ರಾಜ್ಯಗಳ ರಾಜ್ಯಪಾಲರಾದ ಪೊನ್ ರಾಧಾ ಕೃಷ್ಣನ್ ರವರು ದೇವರ ದರ್ಶನ ಪಡೆದರು
ಸಂಜೆವಾಣಿ ನ್ಯೂಸ್
ಮೇಲುಕೋಟೆ.ಮೇ.28.- ತೆಲಂಗಾಣ, ಪಾಂಡಿಚರಿ ಮತ್ತು ಜಾರ್ಕಂಡ್ ರಾಜ್ಯಗಳ ರಾಜ್ಯಪಾಲರಾದ ಪೊನ್ ರಾಧಾಕೃಷ್ಣನ್ ಸೋಮವಾರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಬೆಳಿಗ್ಗೆ 11ಗಂಟೆಗೆ ಬೆಂಗಳೂರಿನಿಂದ ದೇವಾಲಯಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಅನೂಚಾನ ಸಂಪ್ರದಾಯದಂತೆ ಪೂರ್ಣಕುಂಭಸ್ವಾಗತನೀಡಿ ಬರಮಾಡಿಕೊಳ್ಳಲಾಯಿತು.
ರಾಮಾನುಜ ಸಂಪ್ರದಾಯದ ಅನುಯಾಯಿಗಳೂ ಆದ ರಾಜ್ಯಪಾಲ ಪೊನ್ ರಾಧಾಕೃಷ್ಣನ್ ಕಚ್ಚೆಪಂಚೆ ತಿರುನಾಮಧರಿಸಿ ಭಕ್ತಿಯಿಂದ ಶ್ರೀಚೆಲುವನಾರಾಯಣಸ್ವಾಮಿ ಯದುಗಿರಿನಾಯಕಿ ಹಾಗೂ ರಾಮಾನುಜಾಚಾರ್ಯರ ದರ್ಶನ ಪಡೆದರು ದಕ್ಷಿಣ ಬದರೀಕಾಶ್ರಮ ಮೇಲುಕೋಟೆಯ ಬದರೀವೃಕ್ಷವನ್ನು ದರ್ಶನ ಮಾಡಿ ದೇವಾಲಯದ ಬಳಿ ನಾಗರಾಜಯ್ಯಂಗಾರ್‍ಸ್ವಾಮಿಗಳ ಗೋಶಾಲೆಯ ಗೋವಿಗೆ ಗೋಗ್ರಾಸ ನೀಡಿ ಲೋಕಕಲ್ಯಾಣಾರ್ಥಕ್ಕಾಗಿ ಪ್ರಾರ್ಥಿಸಿದರು.
ಮದ್ಯಾಹ್ನ ಚಿನ್ನಜೀಯರ್ ಮಠದಲ್ಲಿ ಬೋಜನಸ್ವೀಕರಿಸಿ ಕಲ್ಯಾಣಿಯ ಬಳಿ ತೋಟದಲ್ಲಿ ತುಳಸಿಗಿಡ ನೆಟ್ಟು ಮದ್ಯಾಹ್ನ 2-30 ಗಂಟೆಗೆ ಮೇಲುಕೋಟೆಯಿಂದ ನಿರ್ಗಮಿಸಿದರು ಮೇಲುಕೋಟೆಗೆ ಆಗಮಿಸಿದ ತೆಲಂಗಾಣ ರಾಜ್ಯಪಾಲರನ್ನು ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆಯನ್ನು ನುಡಿಸಿ ಶಿಷ್ಠಾಚಾರದಂತೆ ಸ್ವಾಗತಿಸಿತು.
ಪಾಂಡವಪುರ ಉಪವಿಭಾಗಾಧಿಕಾರಿ ಮಾರುತಿ ತಹಶೀಲ್ದಾರ್ ಶ್ರೇಯಸ್ ದೇವಾಲಯದ ಇಒ ಮಹೇಶ್, ಪಾರುಪತ್ತೇಗಾರಾದ ಸ್ಥಾನಾಚಾರ್ಯಶ್ರೀನಿವಾಸನರಸಿಂಹನ್ ಗುರೂಜಿ ಎಂ.ಎನ್ ಪಾರ್ಥಸಾರಥಿ ಸ್ವಾಗತಿಸಿ ದೇವಾಲಯದ ಮಾಹಿತಿಯನ್ನು ನೀಡಿದರು ಭೇಟಿಯ ಕೊನೆಯಲ್ಲಿ ದೇವಾಲಯದ ಸಂಪ್ರದಾಯದಂತೆ ರಾಜ್ಯಪಾಲ ರಾಧಾಕೃಷ್ಣನ್‍ರಿಗೆ ರಾಜಾಶೀರ್ವಾದ ಮಾಡಿ ಕಳುಹಿಸಿಕೊಡಲಾಯಿತು ಸಿಂಎಂ ಸಿಧ್ದರಾಮಯ್ಯ ಬೆಂಗಾವಲು ಪಡೆಯ ಭದ್ರತಾ ಸಿಬ್ಬಂದಿಹಾಗೂ ಪಾಂಡವಪುರ ಪೊಲೀಸರು ಭದ್ರತೆ ನೀಡಿದ್ದರು.