ಹಲ್ಲೆ ಖಂಡಿಸಿ ಮನವಿ
ನವಲಗುಂದ,ಮೇ.28: ವೃತ್ತಿಪರ ಛಾಯಾಚಿತ್ರ ಗ್ರಾಹಕರ ಮೇಲಿನ ಹಲ್ಲೆ ಖಂಡಿಸಿ ಹಾಗೂ ವೃತ್ತಿಪರರ ರಕ್ಷಣೆ ಕೋರಿ ನವಲಗುಂದ ತಾಲೂಕ ಫೆÇೀಟೋ ಹಾಗೂ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಅವರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಕಚೇರಿ ಪ್ರ.ದ. ಸಹಾಯಕ ನಾಗರಾಜ ಕರಿಸಕ್ರಣ್ಣವರ ಮೂಲಕ ಗೃಹಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ಬೆಂಗಳೂರಿನ ಕಾರ್ಯನಿರತ ಛಾಯಾಚಿತ್ರಗ್ರಾಹಕರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಛಾಯಾಗ್ರಾಹಕನ ಕ್ಯಾಮರಾ ಸಲಕರಣೆಗಳನ್ನು ನಾಶ ಮಾಡಿರುತ್ತಾರೆ. ಇಂತಹ ಘಟನೆಯು ಎಲ್ಲ ವೃತ್ತಿಪರ ಛಾಯಾಚಿತ್ರಗ್ರಾಹಕರ ಮೇಲೆ ತೀವ್ರತರವಾದ ಆಘಾತ ಉಂಟಾಗಿ ಛಾಯಾಗ್ರಾಹಕರ ಕುಟುಂಬಗಳು ತುಂಬಾ ನೋವನ್ನು ಅನುಭವಿಸುವಂತಾಗಿದೆ.
ಇತ್ತೀಚೆಗೆ ಸಾಕಷ್ಟು ಕಲ್ಯಾಣ ಮಂಟಪಗಳಲ್ಲಿ ಕ್ಯಾಮರಾ ಪರಿಕರಗಳ ಕಳ್ಳತನ, ಸ್ಟುಡಿಯೋಗಳ ಕಳ್ಳತನ, ಛಾಯಾಗ್ರಾಹಕರನ್ನು ರಸ್ತೆಗಳಲ್ಲಿ ತಡೆದು ಕ್ಯಾಮರಾ ಪರಿಕರಗಳನ್ನು ಕಿತ್ತುಕೊಂಡು ಹೋದಂತ ಅನೇಕ ಪ್ರಕರಣಗಳು ನಡೆಯುತ್ತಲೆ ಇವೆ.
ಇತ್ತೀಚೆಗೆ ಕ್ಯಾಮರಾ ಉದ್ಯಮ ಡಿಜಟಲೀಕರಣವಾದ ಮೇಲೆ ಕ್ಯಾಮರಾ ಪರಿಕರಗಳ ಬೆಲೆಯೂ ಹೆಚ್ಚಾಗಿದ್ದು, ಕ್ಯಾಮರಾ ಪರಿಕರಗಳ ಮೇಲೆ ಕಳ್ಳಕಾಕರ ಕಣ್ಣು ನಮ್ಮ ವೃತ್ತಿಪರರ ಮೇಲೆ ಬಿದ್ದಂತಿವೆ. ಕಳ್ಳಕಾಕರಿಂದ ನಮ್ಮ ಛಾಯಾಗ್ರಾಹಕರನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.
ಶಿವಾಜಿನಗರದಲ್ಲಿ ನಡೆದ ಅಮಾನುಷ್ಯ ಕೃತ್ಯವನ್ನು ಎಲ್ಲ ಛಾಯಾಗ್ರಾಹಕರು ಖಂಡಿಸುತ್ತೇವೆ. ಈ ಘಟನೆಯಲ್ಲಿ ತೊಂದರೆಗೊಂಡ ಛಾಯಾಗ್ರಾಹಕರಿಗೆ ನ್ಯಾಯವನ್ನು ಕೊಡಿಸಿಕೊಡಬೇಕೆಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಸುರೇಶ್ ಬಾಂಡಗೆ, ಕಾರ್ಯದರ್ಶಿ ನಾಗೇಶ್ ದನ್ಮರು, ಸದಸ್ಯರಾದ ಸಿದ್ದು ಬಸಾಪುರ, ಮಂಜುನಾಥ್ ಬಿಜಾಪುರ್, ಮಂಜುನಾಥ್ ಛಲವಾದಿ, ರಾಘವೇಂದ್ರ ರಾಯಬಾಗಿ, ಅಂದನಯ್ಯ ಹಿರೇಮಠ, ಶಂಭು ಬಿರೊಳ್ಳಿ, ಆನಂದ್ ಕಾಳೆ, ಮುತ್ತು ಪವಾರ್, ಜಾವಿದ್ ನದಾಫ್, ಜನಾರ್ಧನ್ ಬನ್ನಿಕೊಪ್ಪ, ಯಮನೂರು ವಡ್ಡರ್, ಸದಾಶಿವ ನಾಗನೂರು, ಶಿವು ಪೂಜಾರ್, ಮಂಜು ಚಲವಾದಿ, ರಾಕೇಶ್ ಕರಿಗೌಡ, ರಾಚೋಟಿ ಕಾತ್ರಾಳ, ಸಚಿನ್ ಗೊರ್ಲಹೊಸೂರು, ಕುಮಾರ ಪತ್ತಾರ, ಚೇತನ್ ಉಣಕಲ್ ಇತರರು ಇದ್ದರು.