ಕಾಂಗ್ರೆಸ್ ಪಕ್ಷದಿಂದ ಶಿಕ್ಷಕರ ಕ್ಷೇತ್ರ ಕಡೆಗಣನೆ
ಕೋಲಾರ,ಮೇ,೨೮- ವಿಧಾನ ಪರಿಷತ್‌ಗೆ ಮೂರು ಭಾರಿ ಆಯ್ಕೆ ಮಾಡುವ ಮೂಲಕ ಹೆಚ್ಚಿನ ಜವಾಬ್ದಾರಿಗಳನ್ನು ಹೊತ್ತು ಶಿಕ್ಷಣ ಧ್ವನಿಯಾಗಿ ಕಾರ್ಯನಿರ್ವಹಿಸಿರುವೆ, ಈ ಮೂರು ಅವಧಿಯಲ್ಲಿ ಹಲವಾರು ಮುಖ್ಯ ಮಂತ್ರಿಗಳ ಆಡಳಿತವನ್ನು ಕಂಡಿರುವೆ. ಬಿಜೆಪಿ ಹಾಗೂ ಕುಮಾರಸ್ವಾಮಿ ಅವರ ಆಡಳಿತವು ಶಿಕ್ಷಕರ ಪಾಲಿಗೆ ಸುವರ್ಣ ಕಾಲದಂತೆ ಇತ್ತು ಅದರೆ ಕಾಂಗ್ರೇಸ್ ಪಕ್ಷವು ಶಿಕ್ಷಕರ ಕ್ಷೇತ್ರವನ್ನು ಕಡೆಗಣಿಸಿರುವಷ್ಟು ಯಾವ ಪಕ್ಷವು ನಿರ್ಲಕ್ಷಿಸಿಲ್ಲ ಎಂದು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತ ಪಡೆಸಿದರು,
ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂದಿರದಲ್ಲಿ ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಅವರು ಪ್ರಸ್ತಾವಿಕ ನುಡಿಗಳಾಡಿ ಜೂನ್ ೩ ರಂದು ಅಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಲಿದೆ ಎರಡು ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳು ಬಗೆ ಹರಿಸಲು ನನ್ನನ್ನು ಆಯ್ಕೆ ಮಾಡಿದಲ್ಲಿ ನಿಮ್ಮ ಹಿತ ಕಾಯ್ದು,ಸೇವೆಗೆ ಬದ್ದನಾಗಿರುತ್ತೇನೆಂದು ಆಶ್ವಾಸನೆ ನೀಡಿದರು,
ಬಿಜೆಪಿ ಮತ್ತು ಜೆ.ಡಿ.ಎಸ್. ಆಡಳಿತದಲ್ಲಿಯೇ ೫ನೇ, ೬ನೇ ವೇತನಗಳು ಜಾರಿಯಾಗಿದ್ದು, ೭ನೇ ವೇತನ ಬಿಜೆಪಿ ಸರ್ಕಾರದಲ್ಲಿಯೇ ಮಂಜೂರಾತಿ ನೀಡಿದ್ದು ಅದರೆ ಕಾಂಗ್ರೇಸ್ ಪಕ್ಷವೂ ಒಂದು ರೂ ಸಹ ಬಿಡುಗಡೆ ಮಾಡಿಲ್ಲ. ಕಾಂಗ್ರೇಸ್ ಪಕ್ಷವೂ ಏನೊಂದು ಮಾಡಿಲ್ಲ. ಬೆಳಿಗ್ಗೆ ಒಂದು, ಸಂಜೇ ಒಂದು ಆದೇಶಗಳನ್ನು ಜಾರಿ ಮಾಡಿ ಗೊಂದಲದಲ್ಲಿ ಮುಳುಗಿಸಿ ಈವರೆಗೆ ಯಾರು ನೀಡದ ತೊಂದರೆಗಳನ್ನು ನೀಡುತ್ತಿದೆ. ಶಿಕ್ಷಣ ಸಚಿವರಿಗೆ ಕನ್ನಡದ ಗಂಧವೇ ತಿಳಿದಿಲ್ಲ, ಶಿಕ್ಷಣ ನೀತಿಗಳು ಅರಿತಿಲ್ಲ ಇಂಥವರಿಂದ ಏನು ತಾನೇ ಅಭಿವೃದ್ದಿ ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದರು,
ಮೈತ್ರಿ ಮೂಲಕ ಚುನಾವಣೆಯನ್ನು ಎದುರಿಸಿ ವಿಧಾನ ಪರಿಷತ್ ಆಡಳಿತ ಚುಕ್ಕಾಣಿ ಹಿಡಿಯುವಂತಾಗ ಬೇಕು, ಕಾಂಗ್ರೇಸ್ ಸರ್ಕಾರದಿಂದ ಆಭಿವೃದ್ದಿ ಶೂನ್ಯವಾಗಿದೆ. ಮುಂದೆ ಒಳ್ಳೆಯ ದಿನಗಳು ಬರಲಿದೆ. ಎಲ್ಲರೂ ಲೋಕಸಭೆಯಲ್ಲಿ ಪ್ರಮಾಣಿಕವಾಗಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದಂತೆ ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯನಿರ್ವಹಿಸಿದಲ್ಲಿ ೪ನೇ ಬಾರಿ ವೈ.ಎ.ನಾರಾಯಣಸ್ವಾಮಿ ವಿಧಾನ ಪರಿಷತ್ ಹೋಗುವುದು ಖಚಿತವಾಗಿದೆ. ಈಗಾಗಲೇ ಮಲ್ಲೇಶ್ ಬಾಬು ಅವರು ಗೆದ್ದಿದ್ದಾರೆ. ಅದೇ ರೀತಿ ನಾರಾಯಣಸ್ವಾಮಿಯವರನ್ನು ಗೆಲ್ಲಿಸ ಬೇಕೆಂದು ಮನವಿ ಮಾಡಿದರು,
ಮಾಜಿ ವಿಧಾನ ಪರಿಷತ್ ಸದಸ್ಯ ತೊಪಲ್ಲಿ ಚೌಡರೆಡ್ಡಿ ಮಾತನಾಡಿ ನಾನು ಮೂರು ಬಾರಿ ಸ್ವರ್ಧಿಸಿ ಒಂದು ಭಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದೆ. ವೈ.ಎ.ಎನ್ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದಾರೆ. ಶಾಲಾ,ಕಾಲೇಜುಗಳ ಸ್ಥಾಪನೆಗೆ ಒತ್ತು ನೀಡಿದ್ದಾರೆ. ಉದ್ಯೋಗಗಳನ್ನು ಸೃಷ್ಠಿಸಿದ್ದಾರೆ. ಶಿಕ್ಷಕರ ನೂರಾರು ಸಮಸ್ಯೆಗಳನ್ನು ಬಗೆ ಹರಿಸುವ ಮೂಲಕ ಅಪಾರವಾದ ಅವಿಸ್ಮಾರಣೆಯ ಸೇವೆಯನ್ನು ಶಿಕ್ಷಕರ ಕ್ಷೇತ್ರಕ್ಕೆ ಸಲ್ಲಿಸಿದ್ದಾರೆ. ಅವರನ್ನು ೪ನೇ ಬಾರಿ ಆಯ್ಕೆ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳ ಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು,
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ. ಸದಾನಂದಗೌಡರು, ಮಾಜಿ ಸಂಸದ ಎಸ್.ಮುನಿಸ್ವಾಮಿ. ಎಂ.ಎಲ್.ಸಿ. ಗೋವಿಂದರಾಜು, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಮಂಜುನಾಥ್ ಗೌಡ, ವೈ.ಸಂಪಂಗಿ, ಮುನಿವೆಂಕಟಪ್ಪ, ಎಸ್.ಬಿ.ಮುನಿವೆಂಕಟಪ್ಪ, ವಾಸು, ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜ್ ,ಡಾ.ಮೌನಿ ಬಾವು. ಕೆ.ಬಿ.ಗೋಪಾಲಕೃಷ್ಣ, ಮೂರಂಡಹಳ್ಳಿ ಗೋಪಾಲ್, ನವೀನ್, ಬೆಗ್ಲಿ ಸೂರ್ಯಪ್ರಕಾಶ್,ವಿಜಯಕುಮಾರ್, ಓಂಶಕ್ತಿಚಲಪತಿ, ಮುಂತಾದವರು ಇದ್ದರು,