ಇಂಜಿನಿಯರಿಂಗ್: ಚರಿಷ್ಮ ಟಾಪರ್
ಕೋಲಾರ, ಮೇ,೨೮-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಅಪ್ಪಾಜಿ ಗೌಡರ ಪುತ್ರಿ ಚರಿಷ್ಮ.ಎ ಬಿ.ಇ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿಯಲ್ಲಿ ಬೆಂಗಳೂರಿನ ವೈಟ್ ಪೀಲ್ಡ್ ಬಳಿಯ ಕುಂದಲಹಳ್ಳಿ
ಸಿ.ಎಂ.ಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೨ನೇ ಟಾಪರ್ (ಅತ್ಯುನ್ನತ ಶ್ರೇಣಿಯಲ್ಲಿ) ತೆರ್ಗಡೆಯಾಗಿದ್ದಾರೆ.
ಸಿ.ಎಂ.ಆರ್.ಐ.ಟಿಯಲ್ಲಿ ೨೧ನೇ ವಾರ್ಷಿಕೋತ್ಸವ ಹಾಗೂ ಇಂಜಿನಿಯರಿಂಗ್ ಪದವಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನ ಅತ್ಯುನ್ನತ ಶ್ರೇಣಿ ಪಡಿದ ವಿದ್ಯಾರ್ಥಿಗಳಿಗೆ ವೇದಾಂತು ಸಮೂಹ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ವಂಶಿಕೃಷ್ಣ, ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಸಿ.ಎಂ.ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಸಿ.ರಾಮಮೂರ್ತಿ, ಸಿ.ಎಂ.ಆರ್. ಯೂನಿವರ್ಸಿಟಿ ಚಾನ್ಸಲರ್ ಡಾ.ಸಬಿತ ರಾಮಮೂರ್ತಿ, ಜ್ಞಾನಧರ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಸಿ.ಜಗನ್ನಾನಾಥ್ ರೆಡ್ಡಿ, ಸಿ.ಎಂ.ಆರ್. ಸಮೂಹ ವಿದ್ಯಾಸಂಸ್ಥೆಗಳ ಸಿಇಒ ಜಯದೀಪ್ ಕೆ.ಆರ್.ರೆಡ್ಡಿ, ಉಪಾಧ್ಯಕ್ಷ ಡಾ.ತ್ರಿಸ್ತಾ ರಾಮಮೂರ್ತಿ, ಪ್ರಾಂಶುಪಾಲ ಡಾ.ಸಂಜಯ್ ಜೈನ್, ಪ್ರಾಂಶುಪಾಲ ಡಾ.ಬಿ.ನರಸಿಂಹಮೂರ್ತಿ, ಬಿಇ ವಿಭಾಗದ ಮುಖ್ಯಸ್ಥೆ ಡಾ.ಕೆ.ಚಿತ್ರ ಇದ್ದರು.