ಬಸ್-ಬೈಕ್ ನಡುವೆ ಡಿಕ್ಕಿ: ಮೂವರ ಸಾವು
ಕಲಬುರಗಿ,ಮೇ.27-ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಡೊಂಗರಗಾಂವ ಕ್ರಾಸ್ ಹತ್ತಿರ ಇಂದು ಬೆಳಿಗ್ಗೆ 8.30ರ ಸುಮಾರಿಗೆ ನಡೆದಿದೆ.
ಮೃತರನ್ನು ಕಿಣ್ಣಿ ಸಡಕ್ ಗ್ರಾಮದ ವಿಶಾಲ ತಂದೆ ಸಂಜಯಕುಮಾರ (17), ಚಂದ್ರಕಾಂತ ತಂದೆ ನಿಂಗಪ್ಪ (20) ಮತ್ತು ಸಮೀರ್ ತಂದೆ ಜಮೀರುದ್ದಿನ್ (23) ಎಂದು ಗುರುತಿಸಲಾಗಿದೆ.
ಬಸ್ ವಿಜಯಪುರದಿಂದ ಬಸವಕಲ್ಯಾಣಕ್ಕೆ ಹೊರಟಿತ್ತು. ಬೈಕ್ ಮೇಲೆ ಮೂವರು ಗೆಳೆಯರು ಕಿಣ್ಣಿ ಸಡಕ್‍ನಿಂದ ಕಮಲಾಪುರಕ್ಕೆ ಹೊರಟಿದ್ದರು. ಡೊಂಗರಗಾಂವ ಕ್ರಾಸ್ ಹತ್ತಿರ ¨ಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಸಿಪಿಐ, ಕಮಲಾಪುರ ಪಿಎಸ್‍ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.