ಕಲ್ಯಾಣ ಕರ್ನಾಟಕದಲ್ಲಿ ಬಳ್ಳಾರಿಗೆ ತೀವ್ರ ಅನ್ಯಾಯಅಭಿವೃದ್ಧಿಗಾಗಿ ಉಪವಾಸ ಸತ್ಯಾಗ್ರಹ: ಪ್ರತಾಪ್ ರೆಡ್ಡಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.24: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಿಂದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತೀವ್ರ ಅನ್ಯಾಯವಾಗಿದೆ. ಈ ಬಗ್ಗೆ ಪ್ರತಿ ಪಕ್ಷಗಳು ಮೌನವಾಗಿವೆ ಅದಕ್ಕಾಗಿ ನಾನೇ ಸಧ್ಯದಲ್ಲೇ ಹಲವರೊಂದಿಗೆ ಸೇರಿ ಉಪವಾಸ ಸತ್ಯಾಗ್ರಹ ಎಂದು ಬುಡಾ ಮಾಜಿ ಅಧ್ಯಕ್ಷ  ನಾರಾ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ.  ಸೆ.17 ರಂದು ಕಲ್ಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ  ಅಭಿವೃದ್ದಿಗಾಗಿ ಐದು ಸಾವಿರ ಕೋಟಿ ರೂ ನೀಡುತ್ತಿದೆ ಎಂದು ಹೇಳಿದೆ. ಇದರಲ್ಲಿ ಕಲ್ಬುರ್ಗಿ, ಬೀದರ್ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಗೆ 7200 ಕೋಟಿ ರೂ ಅನುದಾನ ನೀಡಿದೆ. ಕಲ್ಯಾಣ ಕರ್ನಾಟಕ ಅಂದ್ರೆ ಕೇವಲ ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆಗೆ ಮಾತ್ರ ಆಗಿದೆ ಅದಕ್ಕಾಗಿ ಇದಕ್ಕೆ ಕಲ್ಯಾಣ ಕರ್ನಾಟಕ ಅನ್ನುವುದು ಬಿಟ್ಟು ಕಲ್ಬುರ್ಗಿ ಕರ್ನಾಟಕ ಅಭಿವೃದ್ಧಿ ಬೋರ್ಡ್ ಎಂದು ಕರೆಯಬೇಕಿದೆ ಎಂದರು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಈ ಸಂಪುಟ ಸಭೆಯಲ್ಲಿ ಕೇವಲ ವಿಮ್ಸ್ ಗೆ ಎಂ.ಆರ್.ಐಗೆ 10.50 ,ಕೋಟಿ ರೂ, ಬಳ್ಳಾರಿ ಗುಡ್ಡಕ್ಕೆ ರೂಪ್ ವೇ
ಕಮಲಾಪುರಕ್ಕೆ ಡಾರ್ಮೆಟ್ರಿ, ಹಂಪಿಯ ಧ್ವನಿ ಬೆಳಕಿಗೆ 25  ಕೋಟಿ‌ ಬಿಟ್ಟರೆ ಉಳಿದಂತೆ ಯಾವುದೇ ಯೋಜನೆಗಳಿಗೆ ಅನುದಾನ ಇಲ್ಲ ಎಂದರು.‌
ಬಳ್ಳಾರಿ ಜಿಲ್ಲೆಗೆ, ರಿಂಗ್ ರೋಡ್ ಇಲ್ಲ, ಮೆಣಸಿನಕಾಯಿ‌ ಮಾರುಕಟ್ಟೆ ಇಲ್ಲ.  ವಿಮಾನ‌ನಿಲ್ದಾಣ ಇಲ್ಲ. ವಿವಿಗಳ ಸಿಂಡಿಕೇಟ್ ಗೆ  ನೇಮಕವಾಗಲಿ, ಗಣ್ಯರಿಗೆ ಅಕಾಡೆಮಿಗಳ ಪ್ರಶಸ್ತಿಗಳು ಇಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ವಿರೋಧ ಪಕ್ಷಗಳು ಸಹ ಆಡಳಿತ ನಡೆಸುವವರ ಜೊತೆ ಶಾಮೀಲಾದಂತೆ ಕಾಣುತ್ತಿದೆ. ಅಭಿವೃದ್ದಿ ಅನದಾನದ ವಿಷಯದಲ್ಲಿ ಯಾರ ವಿರುದ್ದ, ಯಾರೂ ಮಾತನಾಡದೇ ಮೌನವೇ ಇವರ ಗುರಿಯಾಗಿದೆಂದರು.
ಬಳ್ಳಾರಿ ಜಿಲ್ಲೆ ವಿಭಜನೆಯಾಗಿದ್ದರಿಂದ ಜಿಲ್ಲೆಯಲ್ಲಿ ಶಕ್ತಿಯುತವಾದ  ನಾಯಕತ್ವ ಶಕ್ತಿ‌ ಕಳೆದುಕೊಂಡಿದೆ. ಈ ಹಿಂದೆ ಎಂ.ಪಿ.ಪ್ರಕಾಶ್, ಎಂ.ವೈ.ಘೋರ್ಪಡೆ ಅವರಂತಹ ನಾಯಕತ್ವದಿಂದ ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿತ್ತು. ಈಗ ಅಂತಹವರು ಇಲ್ಲದಿರುವುದರಿಂದ ಈ ಪರಿಸ್ಥಿತಿ ಬಂದಿದೆ ಎಂದರು.
ಬಾರದ ಉಸ್ತುವಾರಿ:
ಬಳ್ಳಾರಿಗೆ ಉಸ್ತುವಾರಿ ಸಚಿವರು  ಬಂದು ಪರಿಶೀಲನಾ ಸಭೆ ನಡೆಸಿಲ್ಲ. ಬಂದರೂ ಕಚೇರಿಗಳಲ್ಲಿ‌ ಕುಳಿತು ಅಧಿಕಾರಿಗಳು ಹೇಳಿದ್ದನ್ನು ಕೇಳಿ ಹೋದರೆ ಏನು ಅಭಿವೃದ್ಧಿ ಆಗುತ್ತೆ. ಎರೆಡು ಜಲ್ಲೆಗೂ ಒಬ್ಬರೇ ಇದ್ದು ಅವರು ಜಿಲ್ಲೆಯ ಅಭಿವೃದ್ಧಿಗೆ ಆಧ್ಯತೆ ಇಲ್ಲ ಎಂದರು.
ಶಾಸಕರಿಗೆ ಅವಮಾನ:
ಮುಖ್ಯ ಮಂತ್ರಿಗಳ ಬಾಗೀನ ಕಾರ್ಯಕ್ರಮಕ್ಕೆ ಹೊಸಪೇಟೆ ಶಾಸಕ ಗವಿಯಪ್ಪ ಅವರನ್ನು ಬಿಡದೇ ಇದ್ದುದು ಅವರಿಗೆ ಮಾಡಿದ ಅನುಮಾನವಾಗಿದೆ. ಮುಖ್ಯ ಮಂತ್ರಿಗಳು ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ ಅವರು ಡ್ಯಾಂನ ಮಾಹಿತಿ ನೀಡಲು ಹೋದರೆ ದೂಕುತ್ತಾರೆ. ಈಗ ಜಿಲ್ಲೆಯಲ್ಲಿ ನಾಯಕತ್ವ ಸತ್ತು ಹೋಗಿದೆ ಅದಕ್ಕಾಗಿ ಪರಿಸ್ಥಿತಿ ಹೀಗಾಗಿದೆ ಎಂದರು.
ಜಿಲ್ಲೆಯಿಂದ ಐದು ಶಾಸಕರು, ಸಂಸದರನ್ನು ಕಾಂಗ್ರೆಸ್ ನಿಂದ ಆಯ್ಕೆ ಮಾಡಿದ್ದರೂ ಉಪಯೋಗವಿಲ್ಲದಂತಾಗಿದೆ. ಅದಕ್ಕಾಗಿ ರ್
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಒಂದು ದಿನ ಡಿಸಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಿದೆಂದು ಹೇಳಿದರು.
ಬುಡಾ ದಾಖಲೆ ಸೀಜ್:
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ) ದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಮಾಡಿದ್ದು. ಈ‌ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು. ಅವರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅವರಿಂದ ಕ್ರಮ ಜರುಗದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಿದೆಂದರು.
ರಿಜಿಸ್ಟರ್ ಕಚೇರಿ ಪ್ರಾಡ್:
ಸಬ್ ರಿಜಿಸ್ಟರ್ ಕಚೇರಿಗಳೇ ಪ್ರಾಡ್, ಸಬ್ ರಿಜಿಸ್ಟರ್ ಅವರೇ ಪ್ರಾಡ್ ಏಜೆಂಟ ಆಗಿದ್ದು. ಇದಕ್ಕೆ ಸರ್ಕಾರವೇ ಕಾರಣವಾಗಿದೆ. ದಿನ ನಿತ್ಯ ಶೇ 30 ರಷ್ಟು ನಕಲಿ ದಾಖಲೆಗಳ ನೋಂದಣೆ ಆಗುತ್ತಿದೆ. ಪಾಲಿಕೆಯಲ್ಲಿ ಐದು ಸಾವಿರ ಬಿ.ಪಾರಂ ನೀಡಿದರೆ ಒಂದು‌ಲಕ್ಷ ನೋಂದಣಿ ಆಗುತ್ತವೆ ಎಂದರೆ ಏನೆಂಬುದು ತಿಳಿಯುತ್ತೆ ಎಂದರು.
ಪ್ರತ್ಯೇಕ ವಿಭಾಗ ಆಗಬೇಕು:
ಕಲ್ಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳಿಗೆ ಮಾತ್ರ ಕೆ.ಕೆ.ಆರ್.ಡಿ ಅನುದಾನ ಬಳಕೆ ಮಾಡುವಂತೆ ಇದ್ದರೆ. ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ಕಂದಾಯ ವಿಭಾಗ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.