ದೃಶ್ಯಕಲಾ ಮಹಾ‌ವಿದ್ಯಾಲಯದಲ್ಲಿ ಭಿತ್ತಿ ಚಿತ್ರಕಲಾ ಶಿಬಿರಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ.,ಮೇ.28; ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ  ಎನ್ ಎಸ್ ಎಸ್ ಘಟಕ, ದಾ ವಿ ವಿಯ ಎನ್ ಎಸ್ ಎಸ್ ಘಟಕದ ಸಹಯೋಗದಲ್ಲಿ 2023-24ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರ”ಭಿತ್ತಿ ಚಿತ್ರ ಕಲಾ ಶಿಬಿರ”. ಆಯೋಜಿಸಲಾಗಿತ್ತು. ಶಿಬಿರವನ್ನು ದಾವಣಗೆರೆ ವಿ ವಿ ಯ ಕುಲಸಚಿವರಾದ ಡಾ.ಯು ಎಸ್ ಮಹಾಬಲೇಶ್ವರ ರವರು ಎನ್ ಎಸ್ ಎಸ್ ಘಟಕ ಆಯ್ಕೆ ಮಾಡಿದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿನ ಕಾಂಪೌಂಡ್ ಗೋಡೆಯ ಮೇಲೆ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕಲೆ ಇಲ್ಲದೇ ಜೇವನವಿಲ್ಲ,ಎಲ್ಲರ ಬದುಕೂ ಸಂತೋಷ, ನೆಮ್ಮದಿ ಪಡೆದುಕೊಳ್ಳುವುದು ಅವರವರ ಬದುಕಿನಲ್ಲಿ ‘ಕಲೆಗೆ ಕೊಡುವ ಪ್ರಾಮುಖ್ಯತೆ ‘ಯಿಂದ.ಇಂದು ದಾ ವಿ ವಿಯ ಎನ್ ಎಸ್ ಎಸ್ ಘಟಕ, ದೃಶ್ಯ ಕಲಾ ಕಾಲೇಜಿನ ಎನ್ ಎಸ್ ಎಸ್ ಘಟಕದ ಸಹಯೋಗದಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ “ಭಿತ್ತಿ ಚಿತ್ರ ಕಲಾ ಶಿಬಿರ”ಆಯೋಜಿಸಿರುವುದು ಸಂತಸದ ಸಂಗತಿ. ಇಲ್ಲಿ ಮೂಡಿ ಬರುವ ಚಿತ್ತಾರಗಳು ಅರ್ಥ ಪೂರ್ಣವೂ,ಸಾರ್ವಜನಿಕರಿಗೆ ಆನಂದವುಂಟು ಮಾಡಿದೆ ಇದೇ ರೀತಿ ಉತ್ತಮ ಸಂದೇಶವನ್ನು ನೀಡುವಂಥವುಗಳೂ ಆಗಿರಲಿ. ಈ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ’ಎಂದು ಹಾರೈಸಿದರು.