ಪರಿಷತ್‌ಗೆ ಆಯ್ಕೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ
ಕೋಲಾರ,ಮೇ,೨೮-ವಿಧಾನಸಭೆ ಯಿಂದ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಎಂ.ಎಲ್.ಸಿ. ಸ್ಥಾನ ನನಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಅದು ಕಾಂಗ್ರೇಸ್ ಹೈಕಮಾಂಡ್ ತೆಗೆದು ಕೊಳ್ಳುವ ತೀರ್ಮಾನವಾಗಿದೆ.
ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರವನ್ನು ಬಿಟ್ಟು ಕೊಡುವ ಸಂದರ್ಭದಲ್ಲಿ ನನಗೆ ಆಶ್ವಾಸನೆ ಕೊಟ್ಟಿರುವುದನ್ನು ಅವರು ಮರೆತಿಲ್ಲ. ಇತ್ತೀಚೆಗೆ ಅವರನ್ನು ಭೇಟಿಯಾದ ಸಂದರ್ಭದಲ್ಲಿ ತಾವು ನೀಡಿದ್ದ ನೆನಪಿಸಿ ಕೊಂಡರು ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ತಿಳಿಸಿದರು,
ನಗರದ ತಮ್ಮ ಗೃಹ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡುತ್ತಾ ಸಿದ್ದರಾಮಯ್ಯ ಸೇರಿದಂತೆ ಹಲವು ಪಕ್ಷದ ವರಿಷ್ಟರು, ನನಗೆ ಸೊಕ್ತವಾದ ಸ್ಥಾನ ಮಾನ ಕಲ್ಪಿಸುವುದಾಗಿ ಹೇಳಿದ್ದರು ಅದು ಯಾವೂದು, ಏನು, ಎಂಬುವುದರ ಬಗ್ಗೆ ನಾವು ಆಗಾ ಯಾವೂದೇ ರೀತಿ ಮಾತುಕತೆ ನಡೆಸಲಿಲ್ಲ. ಯಾವೂದೇ ಕರಾರುಗಳು ಮಾಡಿ ಕೊಂಡಿರಲಿಲ್ಲ. ಏಕೆಂದರೆ ನನಗೆ ನೀಡುವ ಸ್ಥಾನ ಮಾನಕ್ಕಿಂತ ಕೋಲಾರದಿಂದ ಎರಡನೇ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾದರೆ ಕ್ಷೇತ್ರವನ್ನು ಅಭಿವೃದ್ದಿ ಪಡೆಸ ಬಹುದಾಗಿದೆ ಎಂಬ ದೆಸೆಯಲ್ಲಿ ನಾನು ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಡಲು ಮುಂದಾಗಿದ್ದೆ ಎಂದು ಹೇಳಿದರು,
ಮೊನ್ನೆ ಜಿಲ್ಲಾ ಕಾಂಗ್ರೇಸ್ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮತ್ತು ಇತರೆ ಹಲವು ಮುಖಂಡರು ನಮ್ಮ ಮನೆಗೆ ಬಂದು ಕ್ರಿಪ್ಕೋ ನಿರ್ದೇಶನಾಗಿ ೭ ನೇ ಬಾರಿ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಿ, ವಿಧಾನ ಪರಿಷತ್ ಸ್ಥಾನ ನೀಡಲು ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಶಿಫಾರಸ್ಸ್ ಮಾಡುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಲ್ಲದೆ. ಮುಖ್ಯ ಮಂತ್ರಿಯವರನ್ನು ರಾಜ್ಯ ಸಚಿವ ಕೆ.ಹೆಚ್.ಮುನಿಯಪ್ಪ ಅವರೊಂದಿಗೆ ನಿಯೋಗವು ಬೇಟಿಯಾಗಿ ನನಗೆ ಎಂ.ಎಲ್.ಸಿ. ಸ್ಥಾನಕ್ಕೆ ಮನವಿ ಮಾಡಿದ್ದಾರೆ ಎಂದರು
ಪ್ರಶ್ನೆಯೊಂದಕ್ಕೆ ನನಗೆ ಕಾಂಗ್ರೇಸ್ ಪಕ್ಷವೇನು ಹೊಸದೆನಲ್ಲ ನಾನು ಕೃಷಿ ಸಚಿವನಾಗಿದ್ದು ಕಾಂಗ್ರೇಸ್ ಪಕ್ಷದಲ್ಲಿಯೇ ಎಂದ ಅವರು ಸಿದ್ದರಾಮಯ್ಯ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ನಾನು ಸಹ ಅವರೊಂದಿಗೆ ಸಚಿವನಾಗಿದ್ದೇ. ಸಿದ್ದರಾಮಯ್ಯ ಅವರು ನನಗೆ ಹೊಸಬರೇನಲ್ಲಾ ನನ್ನ ಹಳೆಯ ಗೆಳೆಯರು, ನಾವು ಯಾವೂದೇ ಪಕ್ಷದಲ್ಲಿದ್ದರೂ ಅವರಿಗೆ. ನನ್ನ ಮೇಲೆ ವಿಶ್ವಾಸ ಇದೆ. ಕಾಂಗ್ರೇಸ್ ಪಕ್ಷದಲ್ಲಿ ನಾನು ಸಹ ಅಕಾಂಕ್ಷಿಯಾಗಿದ್ದೇನೆ, ಕಾಂಗ್ರೇಸ್ ಪಕ್ಷದ ಹೈ ಕಮಾಂಡ್ ಏನು ತೀರ್ಮಾನ ಕೈಗೊಳ್ಳುವುದು ಕಾದು ನೋಡೋಣ ಎಂದರು.
ನಾನು ಕೋಲಾರ ವಿಧಾನ ಸಭೆಗೆ ೪ ಭಾರಿ ವಿವಿಧ ಪಕ್ಷಗಳಿಂದ ಸ್ವರ್ಧಿಸಿ ಶಾಸಕನಾಗಿ ಒಂದು ಬಾರಿ ಕೃಷಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ, ಸಹಕಾರ ಕ್ಷೇತ್ರವು ನನಗೆ ರಕ್ತಗತವಾಗಿ ಬಂದಿದ್ದು, ರಾಜಕೀಯವಾಗಿ ಬೆಳೆಯಲು ನನಗೆ ಸಹಕಾರ ಶಕ್ತಿಯೇ ಕಾರಣವಾಗಿದೆ. ಅಣ್ಣೇಹಳ್ಳಿ ಸೊಸೈಟಿಯಿಂದ, ತಾಲ್ಲೂಕು ಬೋರ್ಡ್, ಜಿಲ್ಲಾ ಪಂಚಾಯತ್ ನಂತರ ಶಾಸಕನಾದೆ. ಈ ರೀತಿ ಹಂತ,ಹಂತವಾಗಿ ಒಂದೊಂದೆ ಮೆಟ್ಟಿಲು ಏರಿ ಸಚಿವನಾಗಿದ್ದೆ, ಹೊರತಾಗಿ ಎಲ್ಲಿಂದಲೂ ಬಂದು ರಾತ್ರೋ ರಾತ್ರೀ ಫ್ಲೆಕ್ಸಿ, ಕಟೌಟ್‌ಗಳು ಕಟ್ಟಿಸಿ, ಹಣ, ಮದ್ಯ ಹಂಚಿ ನಾಯಕನಾದವನಲ್ಲ, ಯಾವೂದೇ ಖರ್ಚು ವೆಚ್ಚ ಇಲ್ಲದೆ ಜನರ ವಿಶ್ವಾಸ ಗಳಿಸಿ ಶಾಸಕನಾಗುತ್ತಿದ್ದೇ ಹೊರತು ಈಗಿನಂತೆ ಆಲ್ಲ. ಆಗಿನ ರಾಜಕಾರಣ ಪರಿಶುದ್ದವಾಗಿತ್ತು ನಾನು ಜಿಲ್ಲಾ ರಾಜಕೀಯ ಹಿರಿಯ ಮುತ್ಸದಿ ಪಿ.ವೆಂಕಟಗಿರಿಯಪ್ಪ, ಸಿ.ಬೈರೇಗೌಡರ ಮಾರ್ಗದರ್ಶನದಲ್ಲಿ ಬೆಳೆದು ಬಂದಿರುವೆ, ಜನರಿಗೆ ಅಮಿಷ ಒಡ್ಡುವುದು, ಜಾತಿ ರಾಜಕಾರಣ, ಒಡೆದು ಆಳುವುದು ನಮಗೆ ಗೊತ್ತಿರಲಿಲ್ಲ ಎಂದು ನೆನಪಿಸಿದರು,
ನಾನು ಕ್ರಿಪ್ಕೋ ಸಂಸ್ಥೆಗೆ ೬ ಭಾರಿ ಅವಿರೋಧವಾಗಿ ಆಯ್ಕೆಯಾಗಿದ್ದೆ ನಯಾ ಪೈಸೆ ವೆಚ್ಚ ಇಲ್ಲದೆ ಅಗಿದ್ದೆ. ೭ನೇ ಭಾರಿ ಮಾತ್ರ ಚುನಾವಣೆಯನ್ನು ಎದುರಿಸ ಬೇಕಾಗಿ ಬಂದಿತು,ಎದುರಾಳಿಗೆ ಸಮಾಂತರ ಮತಗಳಿಂದಾಗಿ ಟಾಸ್ಕ್‌ನಲ್ಲಿ ನನ್ನ ಪರವಾಗಿ ಬಂದಿದ್ದರಿಂದ ನಿರ್ದೇಶಕನಾಗಿ ೭ನೇ ಭಾರಿ ಮುಂದುವರೆದಿದ್ದೇನೆ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ. ಮಾಜಿ ಅಧ್ಯಕ್ಷ ನಾಗನಾಳ ಸೋಮಣ್ಣ ಉಪಸ್ಥಿತರಿದ್ದರು,