ಶಾಸನಗಳ ಅಧ್ಯಾಯನ ಇತಿಹಾಸದ ಬೆಳವಣಿಗೆಗೆ ಪೂರಕ
ಕೋಲಾರ,ಮೇ,೨೮- ನಮ್ಮ ದೇಶದ ಇತಿಹಾಸದಲ್ಲಿ ಅನೇಕ ರಾಜರುಗಳ ಆಡಳಿತ ನಡೆಸಿರುವಂತ ಅನೇಕ ಮಹತ್ವರವಾದ ವಿಚಾರಗಳ ದಾಖಲೆಗಳು ಶಾಸನಗಳಲ್ಲಿರುವುದನ್ನು ಧೃಡ ಪಡೆಸಿ ಬಹುದಾಗಿದೆ, ಶಾಸನಗಳ ಚಿಂತನೆಗಳು ಮತ್ತು ಅಧ್ಯಾಯದಿಂದ ಇತಿಹಾಸ ಕಟ್ಟಿ ಬೆಳೆಸಲು ಪೂರಕವಾಗಿವೆ. ಸಾಹಿತ್ಯ ಹಾಗೂ ಇತಿಹಾಸದ ದೃಷ್ಠಿಯಿಂದ ಶಾಸನಗಳು ಮುಖ್ಯವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತಿ ಜಂಟಿ ನಿರ್ದೇಶಕರು ಹಾಗೂ ಶಾಸನಗಳ ತಜ್ಞರಾದ ಪ್ರೋ. ಕೆ.ಆರ್.ನರಸಿಂಹನ್ ಅಭಿಪ್ರಾಯ ಪಟ್ಟರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಭವನದಲ್ಲಿ ಓದುಗ ಕೇಳುಗ – ನಮ್ಮ ನಡೆ ೩೭ನೇ ತಿಂಗಳ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಬಿ.ಎಲ್. ರೈಸ್ ಅವರ ಎಪಿಗ್ರಾಫಿಯ ಕರ್ನಾಟಕ ಕೃತಿಯ ಸಂಪುಟ ೧೦ ಹಾಗೂ ಕೋಲಾರದ ಶಾಸನಗಳು ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸದಲ್ಲಿ ಅವರು ಮಾತನಾಡಿ ಶಾಸನಗಳನ್ನು ಮೂಲ ರೂಪದಲ್ಲಿ ನೋಡುವ ಕೃತಿಗಳು ನಮ್ಮಲ್ಲಿ ಇಲ್ಲವಾಗಿದ್ದರೂ ಮೊಬೈಲ್‌ಗಳಲ್ಲಿ ಅವುಗಳ ಮಾಹಿತಿಯನ್ನು ಕಾಣಬಹುದಾಗಿದೆ ಎಂದರು,
ಶಾಸನಗಳು ಮತ್ತು ಸ್ಮಾರಕಗಳ ಅಧ್ಯಾಯನದ ಪಿತಾಮಹಾ ಬಿ.ಎಲ್.ರೈಸ್ ಅವರ ಕೊಡುಗೆಗಳು ಅಪಾರವಾಗಿದೆ. ೧೮೮೫ರಲ್ಲಿ ಪುರತತ್ವ ನಿರ್ದೇಶಕರಾದ ಶ್ರೀನಿವಾಸ್ ಅವರು ಸಹ ಇದಕ್ಕೆ ಕೈ ಜೋಡಣೆಯಾಗಿದ್ದು ಬಹಳಷ್ಟು ಸಂಪನ್ಮೋಲಗಳನ್ನು ಕ್ರೋಡೀಕರಿಸಿದ್ದಾರೆ. ವಿದೇಶದಲ್ಲೂ ಅಧ್ಯಾಯನ ಮಾಡಿ ರಚಿಸಿರುವ ೧೨ ಸಂಪುಟಗಳಲ್ಲಿ ಸಮಗ್ರವಾದ ಶಾಸನಗಳ ಮಾಹಿತಿಯನ್ನು ಕಾಣಬಹುದಾಗಿದೆ, ಇದರಲ್ಲಿ ಕೋಲಾರದ ಶಾಸನಗಳ ಬಗ್ಗೆ ೧೦ನೇ ಸಂಪುಟದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು,
ರೈಸ್ ಅವರು ಕಳೆದ ೧೮೩೭ರಲ್ಲಿ ಬೆಂಗಳೂರಿನಲ್ಲಿ ಜನನವಾಗಿ ೧೯೨೭ ಇಂಗ್ಲೇಡ್‌ನಲ್ಲಿ ನಿಧನವಾದರು. ರೈಸ್ ಅವರ ಕೃತಿಗಳಲ್ಲಿ ಕೆಲವೊಂದು ದಾಖಲೆಗಳ ಮಾಹಿತಿ ಪರಮಾರ್ಷೆ ಅಗತ್ಯವಾಗಿದೆ. ಕಳೆದ ೧೯೭೨ರಲ್ಲಿ ಮೈಸೂರಿನ ಪುರತತ್ವ ಇಲಾಖೆಯ ೧ ರಿಂದ ೧೨ ಸಂಪುಟಗಳನ್ನು ಅಧ್ಯಾಯನ ಮಾಡಿ ಪ್ರಕಟಿಸಲಾಯಿತು, ಶಾಸನಗಳ ಕ್ರೋಡೀಕರಣದಲ್ಲಿ ಮೈಸೂರು ವಿಶೇಷವಾದ ಸ್ಥಾನಮಾನಗಳನ್ನು ಪಡೆದಿದೆ. ೧೯೦೬ರಿಂದ ೨೨ರವರೆಗೆ ರಾವ್ ಅವರು ನಿದೇರ್ಶಕರಾಗಿದ್ದರು. ನರಸಿಂಹಚಾರ್ ಅವರು ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ೪೧೫ ಹೊಸ ಶಾಸನಗಳು ಸೇರ್ಪಡೆಯಾಗಿದೆ, ೧೯೮೬ರಲ್ಲಿ ಕೊರ್ಗ್ ಜಿಲ್ಲೆಯ ವ್ಯಾಲಂನಲ್ಲಿ ಸೇರ್ಪಡೆ ಮಾಡಲಾಗಿದೆ ೧೯೦೫ರಲ್ಲಿ ಕೋಲಾರ, ಬೆಂಗಳೂರು, ತುಮಕೊರು ಇತ್ಯಾದಿಗಳ ಜಿಲ್ಲೆಗಳದ್ದು ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಶಾಸನಗಳು ವಿಶಿಷ್ಟವಾದ ಗ್ರಂಥಲಿಪಿ,ಭಾಷೆ, ಇತಿಹಾಸವನ್ನು ಒಳಗೊಂಡಿದ್ದವು ದೇವಾಲಯ, ಕೆರೆಗಳು, ವೀರರು. ಯುದ್ದಗಳು, ಮಠಗಳು, ದಾನ, ಧರ್ಮಗಳು ಇತ್ಯಾದಿಗಳ ಕುರಿತು ಆಡಳಿತದಲ್ಲಿನ ಕಾನೂನುಗಳ ವಿವರಗಳನ್ನು ಒಳಗೊಂಡಿರುತ್ತದೆ. ಕೃಷ್ಣದೇವರಾಯ ಪಟ್ಟಾಭಿಷೇಕ ಕಾಳಹಸ್ತಿಯಲ್ಲಿ ಮಾಡಿ ಕೊಂಡು, ಅಂತಿಮವಾಗಿ ಚಂದ್ರಗಿರಿಯಲ್ಲಿ ಮರಣವನ್ನಾಪ್ಪಿದ್ದು ಸೇರಿದಂತೆ ಅನೇಕ ಮಹತ್ವರವಾದ ಮಾಹಿತಿಗಳು ಶಾಸನದಲ್ಲಿ ಪತ್ತೆಯಾಗಿದೆ. ಅನೇಕ ಸಂದೇಶಗಳು ಅಧ್ಯಾಯನದ ಮೂಲಕ ಇತಿಹಾಸದಲ್ಲಿ ಮುಂದುವರೆಯಲು ಶಾಸನಗಳು ಪ್ರೇರಣೆಯಾಗಿದೆ. ತಾವು ಬರೆದಿರುವಂತ ಶಾಸನದ ಹಲವು ಕೃತಿಗಳ ಪರಿಚಯವನ್ನು ತಿಳಿಸಿದರು,
ರಾಜ್ಯದಲ್ಲಿ ದ್ರಾವಿಡರು. ಚೋಳರು, ಗಂಗರು, ಕದಂಬರು, ನೊಣಬರು, ಹೊಯಸ್ಸಾಳರು ಸೇರಿದಂತೆ ಅನೇಕ ವಂಶಸ್ಥರು ಆಳ್ವಿಕೆ ನಡೆಸಿದ್ದಾರೆ.ಅನೇಕ ಶಾಸನಗಳು ರಾಜ್ಯದ ವಿವಿಧಡೆ ಇದೆ. ಅದರೆ ಇವುಗಳು ಬೆಳಕಿಗೆ ಬಾರದೆ ಅಗ್ಗಾಗ್ಗೆ ಅಲ್ಲಲ್ಲಿ ಪತ್ತೆಯಾಗುತ್ತಿರುವ ಕುರಿತು ನೆನಪಿಸಿದರು. ಇದೇ ಸಂದರ್ಭದಲ್ಲಿ ಎಪಿಗ್ರಾಫಿಯ ಕರ್ನಾಟಕ ಕೃತಿಯ ಸಂಪುಟದ ಪ್ರಾತ್ಯೇಕ್ಷತೆಯ ಮೂಲಕ ವಿವರಿಸಿದರು,
ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಚಿಂತಕ ವಿ.ಎಸ್.ಎಸ್. ಶಾಸ್ತ್ರಿ, ಕ.ಸಾ.ಪ. ಮಾಜಿ ಅಧ್ಯಕ್ಷರಾದ ನಾಗನಂದ್ ಕೆಂಪರಾಜ್, ಜೆ.ಜಿ.ನಾಗರಾಜ್. ಹಿರಿಯ ಪತ್ರಕರ್ತರಾದ ಸಿ.ಮುನಿಯಪ್ಪ. ನಿವೃತ್ತ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕರು ಡಾ.ರಘುರಾಮೇಗೌಡ, ಡಾ.ಹರೀಶ್, ನಿವೃತ್ತ ಅರಣ್ಯಾಧಿಕಾರಿ ಹೆಚ್.ಎ.ಪುರೋತ್ತಮ್‌ರಾವ್,ನಿವೃತ್ತ ಪ್ರಾಂಶುಪಾಲ ಡಾ,ರತ್ನಪ್ಪ ಮುಂತಾದವರು ಭಾಗವಹಿಸಿದ್ದರು,