ಬೀಳ್ಕೊಡುಗೆ ಸಮಾರಂಭ
ನರೇಗಲ್ಲ,ಮೇ28: ಪಟ್ಟಣದ ಸೈಬರ್ ಟೆಕ್ ಕಂಪ್ಯೂಟರ್ಸ್ ಹಾಗೂ ಸಾಧನಾ ಕೋಚಿಂಗ್ ಸೆಂಟರ್ ವತಿಯಿಂದ ಸನ್ 2024-25ನೇ ಸಾಲಿನ ಬೇಸಿಗೆ ತರಬೇತಿ ಶಿಬಿರದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.
ತರಬೇತಿ ಮುಗಿಸದ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿಗಳಾದ ಕುಮಾರಿ. ಲೀಲಾ ಸಂಕನಗೌಡ್ರ ಕೋಟುಮಚಗಿ ಶಾಲೆ(91.36%) ಹಾಗೂ ಕುಮಾರಿ ಬಸಮ್ಮ ಕುರಿ ಸರಕಾರಿ ಶಾಲೆ ಹಾಲಕೆರೆ (84.96%) ಹಾಗೂ ನರೇಗಲ್ಲಿನ ಸರಕಾರಿ ಶಾಲೆಯ ಕುಮಾರ ವಿಕಾಸ ಸಂಕನಗೌಡ್ರ (81.60%): ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಾಯ್. ಸಿ. ಪಾಟೀಲ ಪ್ರಾಚಾರ್ಯರು ಎಸ್. ಎ. ಪಿ. ಯು ಕಾಲೇಜ ನರೇಗಲ್ಲ ಇವರು ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗನಾಳ ಇವರು ವಹಿಸಿದ್ದರು ಹಾಗೂ ಅತಿಥಿಗಳಾಗಿ ವೀರೇಶ ವಾಲಿ ಸರ್, ಮುತ್ತಣ ಹೊನ್ನವಾಡ, ಶರಣಯ್ಯ ಬಾಗಲತ್ತಿ, ಸಾಗರ ಕುಂಬಾರ, ಜಯಕಾಂತ ನರಗುಂದ, ಶಿಲ್ಪಾ ಜುಟ್ಟಿದ, ವಿನಯಶ್ರೀ ಪರಯ್ಯನಮಠ, ಅನ್ನಪೂರ್ಣ ಪಾಟೀಲ, ಅನುಷಾ ತಿಪ್ಪಣ್ಣವರ, ರವಿ ಬಿಸನಳ್ಳಿ ಇದ್ದರು.
ಪ್ರಸ್ತಾವಿಕ ನುಡಿಗಳನ್ನು ಎಮ್.ಎಸ್.ಹೊನ್ನವಾಡ ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸ್ನೇಹಾ ಜುಟ್ಲದ, ಸ್ವಾಗತವನ್ನು ಕುಮಾರ ತೋಟಯ್ಯ ಆರಾಧ್ಯಮಠ, ವಂದನಾರ್ಪಣೆಯನ್ನು ಕುಮಾರಿ ಸವಿತಾ ನೇರವೇರಸಿದರು. ವಿದ್ಯಾರ್ಥಿಗಳು ಇದ್ದರು.