ಬೆಂಕಿ ಅವಘಡ: 300 ಲಿಂಬೆ ಗಿಡಗಳು ಭಸ್ಮ
ವಿಜಯಪುರ, ಮೇ.27:ಆಕಸ್ಮಿಕ ಅಗ್ನಿ ಅವಘಡದಿಂದಾಗಿ ನೂರಾರು ನಿಂಬೆ ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ
ಜಿಲ್ಲೆಯ ಇಂಡಿ ಪಟ್ಟಣದ ಹೊರ ವಲಯದ ಹಂಜಗಿ ರಸ್ತೆಯಲ್ಲಿ ಸಂಭವಿಸಿದೆ.
ಚಂದ್ರಶೇಖರ ಸಾಲೋಟಗಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಇರುವ ಸುಮಾರು 300 ಲಿಂಬೆ ಗಿಡಗಳು ಭಸ್ಮವಾಗಿವೆ.
ಬರಗಾಲದಲ್ಲಿ ಟ್ಯಾಂಕರ್ ನೀರು ಹಾಕಿ ಬೆಳೆಸಿದ್ದ ಲಿಂಬೆ ಗಿಡಗಳು ಸುಟ್ಟು ಕರಕಲಾಗಿವೆ.
ಜೀವನಕ್ಕೆ ಆಧಾರವಾಗದ್ದ ಲಿಂಬೆ ಗಿಡಗಳನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ.
ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತ ಒತ್ತಾಯಿಸಿದ್ದಾರೆ.
ಲಿಂಬೆ ಗಿಡಗಳಿಗೆ ಬೆಂಕಿ ಹೊತ್ತಿರುವ ಬಗ್ಗೆ ನಿಖರ ಕಾತಣ ಗೊತ್ತಾಗಿಲ್ಲ. ಅದು ನಿಗೂಢವಾಗಿದೆ.
ಶಾರ್ಟ್ ಸಕ್ರ್ಯೂಟ್ ನಿಂದ ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಇಂಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.