ಮಹಿಳೆಯರ ಸ್ವಾವಲಂಬನೆಗೆ ಬ್ಯೂಟಿಷಿಯನ್ ವೃತ್ತಿ ಸಹಕಾರಿ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.28:- ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬ್ಯೂಟಿಷಿಯನ್ ವೃತ್ತಿ ಸಹಕಾರಿಯಾಗಲಿದೆ. ಈ ಮೂಲಕ ತಮ್ಮ ಮಕ್ಕಳಿಗೆ ಉಜ್ವಲವಾದ ಭವಿಷ್ಯ ನೀಡಲು ಸಾಧ್ಯವಾಗಲಿದೆ ಎಂದು ಮಾಜಿನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ ತಿಳಿಸಿದರು.
ಸಮೃದ್ಧಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಸಿ ಎಫ್ ಟಿ ಆರ್ ಐ ಹತ್ತಿರ ಇರುವ ಮಹಾತ್ಮ ಗಾಂಧಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬ್ಯೂಟಿಷಿಯನ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಈ ಹಿಂದೆ ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದ ಮಹಿಳೆ ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದರು.
`ಬ್ಯೂಟಿಷಿಯನ್ ತರಬೇತಿಗೆ ಮಹಿಳೆಯರು ಕೇವಲ ಪ್ರಮಾಣಪತ್ರ ಪಡೆಯಲು ಬರಬಾರದು. ಅನುಭವಿ ತರಬೇತುದಾರರಿಂದ ತರಬೇತಿ ಪಡೆದು, ವೃತ್ತಿಯಲ್ಲಿ ಗುಣಮಟ್ಟ ಕಾಯ್ದುಕೊಂಡಾಗ ಹೆಚ್ಚು ಹೆಚ್ಚು ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ. ಯಾವುದೇ ವೃತ್ತಿಯಲ್ಲಿ ಮೊದಲು ನಮ್ಮಲ್ಲಿಗೆ ಬರುವ ಗ್ರಾಹಕರನ್ನು ಸೌಜನ್ಯದಿಂದ ಮಾತನಾಡಿಸಬೇಕು’ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮೈಸೂರು ಬ್ಯೂಟಿಶಿಯನ್ ಅಸೋಸಿಯೇಷನ್ ನಿರ್ದೇಶಕರಾದ ಮಾಲಿನಿ ಪಾಲಾಕ್ಷ, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಸಮೃದ್ಧಿ ಸೇವಾ ಸಮಿತಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಕಾಂತಿಲಾಲ್ ಜೈನ್, ಸಂಸ್ಥೆಯ ಅಧ್ಯಕ್ಷರಾದ ಪ್ರಮೀಳಾ ಭರತ್, ಸಲಹೆಗಾರರಾದ ಗುಂಡು ವೆಂಕಟೇಶ್ ಕುಮಾರ್,ಕಾರ್ಯದರ್ಶಿಯಾದ ಜ್ಯೋತಿ, ಸಹಕಾರ್ಯದರ್ಶಿಯಾದ ಚರಣ್, ಖಜಾಂಜಿ ಗಾಯಿತ್ರಿ, ನಿರ್ದೇಶಕರಾದ ರಾಜೇಶ್, ಸಂಚಾಲಕರಾದ ಎನ್ ಭರತ್, ಹಾಗೂ ದಾಕ್ಷಾಯಿಣಿ, ರಚನಾ, ಸುಶೀಲ ,ವಿನುತ್, ತರಬೇತಿದಾರರು ಮತ್ತು ಪೆÇೀಷಕರು ಉಪಸ್ಥಿತರಿದ್ದರು.