ಪೌರ ಕಾರ್ಮಿಕರ ಕಾರ್ಯ ಶ್ಲ್ಯಾಘನೀಯ
ಬೈಲಹೊಂಗಲ,ಸೆ24: ಸ್ವಚ್ಛತೆಯಲ್ಲಿ ಬೈಲಹೊಂಗಲ ಪುರಸಭೆ ರಾಜ್ಯದಲ್ಲಿ 2 ನೇಯ ಸ್ಥಾನ ಪಡೆಯುವಲ್ಲಿ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ವೆಂದು ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ತಿಳಿಸಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಉತ್ತಮ ಕಾರ್ಯವೈಖರಿಯಿಂದಾಗಿ ಈಗಾಗಲೇ ಬೈಲಹೊಂಗಲ ಪುರಸಭೆ ರಾಜ್ಯದಲ್ಲಿ 2ನೇ ಸ್ಥಾನ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಪಟ್ಟಣದ ಸ್ವಚ್ಛತೆಯ ಕಾರ್ಯದೊಂದಿಗೆ ಕೆಲಸದ ಸಂದರ್ಭದಲ್ಲಿ ಅವಶ್ಯಕ ಸುರಕ್ಷತಾ ಸಾಮಗ್ರಿಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ವೀರೇಶ್ ಹಸಬಿ ಮಾತನಾಡಿ, ಪೌರ ಕಾರ್ಮಿಕ ದಿನಾಚರಣೆ ಪ್ರಯುಕ್ತ ಆರೋಗ್ಯ ತಪಾಸಣೆ, ಕ್ರೀಡಾಕೂಟ ಹಾಗೂ ಇನ್ನಿತರೇ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳ ಆಯೋಜನೆ ಮೂಲಕ ದಿನಾಚರಣೆ ಆಚರಿಸಲಾಗುತ್ತಿದ್ದು, ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಪುರಸಭೆ ಸದಸ್ಯರಾದ ಬಾಬು ಕುಡಸೋಮಣ್ಣವರ,ರಾಜು ಜನ್ಮಟ್ಟಿ, ಅರ್ಜುನ ಕಲಕುಟಕರ ವಾಣಿಶ್ರೀ ಪತ್ತಾರ ಮಾತನಾಡಿದರು.
ಸ್ವಚ್ಛತೆಯೇ ಸೇವೆ ಅಭಿಯಾನದ ಸಫಾಯಿ ಮಿತ್ರ ಸುರಕ್ಷಾ ಶಿಬಿರದಲ್ಲಿ ವಿಜೇತರಿಗೆ ಪಾರಿತೋಷಕ ನೀಡಿ, ಉತ್ತಮ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಇದೇ ವೇಳೆ ಪೌರ ಕಾರ್ಮಿಕರ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ, ಜಗದೀಶ ನಿಂಗಪ್ಪ, ಜಂಬಗಿ, ಶ್ರೀಮತಿ ಅಮೀರಬಿ ಗೌಸಸಾಬ ಬಾಗವಾನ, ಶ್ರೀಮತಿ ಹೇಮಲತಾ ಮಹೇಶ ಹಿರೇಮಠ, ಶ್ರೀಮತಿ ಶ್ರೀದೇವಿ ಫಕ್ಕೀರಪ್ಪ ದೇವಲಾಪೂರ, ಶ್ರೀಮತಿ ದಿಲಶಾದ ಮುಸ್ತಾಕ ನದಾಫ ಮತ್ತು ಸಿಬ್ಬಂದಿಗಳಾದ ಜಿ. ಜಿ. ಮಹಾಳಂಕ,ಎಸ್. ಆರ್. ಹಳ್ಳೂರ, ಶ್ರೀಮತಿ ಎಮ್. ಎಸ್. ನಡಕಟ್ಟಿನ,ಎಸ್.ಎನ್.ಪಾಟೀಲ,ಎ. ವಾಯ್. ಹೆಗಡೆ,ಎಸ್.ಎಸ್.ನರಗುಂದ, ಡಿ.ಎಮ್.ಖಲೀಫ್,ಭೀಮಶಿ ಖಾನಪ್ಪನವರ,ಸುರೇಶ ದುರದುಂಡಿ, ಶ್ರೀಮತಿ ಲಕ್ಷ್ಮೀ ಮಾದರ, ಶ್ರೀಮತಿ ಸಂತೋಷಿ ಪೆÇೀಳ ಹಾಗೂ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಎಮ್. ಐ. ಕುಟ್ರಿ ಸ್ವಾಗತಿಸಿದರು, ಬಿ. ಆಯ್. ಗುಡಿಮನಿ ಸ್ವಚ್ಛತಾ ಶಪಥ್ ಬೋಧಿಸಿದರು, ಆರ್. ಎಸ್. ಹಿಟ್ಟಣಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.