ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಆದ್ಯ ಕರ್ತವ್ಯ:ನ್ಯಾಯವಾದಿ ದಾನೇಶ ಅವಟಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.28 :ಬಾಲ್ಯದಲ್ಲಿ ಮಕ್ಕಳು ಆಟ, ಪಾಠ, ಹಾಡು ಕುಣಿತದೊಂದಿಗೆ ಸ್ವಚ್ಚಂದವಾಗಿ ಬೆಳೆಯಬೇಕು. ಅವರನ್ನು ಟಿವಿ, ಮೊಬೈಲ್, ಹೆಡ್ ಫೆÇೀನ್‍ಗಳಂತಹ ಯಾಂತ್ರಿಕ ವಸ್ತುಗಳಿಂದ ದೂರವಿರಿಸಿ, ಬರೀ ಶಾಲೆ, ಟ್ಯೂಷನ್, ಹೋಮ ವರ್ಕ್ ಎಂದು ಕೋಣೆಯಲ್ಲಿ ಕಟ್ಟಿ ಹಾಕದೆ ಒಳ್ಳೆಯ ಸಂಸ್ಕøತಿ ಸಂಸ್ಕಾರ ನೀಡುವಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯವಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ನ್ಯಾಯವಾದಿ ದಾನೇಶ ಅವಟಿ ಹೇಳಿದರು.
ಬಬಲೇಶ್ವರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಸೇವಕ್ ಸಂಸ್ಥೆಯವರು ಏರ್ಪಡಿಸಿದ್ದ ‘ಯುವ ಜನತೆ ಸಬಲೀಕರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ’ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಕ್ಕಳು ಇಂದು ಪಾಲಕರ ಅತಿಯಾದ ನಿರೀಕ್ಷೆ ಮತ್ತು ಒತ್ತಡಗಳಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಬರೀ ಹೆಚ್ಚು ಅಂಕಗಳಿಸಿ ಉನ್ನತ ಹುದ್ದೆಯ ನೌಕರಿ ಆಶೆಯದ ಹಿಂದೆ ಬಿದ್ದು ಪ್ರಾಥಮಿಕ ಹಂತದಲ್ಲಿಯೇ ಬಾಲ್ಯದ ಆಟ, ಮನರಂಜನೆ, ಮನೋವಿಕಾಸದ ಹಾಡು, ನೃತ್ಯ, ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ದೊರೆಯದೆ, ಹಾಸ್ಟೆಲ್ ಸಂಸ್ಕೃತಿಯಿಂದ ಪಾಲಕರ ಪ್ರೀತಿ ಮಮಕಾರ ವಂಚಿತರಾಗಿ ಒಂಟಿ ಜೀವನಕ್ಕೆ ಶರಣಾಗುತ್ತಿದ್ದಾರೆ. ಧೈರ್ಯ, ಆತ್ಮವಿಶ್ವಾಸ, ಜೀವನದ ಎಡರು ತೊಡರುಗಳನ್ನು ಎದುರಿಸುವ ಸಾಮಥ್ರ್ಯವಿಲ್ಲದೇ ಬಳಲಿ ಹೋಗುತ್ತಿದ್ದಾರೆ. ಕಾರಣ ಕುಟುಂಬದಲ್ಲಿಯೇ ಆಗಲಿ, ಶಾಲೆಯಲ್ಲಿಯೇ ಆಗಲಿ, ಅತಿಯಾದ ಒತ್ತಡ ಹೇರದೆ ಇಷ್ಟಪಟ್ಟು ಓದುವ ಜೀವನ ಕೌಶಲ್ಯ ಹೊಂದುವ ಮನೋವಿಕಾಸಭರಿತ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ವಿಕಾಸಗೊಳಿಸಬೇಕೆಂದು ತಿಳಿಸಿದರು.
ಸೇವಕ ಸಂಸ್ಥೆಯ ಸಂಯೋಜಕಿ ವಿಮಲಾಕ್ಷಿ ಆರ್. ಹಿರೇಮಠ ಮಾತನಾಡಿ, ಸೇವಿಕಾ ಸಂಸ್ಥೆ ರಾಜ್ಯ ಮಟ್ಟದ ನೋಂದಾಯಿತ ಸಂಸ್ಥೆ ಆಗಿದ್ದು. ಮಹಿಳೆಯರ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಬಬಲೇಶ್ವರ ತಾಲೂಕಿನ ಹದಿನೈದು ಗ್ರಾಮ ಪಂಚಾಯತಗಳಲ್ಲಿ ಸುಮಾರು ಐವತ್ತೆರಡು ಹಳ್ಳಿಗಳಲ್ಲಿ ಅಪಾಯದ ಅಂಚಿನಲ್ಲಿರುವ ಮಹಿಳೆಯರ ಮಕ್ಕಳಿಗೆ ಶಿಕ್ಷಣ, ಕಾನೂನು, ಆರೋಗ್ಯ, ಪರಿಸರ ಸ್ವಚ್ಛತೆ ಇತ್ಯಾದಿ ವಿಷಯಗಳ ಕುರಿತು ತಿಳಿವಳಿಕೆ ನೀಡುವ ಬಡವರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ ಬಗ್ಗೆ ಅಭಿಮಾನವಿದ್ದು, ಸಾರ್ವಜನಿಕರು. ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.