ವೀರಶೈವ ಮಹಾಸಭಾ ಘಟಕದ ವತಿಯಿಂದ ಆಹಾರ ಕಿಟ್ ವಿತರಣೆ
ಸಂಜೆವಾಣಿ ವಾರ್ತೆ
ಹನೂರು ಮೇ 28 :- ಅಖಿಲ ಕರ್ನಾಟಕ ವೀರಶೈವ ಮಹಾಸಭಾ ಘಟಕದ ವತಿಯಿಂದ ಇಂಡಿಗನತ್ತ, ಮತ್ತು ಮೆಂದಾರೆ ಗ್ರಾಮಗಳ ಜನರಿಗೆ ಆಹಾರ ಕಿಟ್ ಅನ್ನು ಹರವೆ ಮಠದ ಸರ್ವಭೂಷಣ ಸ್ವಾಮೀಜಿಗಳವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಮತ್ತು ಎಂದರೆ ಗ್ರಾಮಗಳಿಗೆ ಹಾರವಿಮಠದ ಸ್ವಾಮಿಗಳ ನೇತೃತ್ವದಲ್ಲಿ ವೀರಶೈವ ಮಹಾಸಭಾ ಘಟಕದ ಸರ್ವ ಮುಖಂಡ ಸದಸ್ಯರುಗಳು ಭೇಟಿ ನೀಡಿ ಇಲ್ಲಿನ ಜನರಿಗೆ ಆಹಾರ ಕಿಟ್ಟನ್ನು ವಿತರಣೆ ಮಾಡಿದರು.
ಇದೇ ವೇಳೆ ಹರವೆ ಮಠದ ಸಸ್ರ್ವಾವಭೂಷಣ ಸ್ವಾಮಿಗಳು ಮಾತನಾಡಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅರಿವಿಗೆ ಬಾರದಂತೆ ಅಹಿತಕರ ಘಟನೆ ನಡೆದುಹೋಗಿದೆ. ಇಲ್ಲಿನ ಜನರು ಮುಗ್ದರು ತಮಗೆ ಬೇಕಾದ ಸೌಲಭ್ಯಕ್ಕಾಗಿ ಹೋರಾಟ ಮಾಡಿದ್ದಾರೆ.
ತಲಾ ತಲಾಂತರದಿಂದ ಇಲ್ಲಿನ ಜನರು ಮಲೆ ಮಾದಪ್ಪನ ತಪ್ಪಲಿನಲ್ಲಿ ಬದುಕುತ್ತಾ ಬಂದಿದ್ದಾರೆ. ಹಾಗಾಗಿ ಸರ್ಕಾರ ಎಚ್ಚೆತ್ತು ಈ ಭಾಗದ ಜನರಿಗೆ ಬೇಕಾದ ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಜೀವನ ನಡೆಸಲು ಅನುಕೂಲ ಕಲ್ಪಿಸಿ ಕೊಡಬೇಕು ಎಂದು ತಿಳಿಸಿದರು.
ನಂತರ ಡಾಕ್ಟರ್ ಪ್ರೀತನ್ ನಾಗಪ್ಪ ಅವರು ಮಾತನಾಡಿ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವಂತಹ ಈ ಭಾಗದ ಜನರು ನೂರಾರು ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬದುಕುತ್ತಾ ನೋವನ್ನು ಎದುರಿಸಿ ನೊಂದಿದ್ದಾರೆ. ಇಲ್ಲಿಯ ಜನರು ಹೊರಗಿನ ಪ್ರಪಂಚದ ಅರಿವಿಲ್ಲದೆ ಬದುಕುತ್ತಿದ್ದಾರೆ.
ಇಲ್ಲಿನ ಜನರ ಬಗ್ಗೆ ಸಮಸ್ಯೆಗಳು ಹೋರಾಟಕ್ಕೆ ವೀರಶೈವ ಮಹಾಸಭಾ ಜೊತೆಗೆ ಇರುತ್ತದೆ. ಮುಂದಿನ ದಿನಗಳಲ್ಲಿ ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ನಾವೆಲ್ಲರೂ ಜೊತೆಗಿರುತ್ತೇವೆ. ಈ ಬಗ್ಗೆ ಈಗಲಾದರೂ ಎಚ್ಚೆತ್ತು ಸರ್ಕಾರ ಅರಣ್ಯ ಇಲಾಖೆ ಗಮನಹರಿಸಿ ಇಲ್ಲಿನ ಜನರ ಸಮಸ್ಯೆಗಳನ್ನು ಬೇಡಿಕೆಗಳನ್ನು ಪೂರೈಸಲು ಮುಂದಾಗ ಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಂಗಳ ಮಠದ ಷಡಕ್ಷರ ಸ್ವಾಮೀಜಿ, ಮೂಡ್ಲೂಪುರ ನಂದೀಶ್, ವೀರಶೈವ ಮಹಾಸಭಾ ಉಪಾಧ್ಯಕ್ಷ ಪುಟ್ಟಣ್ಣ, ಹನೂರು ತಾಲೂಕು ವೀರಶೈವ ಮಹಾಸಭಾ ಘಟಕ ಅಧ್ಯಕ್ಷ ಬಸವರಾಜಪ್ಪ, ಆನಾಪುರ ಉಮೇಶ್, ನಾಗೇಂದ್ರ, ಚಂದ್ರಶೇಖರ್, ಮುರುಡೇಶ್ವರ ಸ್ವಾಮಿ, ಪುಟ್ಟಣ್ಣ, ರಾಮಾಪುರ ಅಶ್ವಥ್ ಸೇರಿದಂತೆ ಇನ್ನಿತರರು ಇದ್ದರು.