ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷ ನಾಯಕ ಆರ್.ಆಶೋಕ್ ಅಗ್ರಹ
ಕೋಲಾರ, ಮೇ,೨೮- ಕರ್ನಾಟಕದ ರಾಜ್ಯದ ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ ಸಚಿವರ ಭ್ರಷ್ಟಚಾರ ದಿಂದಾಗಿ ಲೆಕ್ಕ ಪರಿಶೋಧಕ ಚಂದ್ರಶೇಖರ್ ಎಂಬುವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿ ಕೊಂಡಿರುವ ಹಿನ್ನಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡ ಬೇಕೆಂದು ರಾಜ್ಯ ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಆಗ್ರಹ ಪಡೆಸಿದರು,
ನಗರದ ಸಿ.ಎಂ.ಆರ್. ಗೃಹ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿ ಇಷ್ಟು ದಿನಗಳಿಂದ ರಾಜ್ಯದಲ್ಲಿ ಆಡಳಿತರೊಢ ಕಾಂಗ್ರೇಸ್ ಸರ್ಕಾರವನ್ನು ಲೊಟಿ ಸರ್ಕಾರ ಎಂದು ಟೀಕಿಸುತ್ತಿದ್ದವರಿಗೆ ಸಿದ್ದರಾಮಯ್ಯನವರು ದಾಖಲೆಗಳು ಕೇಳುತ್ತಿದ್ದರು. ಈಗಾ ಲೆಕ್ಕ ಪರಿಶೋಧಕ ಚಂದ್ರಶೇಖರ್ ಎಂಬುವರು ಸರ್ಕಾರದಲ್ಲಿ ೮೭ ಕೋಟಿ ರೂ ಅವ್ಯವಹಾರಗಳು ನಡೆದಿದ್ದು, ಇದರಲ್ಲಿ ಅನೇಕ ಸಚಿವರು ಭಾಗಿಯಾಗಿರುವ ಬಗ್ಗೆ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ. ಅದರೆ ಸಚಿವರ ಹೆಸರುಗಳನ್ನು ನಮೋಧಿಸದ ಕಾರಣ ಪೊಲೀಸರು ಸಚಿವರ ಮೇಲೆ ಎಫ್.ಐ.ಆರ್ ದಾಖಲು ಮಾಡಿಲ್ಲ ಎಂದಿದ್ದಾರೆ ಒಟ್ಟಾರೆಯಾಗಿ ಕಾಂಗ್ರೇಸ್ ಸರ್ಕಾರ ಲೊಟಿ ಬ್ರಾಂಡ್ ಸರ್ಕಾರ ಎನ್ನಲು ಇದಕ್ಕಿಂತ ಮತ್ತೊಂದು ದಾಖಲೆ ಬೇಕೆ ? ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು,
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗಳು ತೀರ ಹದಗೆಟ್ಟಿದೆ. ಕೊಲೆ, ಸುಲಿಗೆ, ಅತ್ಯಾಚಾರ, ಕಳವು ಇತ್ಯಾದಿಗಳು ಹೆಚ್ಚಾಗಿವೆ. ಮನೆಯಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಅಗುತ್ತಾರೆ ಎಂಬ ನಂಬಿಕೆಯೇ ಇಲ್ಲವಾಗಿದ್ದು ಮಹಿಳೆರ ಬದುಕಿಗೆ ಕಾಂಗ್ರೇಸ್ ಸರ್ಕಾರದಲ್ಲಿ ಗ್ಯಾರೆಂಟಿಯೇ ಇಲ್ಲವಾಗಿದೆ. ಅಭಿವೃದ್ದಿ ಎಂಬುವುದು ನೆನಗುದಿಗೆ ಬಿದ್ದಿದೆ ಶಾಸಕರು ಅಭಿವೃದ್ದಿಗೆ ಹಣ ಕೇಳಿದರೆ ಗ್ಯಾರೆಂಟಿಗಳಿಗೆಯೇ ಹಣ ಸಾಲಾದಾಗಿದೆ. ಇನ್ನು ಅಭಿವೃದ್ದಿಗೆ ಎಲ್ಲಿಂದ ಹಣ ತರೋಣಾ ಎನ್ನುತ್ತಾರಂತೆ ಶಾಸಕರು ಮುಖ್ಯ ಮಂತ್ರಿಗಳಿಗೆ ಮನವಿ ಮಾಡುವ ಅಭಿವೃದ್ದಿ ಶಿಫಾರಿಸ್ಸಿನ ಅರ್ಜಿಗಳು ಕಸದ ಬುಟ್ಟಿ ಸೇರುತ್ತಿದೆ ಎಂದು ದೂರಿದರು,
ರಾಜ್ಯದ ರಾಜಧಾನಿ ಲೊಟಿ ಬೆಂಗಳೂರು ಅಗಿದೆ. ಕುಡಿಯಲು ನೀರಿಗೆ ಆಹಾಕಾರ ಇದೆ. ಬಂಡವಾಳ ಹೂಡಿಕೆದಾರರಿಗೆ ಬೆಂಗಳೂರಿನಲ್ಲಿ ನೀರಿಲ್ಲ. ಕೇರಳಗೆ ಬನ್ನಿ …ಹೈದರಾಬಾದ್‌ಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರಂತೆ,ರಾಜ್ಯದಲ್ಲಿ ಹೊಡಿಕೆ ಮಾಡಿರುವ ಕೈಗಾರಿಕೆ ಉದ್ಯಮಿಗಳು ರಾಜ್ಯದಿಂದ ಪಲಾಯಾನ ಮಾಡಲು ಚಿಂತಿಸುತ್ತಿದ್ದು ಹೊಡಿಕೆ ಬಂಡಾವಳವನ್ನು ವಾಪಸ್ ಪಡೆಯುವುದು ಹೇಗೆಂದು ಪರಸ್ಪರ ಚರ್ಚಿಸುತ್ತಿದ್ದಾರೆ ಎಂದು ಹೇಳಿದರು,
ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಮೂರು ಬಾರಿ ಸ್ವರ್ಧಿಸಿ ಬಹಳ ಅಂತರದಲ್ಲಿ ಗೆಲವು ಸಾಧಿಸಿದ್ದರು ಅದೇ ರೀತಿ ಶಿಕ್ಷಕರ ಒತ್ತಾಯದ ಮೇರೆಗೆ ಎನ್.ಡಿ.ಎ. ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದೆ.ಈ ಬಾರಿ ಇನ್ನು ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡ ಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು,
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕರಾದ ವೈ.ಸಂಪಂಗಿ, ಕೆ.ಮಂಜುನಾಥ್‌ಗೌಡ, ವಿಧಾನ ಪರಿಷತ್ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಉಪಸ್ಥಿತರಿದ್ದರು,