ವೈಟ್ ಈಗಲ್ ಸ್ಪೋರ್ಟ್ಸ್ ಕ್ಲಬ್‌ನಿಂದ ವಾಲಿಬಾಲ್ ಪಂದ್ಯಾವಳಿ
ಆನೇಕಲ್.ಸೆ೨೪:ಕ್ರೀಡೆ ನಮ್ಮ ಜೀವನದ ಪ್ರಮುಖ ಬಾಗವಾಗಿದ್ದು ಎಲ್ಲರೂ ಕ್ರೀಡಾ ಮನೋಭಾವ ಬೆಳಸಿಕೊಳ್ಳಬೇಕು ಎಂದು ಹೋರಾಟಗಾರ ಸರ್ಜಾಪುರ ಶ್ರೀರಾಮುಲು ತಿಳಿಸಿದರು.ಅವರು ಸರ್ಜಾಪುರದ ಡಾ ಬಿ.ಆರ್.ಅಂಬೇಡ್ಕರ್ ಆಟದ ಮೈದಾನದಲ್ಲಿ ವೈಟ್ ಈಗಲ್ ಸ್ಪೋಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಗವಹಿಸಿ ಮಾತನಾಡಿದರು. ಕ್ರೀಡೆಗಳು. ದೈಹಿಕ ಮತ್ತು ಮಾನಸಿಕವಾಗಿ ಮತ್ತು ನಮ್ಮ ಅಭಿವೃದ್ದಿಗೆ ಮೂಲವಾಗಿದ್ದು ಪ್ರತಿಯೊಬ್ಬರು ದಿನದಲ್ಲಿ ಒಂದು ಗಂಟೆಯಾದರೂ ಕ್ರೀಡೆ. ವ್ಯಾಯಾಮ, ದ್ಯಾನಕ್ಕೆ ಸಮಯವನ್ನು ಮೀಸಲಿಡಬೇಕು ಎಂದು ಹೇಳಿದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಸುಮಾರು ೨೦ಕ್ಕೂ ಹೆಚ್ಚು ತಂಡಗಳು ಬಾಗವಹಿಸಿದ್ದವು, ವಾಲಿಬಾಲ್ ಪಂದ್ಯಾವಳಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ವೈಟ್ ಈಗಲ್ ಇನ್ಪಾ ಹೋಮ್ಸ್ ಪ್ರವೇಟ್ ಲಿಮಿಟೆಡ್ ನ ಮುಖ್ಯಸ್ಥರು ಮಾಡಿಕೊಟ್ಟಿದ್ದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಆನೇಕಲ್ ಶಶಿಕುಮಾರ್. ಜೆ.ಎ.ಕೋಟಿಯಾರ್. ವೈಟ್ ಈಗಲ್ ಇನ್ಪಾ ಹೋಮ್ಸ್ ಪ್ರವೇಟ್ ಲಿಮಿಟೆಡ್ ಮುಖ್ಯಸ್ಥರಾದ ಸೈಯದ್ ಅಮಿನ್, ರಾಘವೇಂದ್ರ. ಮುಖಂಡರಾದ ಸರ್ಜಾಪುರ ಗೋವರ್ದನ್. ದೊಮ್ಮಸಂದ್ರ ಸಾಗರ್ ಮತ್ತು ಕ್ರೀಡಾಪಟುಗಳು ಬಾಗವಹಿಸಿದ್ದರು.