ತುಳಸಿ-ಹೂವಿನ ತೋಟಗಳು ಮೇಲುಕೋಟೆಯಲ್ಲಿ ಹೆಚ್ಚಾಗಲಿ ಎಂದು ಸಿ.ಪಿ ರಾಧಾಕೃಷ್ಣನ್ ಆಶಿಸಿದರು
ಸಂಜೆವಾಣಿ ನ್ಯೂಸ್
ಮೇಲುಕೋಟೆ.ಮೇ.28.-ಅದಿದೈವ ಚೆಲುವನಾರಾಯಣ ಸ್ವಾಮಿಗೆ ಅರ್ಪಿಸಲು ನಿರ್ಮಿಸುತ್ತಿರುವ ತುಳಸಿ-ಹೂವಿನ ತೋಟಗಳು ಮೇಲುಕೋಟೆಯಲ್ಲಿ ಹೆಚ್ಚಾಗಲಿ ಎಂದು ತೆಲಂಗಾಣ ಪಾಂಡಿಚರಿ ಮತ್ತು ಜಾರ್ಕಂಡ್ ರಾಜ್ಯಗಳ ರಾಜ್ಯಪಾಲರಾದ (ಪೊನ್) ಸಿ.ಪಿ ರಾಧಾಕೃಷ್ಣನ್ ಆಶಿಸಿದರು. ಅವರು ಕಲ್ಯಾಣಿಯ ಸಾಲುಮಂಟಪದ ಹಿಂಭಾಗ ತುಳಸಿಯ ಗಿಡನೆಟ್ಟು ತುಳಸಿ ತೋಟದ ನಿರ್ಮಾಣಕ್ಕೆ ಶುಭ ಹಾರೈಸಿದರು.
ರಾಮಾನುಜಾ ಚಾರ್ಯರ ಕರ್ಮ ಭೂಮಿಯಾದ ಮೇಲುಕೋಟೆಯಲ್ಲಿ ಅದಿದೈವ ಚೆಲುವನಾರಾಯಣ ಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ನೆಲೆಸಿದ್ದಾರೆ. ಸ್ವಾಮಿಗೆ ಸಮರ್ಪಿಸಲು ಕಲ್ಯಾಣಿಯ ಬಳಿ ತುಳಸಿ ಮತ್ತು ಹೂವಿನ ತೋಟ ಮಾಡುತ್ತಿರುವುದು ಉತ್ತಮಬೆಳವಣಿಗೆಯಾಗಿದೆ ಇಂತಹ ಉತ್ತಮ ಕಾರ್ಯಗಳು ನಿರಂತರವಾಗಿ ನಡೆಯಲಿ ತುಳಸಿತೋಟ ಮಾಡಲು ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನಎನ್.ಎಸ್.ಎಸ್ ಘಟಕದ ಶಿಭಿರಾಧಿಕಾರಿಗಳುಮತ್ತು ವಿದ್ಯಾರ್ಥಿಗಳು ಶ್ರಮಿಸಿದ್ದೀರಿ ಇದಕ್ಕಾಗಿ ನಿಮಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ದೇವಾಲಯಗಳಿಗೆ ತುಳಸಿ ಮತ್ತು ಹೂವುಗಳನ್ನು ನೀಡಲು ಎಲ್ಲಾ ಕಡೆ ಪ್ರತ್ಯೇಕವಾದ ತೋಟಗಳಿವೆ ಮೇಲುಕೋಟೆಯಲ್ಲೂ ಹಲವು ತೋಟಗಳಿವೆ ಎಂಬ ಮಾಹಿತಿ ಇದೀಗ ತಿಳಿಯಿತು. ಇವುಗಳನ್ನೂ ಗುರುತಿಸಿ ಅವುಗಳಿಗೆ ಜೀವ ತುಂಬುವಕಾರ್ಯ ಆಗಬೇಕು ಇದು ಪರಿಸರ ಸಂರಕ್ಷಣೆಯ ಕೆಲಸವೂ ಆಗುತ್ತದೆ ಮೇಲುಕೋಟೆಯ ಕಲ್ಯಾಣಿಯ ಬಳಿಯ ತುಳಸಿತೋಟ ಉತ್ತಮವಾಗಿ ನಿರ್ವಹಣೆಯಾಗಿ ಚೆಲುವನಾರಾಯಣನಿಗೆ ತುಳಸಿ ಸಮರ್ಪಿಸುವ ಪ್ರಮುಖತೋಟವಾಗಲಿ ಈ ನಿಟ್ಟಿನಲ್ಲಿ ದೇವಾಲಯದ ಆಡಳಿತ ಕಾಳಜಿವಹಿಸಲಿ ಎಂದರು.
ಮೇಲುಕೋಟೆಗೆ ಬಂದ ರಾಜ್ಯಪಾಲರನ್ನು ಡಾ.ಪ್ರೀತಿಮಹದೇವ್ ಸ್ಥಾನೀಕಂ ಸಂತಾನರಾಮನ್ ತುಳಸಿಗಿಡನೆಟ್ಟು ಉದ್ದೇಶಿತ ತೋಟಕ್ಕೆ ಚಾಲನೆ ನೀಡಲು ಆಹ್ವಾನಿಸಿದ ಪರಿಣಾಮ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ರಾಜ್ಯಪಾಲ ಪೊನ್ನು ರಾಧಾಕೃಷ್ಣನ್ ಮನವಿಗೆ ಸ್ಪಂದಿಸಿ ತುಳಸಿಗಿಡನೆಟ್ಟು ಪ್ರೋತ್ಸಾಹ ನೀಡಿದ್ದು ವಿಶೇಷವಾಗಿತ್ತು. ಅಪರಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್‍ರ ಮಾರ್ಗದರ್ಶನದಲ್ಲಿ ಪಾಂಡವಪುರ ವಿಜಯ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಘಟಕ ಶಿಭಿರಾಧಿಕಾರಿ ಎನ್.ಕೆ ವೆಂಕಟೇಗೌಡ ಸಲಹೆಯಲ್ಲಿ ಕಲ್ಯಾಣಿಯ ಸಾಲುಮಂಟಪದ ಹಿಂಭಾಗ ಬೆಳೆದಿದ್ದ ಬೃಹತ್ ಗಿಡಗಂಟೆಗಳನ್ನು ಕಿತ್ತು ತುಳಸಿತೋಟಮಾಡಲು ಸಿದ್ಧಮಾಡಿದ್ದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಈ ಬೆಳವಣಿಗೆ ದೇವಾಲಯಕ್ಕೆ ಮತ್ತಷ್ಟು ತುಳಸಿ ಹೂ ತೋಟಮಾಡಲು ಪ್ರೇರಣೆಯಾಗಲಿ ಎಂದೂ ಹಾರೈಸಿದರು.
ಈ ವೇಳೆ ಪಾಂಡವಪುರ ತಹಶೀಲ್ದಾರ್ ಶ್ರೇಯಸ್ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ವಿದ್ವಾನ್ ಶ್ರೀರಂಗಂ ರಾಮಪ್ರಿಯ ಎಸ್.ಎನ್ ಸಂತಾನರಾಮನ್ ಎಸ್. ನಾರಾಯಣ ಭಟ್ಟರ್ ಎನ್.ಎಸ್.ಎಸ್ ಶಿಭಿರಾಧಿಕಾರಿ ಡಾ.ಎನ್.ಕೆ ವೆಂಕಟೇಗೌಡ, ರಾಜೇಶ್, ಸುರೇಶ್, ಜಯಕುಮಾರ್ ಮಹದೇವಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.