ಅಯೋಧ್ಯೆಗೆ ಹೋದಾಗ ಮನೆ ಕಳವು
ಕಲಬುರಗಿ,ಮೇ.27-ಶ್ರೀರಾಮ ಮಂದಿರ ದರ್ಶನಕ್ಕೆಂದು ಕುಟುಂಬದ ಸದಸ್ಯರೆಲ್ಲ ಮನೆಗೆ ಬೀಗ ಹಾಕಿಕೊಂಡು ಅಯೋಧ್ಯೆಗೆ ತೆರಳಿದ್ದಾಗ ಕಳ್ಳರು ಮನೆಯ ಹಿಂದಿನ ಕಿಟಕಿಯ ಗ್ರಿಲ್ ಮುರಿದು ಮನೆಯೊಳಗೆ ನುಗ್ಗಿ 1.45 ಲಕ್ಷ ರೂ.ಮೊತ್ತದ ನಗ-ನಾಣ್ಯ, ಬಟ್ಟೆ, ಬಂಗಾರ ಮತ್ತು ಬೆಳ್ಳಿ ಸಾಮಾನು ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಿಕೊಂಡು ಹೋಗಿರುವ ಘಟನೆ ಹಳೆ ಜೇವರ್ಗಿ ರಸ್ತೆಯ ಬನಶಂಕರಿ ನಗರದಲ್ಲಿ ನಡೆದಿದೆ.
ಶ್ರೀಹರಿ ಗುಗ್ಗರಿ ಎಂಬುವವರ ಮನೆಯೇ ಕಳವಾಗಿದ್ದು, ಇವರು ಕುಟುಂಬದ ಸದಸ್ಯರೊಂದಿಗೆ ಶ್ರೀರಾಮ ಮಂದಿರ ದರ್ಶನಕ್ಕೆಂದು ಅಯೋಧ್ಯೆಗೆ ತೆರಳಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.