ಲಾಂಗ್‌ನಿಂದ ಸಾರ್ವಜನಿಕರಿಗೆ ಬೆದರಿಕೆ ಆರೋಪಿ ನ್ಯಾಯಾಂಗ ಬಂಧನ
ಕೋಲಾರ,ಮೇ,೨೮- ಗ್ರಾಮದಲ್ಲಿ ಲಾಂಗ್ ಹಿಡಿದು ಸಾರ್ವಜನಿಕರನ್ನು ಬೆದರಿಸುತ್ತಿದ್ದ ಯುವಕನೊರ್ವನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡೆಸಿರುವ ಘಟನೆ ಮುಳಬಾಗಿಲು ತಾಲ್ಲೂಕಿನ ಪಿಚ್ಚಗುಂಟ್ಲಹಳ್ಳಿ ಗ್ರಾಮದಲ್ಲಿ ಮೇ,೨೪ ರಂದು ಸಂಜೆ ನಡೆದಿದೆ.
ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರೋಪಿಯನ್ನು ಸಂದೀಪ್ ಬಿನ್ ನಾರಾಯಣಸ್ವಾಮಿ (೨೭) ಎಂದು ಗುರುತಿಸಲಾಗಿದೆ.
ಸಂದೀಪ್ ಚಾಲಕ ವೃತ್ತಿಯನ್ನು ಮಾಡುತ್ತಿದ್ದು ,ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗಲಭೆಗಳಲ್ಲಿ ಭಾಗಿಯಾಗಿದ್ದು ಈತನ ವಿರುದ್ದ ಎರಡು ಪ್ರಕರಣ ದಾಖಲಾಗಿದೆ. ಅದರೂ ಸಹ ಗ್ರಾಮದಲ್ಲಿ ಸಾರ್ವಜನಿಕರಿಗೆ ಭೀತಿಯುಂಟು ಮಾಡಿ ಹವಾ ಉಂಟು ಮಾಡಲು ಲಾಂಗ್ ಹಿಡಿದು ಝಳಪಳಿಸುತ್ತಾ ಆಶ್ಲೀಲವಾಗಿ ಸಿಕ್ಕಿದವರನ್ನು ನಿಂದಿಸುತ್ತಿದ್ದ ತಿರುಗಾಡುತ್ತಿದ್ದನು,
ಗ್ರಾಮದ ಲಕ್ಷ್ಮೀಪತಿ ಎಂಬಾತ ಕಾಲೇಜು ಮುಗಿಸಿ ಕೊಂಡು ವಿರುಪಾಕ್ಷಿ ಬಳಿ ವಾಪಾಸ್ಸಗುತ್ತಿದ್ದ ಸಂದರ್ಭದಲ್ಲಿ ದಾರಿಗೆ ಅಡ್ಡಗಟ್ಟಿ ಹಣಕ್ಕಾಗಿ ಪ್ರಾಣ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಣ ಕೊಡದಿದ್ದರೆ ಸಾಯಿಸುವುದಾಗಿ ಕತ್ತು ಹಿಚುಕಲು ಪ್ರಯತ್ನಿಸಿದ್ದಾನೆ. ದ್ವಿಚಕ್ರವಾಹನದಲ್ಲಿಟ್ಟು ಕೊಂಡಿದ್ದ ಲಾಂಗ್ ತೆಗೆದು ನನಗೆ ಹಣ ಕೊಡದಿದ್ದರೆ ನಿನ್ನನ್ನು ಮುಗಿಸುತ್ತೇನೆಂದು ಹೆದರಿಸಿದ್ದಾನೆ. ಆಗಾ ದಾರಿಹೋಕರು ಬಿಡಿಸಲು ಬಂದಾಗ ಲಕ್ಷ್ಮೀಪತಿ ಆರೋಪಿಯಿಂದ ತಪ್ಪಿಸಿ ಕೊಂಡಿದ್ದಾನೆ.
ಇದರಿಂದ ರೊಚ್ಚಿಗೆದ್ದ ಆರೋಪಿಯು ಸಾರ್ವಜನಿಕರಿಗೆ ಗಲಾಟೆ ಮಧ್ಯೆ ಬಂದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ ಹಾಕಿದ್ದಾನೆ. ಗ್ರಾಮದಲ್ಲಿ ಶಾಂತಿಗೆ ಭಂಗವುಂಟು ಮಾಡುತ್ತಿದ್ದ ಹಿನ್ನಲೆಯಲ್ಲಿ ಸಾರ್ವಜನಿಕರು ನೀಡಿದ ದೊರಿನ ಮೇರೆ ಮುಳಬಾಗಿಲು ಪೊಲೀಸರು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿ ಕೊಂಡು. ನ್ಯಾಯಾಂಗ ಬಂಧನಕ್ಕೆ ಒಳಪಡೆಸಿದ್ದಾರೆ.