ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ
ಕಲಬುರಗಿ:ಮೇ.27:ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, 6ನೇ ಪಡೆ ಕೆ.ಎಸ್.ಆರ್.ಪಿ., ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ”ಯನ್ನು ಕಲಬುರಗಿ ಸುಲ್ತಾನಪುರದ 6ನೇ ಕೆ.ಎಸ್.ಆರ್.ಪಿ. ಪಡೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ವ್ಹಿ ಸ್ವಾಮಿ ಅವರು, ದೈಹಿಕ ಆರೋಗ್ಯವು ಎಷ್ಟು ಮುಖ್ಯವೊ ಮಾನಸಿಕ ಆರೋಗ್ಯವು ಅμÉ್ಟೀ ಮುಖ್ಯವಾಗಿದೆ. ಎಲ್ಲರೂ ಒತ್ತಡ ರಹಿತ ಜೀವನ ನಡೆಸಬೇಕು. ಯಾವುದೆ ಕೆಲಸವನ್ನು ಮಾಡಬೇಕಾದರೆ ಇಷ್ಟಪಟ್ಟು ಕೆಲಸ ಮಾಡಬೇಕು. ಅದು ಕಠಿಣವಿದ್ದರು ಇದರಲ್ಲಿ ಸುಲಭವಾಗಿ ಯಶಸ್ವಿ ಸಿಗಲಿದೆ ಎಂದರು.
ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ರಾಜಕುಮಾರ ಎ ಕುಲಕರ್ಣಿ ಮಾತನಾಡಿ, ಯಾವುದೇ ರೀತಿಯ ಮಾನಸಿಕ ಆರೋಗ್ಯ ಕಾಯಿಲೆ ಇದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ರೀತಿ ಮಾನಸಿಕ ಆರೋಗ್ಯ ಕಾಯಿಲೆಯಿಂದ ಬಳಲುತ್ತಿದರೆ ಉಚಿತ ಆಪ್ತ ಸಮಾಲೋಚನೆಗಾಗಿ 14416 ಟೇಲಿ ಮಾನಸ್ ಉಚಿತ ಸಹಾಯವಾಣಿಗೆ ಕರೆಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಮಹಮ್ಮದ್ ಇರಫಾನ್ ಮಹಾಗಾವಿ ಮಾತನಾಡಿ, ಸ್ಕಿಜೋಫ್ರೀನಿಯಾ ಕಾಯಿಲೆಯ ಲಕ್ಷಣ, ಕಾರಣ ಮತ್ತು ಚಿಕಿತ್ಸಾ ವಿಧಾನ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲಬುರಗಿ ಸುಲ್ತಾನಪುರ ಕೆ.ಎಸ್.ಆರ್.ಪಿ. 6ನೇ ಪಡೆಯ ಕಮಾಂಡೆಂಟ್ ಬಸವರಾಜ ಜಿಳ್ಳೆ ಮಾತನಾಡಿದರು. ಕಲಬುರಗಿ ಕೆ.ಎಸ್.ಆರ್.ಪಿ. ಸಹಾಯಕ ಕಮಾಂಡೆಂಟ್ ಶರಣಬಸು ಕೋಲಾರಿ, ಆರ್.ಪಿ.ಐ. ಗಳಾದ ನಾಗೇಶ ಕುಂಬಾರ ಉಪಸ್ಥಿತರಿದ್ದರು.
ಕಲಬುರಗಿ ಕೆ.ಎಸ್.ಆರ್.ಪಿ. ಆರ್.ಪಿ.ಐ. ದತಾತ್ರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಬಿರಾದರ ಸ್ವಾಗತಿಸಿದರು. ಕೆ.ಎಸ್.ಆರ್.ಪಿ. ಸಹಾಯಕ ಕಮಾಂಡೆಂಟ್ ಶರಣಬಸು ಕೋಲಾರಿ ವಂದಿಸಿದರು.