರೇನಹಳ್ಳಿಯ ಟಿ.ಬಸವರಾಜ್ ಬಡ ಕುಟುಂಬದಿಂದ ಜನಿಸಿದ ಕಷ್ಟಪಟ್ಟು ಓದಿ ಬಿ.ಎ ಎಲ್.ಎಲ್.ಬಿ ಕಾನೂನು ಪದವಿ ಪಡೆದು ವಕೀಲ ವೃತ್ತಿಯನ್ನ ಮಾಡುತ್ತಲೇ ತಮ್ಮ ಜಮೀನಿನಲ್ಲಿ ರೇಷ್ಮೆ ಬೆಳೆ.ವ್ಯವಸಾಯ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಇವರು ವೃತ್ತಿ ಇದರ ಜೊತೆಯಲ್ಲಿ ಸಾಮಾಜಿಕ ಸೇವೆ. ದೀನ ದಲಿತರ ಬಡವರ .ನೊಂದವರ ನೆರವಗಾಗಿ ಹೋರಾಟ ಮಾಡು ತ್ತಲೇ ಜಗಲೂರು ತಾಲೂಕಿನ ಅನೇಕ ಸರ್ವ ಜನಾಂಗದ ಜನರ ಆತ್ಮ ವಿಶ್ವಾಸ ಗಳಿಸಿ 2018 ರಲ್ಲಿ ನಡೆದ ತಾಲೂಕು ಪಂಚಾಯಿತಿ ಚುನಾವಣೆ ಯಲ್ಲಿ ಯಾವುದೇ ರಾಷ್ಟ್ರೀಯ ಪಕ್ಷದ ಚಿಹ್ನೆಯನ್ನು ಬಯಸದೆ ಪಕ್ಷೇತರ ಅಭ್ಯರ್ಥಿಯಾಗಿ ದೊಣ್ಣೆಹಳ್ಳಿ ಕ್ಷೇತ್ರಕ್ಕೆ ಸ್ಪರ್ಧಿಸಿ ಗೆದ್ದು ಬಿಟ್ಟರು.!ಇಂಥ ಪ್ರಸ್ತುತ ದಿನಮಾನಗಳಲ್ಲಿ ಚುನಾವಣೆ ಮಾಡುವು ದೆಂದ ರೆ ಅಷ್ಟು ಸುಲಭದ ಮಾತಲ್ಲ ಸಾಕಷ್ಟು ಹಣ ಬೇಕು ಅಂತ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಜನಸೇವೆ ಮಾಡುವುದೆಂದರೆ ಸುಮ್ಮನಲ್ಲ ಸುಮಾರು ಐದು ವರ್ಷಗಳ ಕಾಲ ಜನಸೇವೆ ಮಾಡುತ್ತಲೇ ರಾಜಕಾರಣ ಜೊತೆಯಲಿ ವಕೀಲ ವೃತ್ತಿಯನ್ನು ನಿರ್ಲಕ್ಷೆ ಮಾಡಲಿಲ್ಲ.ಪ್ರಜ್ಞಾವಂತ ಯುವಕರ ಜೊತೆಗೂಡಿ ಕರ್ನಾಟಕ ರಾಜ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಲ ಜಾರಕಿ ಹೊಳಿ ಇವರ ” ಮಾನವ ಬಂದುತ್ವ ವೇದಿಕೆ” ಯ ಮಾರ್ಗ ದರ್ಶನದಲ್ಲಿ ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ಅವರ ಜಯಂತಿಗ ಳನ್ನು ಮಾಡುವ ಮೂಲಕ ಅವರು ತಾ.ಪಂ.ಮಾಜಿ ಸದಸ್ಯ ರಾಗಿ ಹಾಗೂ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ರಾಗಿ ವೃತ್ತಿಯಲ್ಲಿ ನ್ಯಾಯವಾದಿ ಯಾಗಿ ಹೋರಾಟ ಮಾಡುತ್ತಾ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸೇರಿದಂತೆ ಸರ್ವ ಜನಾಂಗದ ಜನರಿಗೆ ಅವರ ಹೋರಾಟಗಳು.ಜೀವನ ಚರಿತ್ರೆ ಯನ್ನು ತಿಳಿಸುವ ಮೂಲಕ ತನ್ನದೇ ಆದ ಚಾಪು ಮೂಡಿಸಿದ್ದಾರೆ.ಪ್ರಸ್ತುತ ತಾಲೂಕಿನ ಎಲ್ಲಾ ನ್ಯಾಯವಾದಿಗಳ ಸಹಕಾರ ದೊಂದಿ ಗೆ ಸರ್ವಾನುಮತದಿಂದ ಮರೇನಹಳ್ಳಿ ಟಿ ಬಸವರಾಜ್ ಅವರ ನ್ನು ನೂತನವಾಗಿ ವಕೀಲ ಸಂಘದ ಅಧ್ಯ ಕ್ಷರಾಗಿ ಅವಿರೋಧ ವಾಗಿ ಆಯ್ಕೆ ಮಾಡಿದ್ದು ನನಗೆ ತುಂಬಾ ಸಂತೋಷವಾಗಿದೆ ನಾನು ತಾಲೂಕಿನಲ್ಲಿ ಕಾನೂನಾತ್ಮಕ ಸಲಹೆ,ಸಹಕಾರ ದೊಂದಿ ಗೆ ಹೆಚ್ಚುತ್ತಿರುವ ನ್ಯಾಯಾಲಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸದಾ ಸನ್ನದ್ಧನಾಗಿ ಪ್ರಾಮಾಣಿಕವಾಗಿ ವಕೀಲರ ಸಾರ್ವಜನಿಕರ ಸಮಸ್ಯೆಗಳನ್ನು ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತೇನೆ ತಾಲೂಕಿನ ವಕೀಲರ ಸಂಘ ಸಾರ್ವಜನಿಕ ರು ಸಹಕರಿಸ ಬೇಕು ಎನ್ನುತ್ತಾರೆ ಟಿ.ಬಸವರಾಜ್.