ಪದಾಧಿಕಾರಿಗಳ ಆಯ್ಕೆ
ಚನ್ನಮ್ಮನ ಕಿತ್ತೂರ,ಮೇ.28: ಲಿಂಗಾಯತ ಪಂಚಮಸಾಲಿ ಸಮಾಜ ಗಟ್ಟಿಗೊಳಿಸಲು ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜೀ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಹಕಾರಿ ಸಕ್ಕರೆ ಸಂಸ್ಥೆಗಳ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ರಾಜು ಕುಡಸೋಮಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಸವದತ್ತಿ ಸಂಜುಕುಮಾರ ನರಗುಂದ, ಜಿಲ್ಲಾ ಕಾರ್ಯದರ್ಶಿಯಾಗಿ ಚಿಕ್ಕಬಾಗೇವಾಡಿ ಸುಧೀರಗೌಡ ಪಾಟೀಲ, ಜಿಲ್ಲಾ ನಗರಘಟಕದ ಕಾರ್ಯದರ್ಶಿಯನ್ನಾಗಿ ಬಸವರಾಜ ಕೊಟ್ರಶೆಟ್ಟಿ, ಆಯ್ಕೆ ಮಾಡಿದ್ದು ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಸಕ ವಿಜಯಾನಂದ ಕಾಶಪ್ಪನವರ, ಹಿರಿಯ ಮುಖಂಡ ಎಂ.ಬಿ.ಪಾಟೀಲ ಇವರುಗಳ ಒಪ್ಪಿಗೆಯ ಮೇರೆಗೆ ಆದೇಶ ಹೊರಡಿಸಿ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಗಿಯೆಂದು ತಿಳಿಸಿದರು.