ಸ್ವಾಭಿಮಾನ…*

*ಉರಿ ಜ್ವಾಲೆ ಎದ್ದಿತ್ತು*
*ಹೊಟ್ಟೆಯಲಿ ಹಸಿವಿತ್ತು*
*ಹೊಟ್ಟೆ ತುಂಬಿದವರು ಮೇಲೆ*
*ಅಧಿಕವಾಗಿತ್ತು*
*ಆದರೂ ಕೇಳಿ ಪಡೆಯಲು*
*ಸ್ವಾಭಿಮಾನ ಅಡ್ಡ ಬರುತ್ತಿತ್ತು…*
*ಚಪ್ಪಲಿ ಹರಿದಿತ್ತು*
*ಕಾಲಲ್ಲಿ ಮುಳ್ಳು ಇತ್ತು*
*ನೆತ್ತಿಯ ಮೇಲೆ ಚೂರಿ ತೂಗುತ್ತಿತ್ತು*
*ಆದರೂ ಕೇಳಿ ಪಡೆಯಲು*
*ಸ್ವಾಭಿಮಾನ ಅಡ್ಡ ಬರುತ್ತಿತ್ತು….*
*ಮಳೆ ನೀರು ಅಭಿಷೇಕ ಮಾಡಿತ್ತು*
*ಚಳಿಯ ನಡುಕ ಹಚ್ಚಿತ್ತು*
*ಮುಂದೆ ಬಿಸಿಲತಾಪ ಕಾದಿತ್ತು*
*ನೆರಳನ್ನು ಕೇಳಲು*
*ಸ್ವಾಭಿಮಾನ ಅಡ್ಡ ಬರುತ್ತಿತ್ತು….*
*ಬಳಲಿ ಬಾಯಾರಿಕೆ ಆಗಿತ್ತು*
*ನೀರಿಗಾಗಿ ಒದ್ದಾಆಟ ನಡೆದಿತ್ತು*
*ಸಿಗದಿದ್ದ ದ್ರಾಕ್ಷಿ ಹುಳಿ ಎನಿಸಿತ್ತು*
*ಆಸೆ ಅತಿಯಾಗಿ ಒಳಮನಸ್ಸು*
*ಒಡಲು ಪ್ರಕೋಪಿಸುತಿತ್ತು*
*ಆದರೂ ಸ್ವಾಭಿಮಾನ ಅಡ್ಡ ಬರುತ್ತಿತ್ತು…*
*ಶ್ರೀಮತಿ.ಡಾ.ವ್ಹಿ.ವ್ಹಿ.ಹಿರೇಮಠ  ಅಧ್ಯಕ್ಷರು ಅಶ್ವಿನಿ ಪ್ರಕಾಶನ ಗದಗ