ವೈ.ಎ.ಎನ್. ಗೆಲ್ಲಿಸಲು ಕುಮಾರಸ್ವಾಮಿ ಕರೆ
ಕೋಲಾರ,ಮೇ,೨೮-ವಿಧಾನ ಪರಿಷತ್ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷವು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿ ಕೊಂಡು ಚುನಾವಣೆಯನ್ನು ಪ್ರಥಮ ಬಾರಿಗೆ ಎದುರಿಸುವ ಮೂಲಕ ಹೊಸ ದಾಖಲೆ ಮಾಡಿದೆ. ಅಗ್ನೇಯ ಕ್ಷೇತ್ರಕ್ಕೆ ವೈ.ಎ.ನಾರಾಯಣಸ್ವಾಮಿಯವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಶಿಕ್ಷಕರ ದನಿಯಾಗಿ ಗುರುತಿಸಿ ಕೊಂಡಿರುವ ವೈ.ಎ.ನಾರಾಯಣಸ್ವಾಮಿ ಈಗಾಗಲೆ ೩ ಭಾರಿ ಆಯ್ಕೆಯಾಗಿದ್ದು, ೪ನೇ ಭಾರಿ ಎದುರಿಸುತ್ತಿರುವ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸುವಂತೆ ಮಾಡ ಬೇಕೆಂದು ಮಾಜಿ ಮುಖ್ಯ ಮಂತ್ರಿ ಹಾಗೂ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕರೆ ನೀಡಿದರು,
ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂದಿರದಲ್ಲಿ ಬಿಜೆಪಿ-ಜೆ.ಡಿ.ಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಅಗ್ನೇಯ ಶಿಕ್ಷಕರ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,ಬಿಜೆಪಿಯೊಂದಿಗೆ ಜೆ.ಡಿ.ಎಸ್. ಪಕ್ಷವು ಮೈತ್ರಿ ಮಾಡಿಕೊಂಡು ಜಿಲ್ಲೆಯ ೬ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದಂತೆ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡ ಬೇಕಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಒಂದು ಲಕ್ಷ ಮಂದಿ ಶಾಲಾ ಕಾಲೇಜುಗಳ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಾತಿಯನ್ನು ಮಾಡಲಾಗಿತ್ತು ಎಂದು ನೆನಪಿಸಿದ ಅವರು ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಶಿಕ್ಷಕರ ಕ್ಷೇತ್ರದ ಯಾವೂದೇ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡೆಸಿದರು
ಮಾಜಿ ಮುಖ್ಯ ಮಂತ್ರಿ ಸದಾನಂದಗೌಡ ಮಾತನಾಡಿ ರಾಜ್ಯದಲ್ಲಿ ಹೊಸ ರಾಜಕಾರಣದ ವಾತವರಣ ಸೃಷ್ಠಿಯಾಗಿದ್ದು ಸಮಾನ ಮನಸ್ಕರೊಂದಿಗೆ ಮೈತ್ರಿ ಮಾಡಿ ಕೊಂಡಿರುವುದು ಎಲ್ಲರಲ್ಲೂ ಹುಮ್ಮಸ್ಸು ಉಂಟು ಮಾಡಿದೆ ಎಂದು ಹೇಳಿದರು,
ಮಾಜಿ ಉಪಮುಖ್ಯ ಮಂತ್ರಿ ಡಾ.ಅಶ್ವಥ್ ನಾರಾಯಣಗೌಡ ಮಾತನಾಡಿ ಬಿಜಿಪಿ ಆಡಳಿತದಲ್ಲಿ ಶಿಕ್ಷಕರ ಕ್ಷೇತ್ರದ ಕ್ರಾಂತಿಕಾರಿ ಬೇಡಿಕೆಗಳನ್ನು ಈಡೇರಿಸಿದೆ. ಶಿಕ್ಷಕರ ಹಿತ ಕಾಪಾಡಲು ಪಣ ತೊಟ್ಟಿರುವ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರು,
ಬಿಜೆಪಿ ಮತ್ತು ಜೆ.ಡಿ.ಎಸ್. ಆಡಳಿತದಲ್ಲಿ ರಾಜ್ಯದಲ್ಲಿ ಅನೇಕ ಜನಪರ ಯೋಜನೆಗಳು ಜಾರಿಗೆ ಬಂದವು, ನೀರಾವರಿ ಯೋಜನೆಗಳು, ರೈತರ ಪರ, ಮಹಿಳೆಯರ ಪರ ಸೇರಿದಂತೆ ಅನೇಕ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರಲಾಯಿತು ಅದರೆ ಕಾಂಗ್ರೇಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿದು ಒಂದು ವರ್ಷ ಕಳೆದರೂ ಇನ್ನು ೫ ಉಚಿತ ಯೋಜನೆಗಳಲ್ಲಿ ತೊಕಡಿಸುತ್ತಿದೆ ಹೊರತಾಗಿ ಬೇರೆ ಯಾವ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿದರು,
ಕೋಲಾರವು ರಾಜ್ಯಕ್ಕೆ ಮೊದಲನೇ ಮುಖ್ಯ ಮಂತ್ರಿ ನೀಡದ್ದು ಮಾತ್ರವಲ್ಲ ಶಿಕ್ಷಣ ಕ್ಷೇತ್ರದಲ್ಲಿ ಅನೇಕರು, ಐ.ಎ.ಎಸ್. ಕೆ.ಎ.ಎಸ್. ಅಧಿಕಾರಿಗಳು, ಕೃಷಿ ತೋಟಗಾರಿಕೆ, ಹೈನುಗಾರಿಕೆ ಮುಂದಾವುಗಳಲ್ಲಿ ಖ್ಯಾತಿ ಪಡೆದಿರುವ ಜೂತೆಗೆ ಅಗ್ನೆಯ ಕ್ಷೇತ್ರವು ವೈ.ಎ.ನಾರಾಯಣಸ್ವಾಮಿಯವರ ಭದ್ರ ಕೋಟೆಯಾಗಿದೆ. ಶಿಕ್ಷಕರ ಹಿತ ಕಾಪಾಡುವ, ಶಿಕ್ಷಕರಿಗೆ ಸಾಮಾಜಿಕ ನ್ಯಾಯ ದೊರಕಿಸುವ ನಾರಾಯಣಸ್ವಾಮಿ ಈಗಾಗಲೇ ೩ ಬಾರಿ ಆಯ್ಕೆಯಾಗಿದ್ದು ೪ನೇ ಬಾರಿಯೂ ಭಾರಿ ಅಂತರದಲ್ಲಿ ಗೆಲುವು ತಂದು ಕೊಡ ಬೇಕೆಂದು ಮನವಿ ಮಾಡಿದರು.ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ಬೇಡಿಕೆಗಳ ಕುರಿತು ಮನದಟ್ಟು ಮಾಡಿ ಮತಯಾಚಿಸುವಂತಾಗ ಬೇಕು ಶಿಕ್ಷಕರು ತಮಗೆ ಒಳ್ಳೆಯದಾಗ ಬೇಕಾದರೆ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಗೆ ಮತ ಚಲಾಯಿಸ ಬೇಕೆಂದು ಮನವಿ ಮಾಡಿದರು,
ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ. ಮಾಜಿ ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ತೊಪಲ್ಲಿ ಚೌಡರೆಡ್ಡಿ, ಶಾಸಕ ಸಮೃದ್ದಿ ಮಂಜುನಾಥ್, ವೆಂಕಟಶಿವಾರೆಡ್ಡಿ, ಮಾತನಾಡಿದರು,
ಲೋಕಸಭಾ ಮೈತ್ರಿ ಅಭ್ಯೆರ್ಥಿ ಮಲ್ಲೇಶ್ ಬಾಬು. ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ವಿಧಾನ ಪರಿಷತ್ ಸದಸ್ಯ ಮಾಜಿ ಶಾಸಕ ವೈ.ಸಂಪಂಗಿ,ಮಂಜುನಾಥ್ ಗೌಡ,ಮುನಿವೆಂಕಟಪ್ಪ,ರಾಮೇಗೌಡ, ಡಾ.ವೇಣುಗೋಪಾಲ್, ಎಸ್.ಬಿ.ಮುನಿವೆಂಕಟಪ್ಪ, ವಕ್ಕಲೇರಿ ರಾಮು, ವಾಸುದೇವ್, ಓಂಶಕ್ತಿ ಚಲಪತಿ, ಬೆಗ್ಲಿ ಸೂರ್ಯಪ್ರಕಾಶ್, ವಿಜಯಕುಮಾರ್, ಕೆ.ಬಿ.ಗೋಪಾಲಕೃಷ್ಣ, ಸಿ.ಎಂ.ಆರ್. ಶ್ರೀನಾಥ್, ಸಿ.ಡಿ.ರಾಮಚಂದ್ರ, ಬಣಕನಹಳ್ಳಿ ನಟರಾಜ್, ಡಾ.ಬಾಬು ಮೌನಿ, ಮಾಗೇರಿನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು,