ಮಂಗಲಗಿಯಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ
ಕಲಬುರಗಿ,ಮೇ.27-ಕಲ್ಯಾಣ ಕರ್ನಾಟಕದ ಯುವ ಗಾಯಕ ದಿವಂಗತ ವಿಠ್ಠಲ ಕುಮಾರ ಮಂಗಲಗಿಯವರ ಪ್ರಥಮ ಪುಣ್ಯಸ್ಮರಣೋತ್ಸವ ಅಂಗವಾಗಿ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿದ ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ರಾಜ್ಯಾಧ್ಯಕ್ಷ ಬಂಡಯ್ಯ ಸ್ವಾಮೀಜಿ ಸುಂಟನೂರ ಮಾತನಾಡುತ್ತ, ಕಲಾವಿದನಿಗೆ ಸಾವು ಬರಬಹುದು. ಆದರೆ, ಕಲಾವಿದನೊಳಗಿರುವ ಕಲೆ ಯಾವತ್ತೂ ಅಚ್ಚಳಿಯದೆ ಜನಮಾನಸದಲ್ಲಿ ಉಳಿದಿರುತ್ತದೆ ಇಂಥವರ ಸಾಲಿಗೆ ವಿಠ್ಠಲ ಕುಮಾರ ಮಂಗಲಗಿ ಅವರು ಸೇರುತ್ತಾರೆ ಎಂದರು.
ಇದೆ ಸಂದರ್ಭದಲ್ಲಿ ಮಂಗಲಗಿ ಸಿದ್ದಲಿಂಗ ಮಹಾರಾಜರ ಪುಣ್ಯಾಶ್ರಮದ ಒಡೆಯರಾದ ಗುರುನಾಥ ಮಹಾರಾಜರು ಸಮ್ಮುಖ ವಹಿಸಿದ್ದರು. ಕಲಾವಿದರಾದ ಮಹೇಶ ತುಪ್ಪದ, ವಿರೇಂದ್ರ ಬಂಟನಳ್ಳಿ, ಕಲ್ಲಯ್ಯ ಸ್ವಾಮಿ, ಬಂಡಯ್ಯ ಶಾಸ್ತ್ರಿಗಳು ಸುಂಟನೂರ, ಸ್ವೇತಾ ಪಾಟೀಲ್, ಶಿವಶಂಕರ ಕೊಡದುರ, ನಿಜಲಿಂಗ ಶೇಳಗ, ಅಭಿಷೇಕ ಕೋಡ್ಲಾ, ಮೌನೇಶ ಗ್ವೌನಳ್ಳಿ, ಸುರೇಶ್ ನಿಡಗುಂದಾ, ವೀರಭದ್ರ ಹಡಗಿಲ್, ಶಿವಕುಮಾರ್ ಉಡಗಿ, ಕೃಷ್ಣ ರಟಕಲ್ಲ, ಈಶ್ವರ್ ಸಿರೋಳಿ, ಜಯಾಪಾರ ರಡ್ಡಿ, ರಾಜು ಅಶೋಕ ನಗರ ಇನ್ನೂ ಜಿಲ್ಲೆಯ ಅನೇಕ ಕಲಾವಿದರು ಮತ್ತು ಮಂಗಲಗಿ ಗ್ರಾಮಸ್ಥರು ಭಾಗವಹಿಸಿದ್ದರು.