ಜ್ಞಾನ ವಿಕಾಸ ಕಾರ್ಯಕ್ರಮ: ಬೀದಿ ನಾಟಕ ಪ್ರದರ್ಶನ
ಪರಹತಾಬಾದ,ಮೇ.27-ಕಲಬುರಗಿ ತಾಲೂಕಿನ ಸಿರನೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ದಾವಣಗೆರೆ ಶ್ರುತಿ ಸಾಂಸ್ಕøತಿಕ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಗುರುಬಸಪ್ಪ ಸಜ್ಜನಶೆಟ್ಟಿ ಅವರು ದೀಪ ಬೆಳಗಿಸಿ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ವತಿಯಿಂದ ಕರ್ನಾಟಕದ್ದಂತ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಲವಾರು ಯೋಜನೆಗಳು ತಂದಿದ್ದಾರೆ. ನಿರ್ಗತಿಕರಿಗೆ ಸೂರು ನಿರ್ಮಾಣ, ಆರ್ಥಿಕವಾಗಿ ಹಿಂದುಳಿದವರಿಗೆ ಧನಸಾಯ, ಮಹಿಳಾ ಸಂಘದ ಸದಸ್ಯರ ಮಕ್ಕಳಿಗೆ ಶಿಶುವೇತನ ಕೊಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.
ದಿನನಿತ್ಯ ಬಳಸುವ ಪ್ಲಾಸ್ಟಿಕ್ ಅನ್ನು ನೀರವಲಗಿ ಹಚ್ಚುವುದರಿಂದ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಯೋಜನಾಧಿಕಾರಿ ರಿಯಾಜ ಅಕ್ತರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಶುದ್ಧ ಗಂಗಾ ಘಟಕ, ನಮ್ಮ ಊರು ನಮ್ಮ ಕೆರೆ, ಪರಿಸರ ಕಾರ್ಯಕ್ರಮ, ವಾತ್ಸಲ್ಯ ಕಾರ್ಯಕ್ರಮ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ದಾವಣಗೆರೆ ಶ್ರುತಿ ಸಾಂಸ್ಕೃತಿಕ ಕಲಾ ತಂಡದವರಿಂದ ನೀರು ಉಳಿಸಿ ಅಭಿಯಾನದ ಬಗ್ಗೆ, ಪರಿಸರ ಸಂರಕ್ಷಣೆ ಬಗ್ಗೆ, ಸ್ವಚ್ಛ ತೆ ಬಗ್ಗೆ, ಶೌಚಾಲಯ ಬಳಕೆಯ ಬಗ್ಗೆ, ಬಾಲ್ಯ ವಿವಾಹ ನಿಷೇದದಬಗ್ಗೆ. ಗ್ರಾಮ ಪಂಚಾಯತಿಯಿಂದ
ಜನರಿಗೆ ಸಿಗುವ ಸೌಲಭ್ಯಗಳನ್ನು ಮಾಹಿತಿ ನೀಡಿದರು ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಟನಾಟಕ ಹಾಗೂ ಜಾಗೃತಿ ಗೀತೆ ಗಳ ಮೂಲಕ ಅರಿವು ಮೂಡಿಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ನಿಂಗಪ್ಪ ಗುತ್ತೇದಾರ, ವಲಯದ ಮೇಲ್ವಿಚಾರಕರಾದ ಅಮರ ಮೂಗಳೇ.ಜಿಲ್ಲಾ ಜ್ಞಾನ ವಿಕಾಸ ಮಹಿಳಾ ಸಮನ್ವಯಾಧಿಕಾರಿ ಮಮತಾ ಪಿ ಸುವರ್ಣ ಅವರು ನಿರೂಪಿಸಿದರು. ಸೇವಾ ಪ್ರತಿನಿಧಿ ಪ್ರೀತಿ, ಕೇಂದ್ರದ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.