ಗುರುಬಸಪ್ಪ ಎಸ್.ಗೆ ಪಿಎಚ್.ಡಿ ಪದವಿ.
(ಸಂಜೆವಾಣಿ ವಾರ್ತೆ)
ಬಳ್ಳಾರಿ .ಸೆ 24: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುಬಸಪ್ಪ ಎಸ್.ಇವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಘೋಷಿಸಿದೆ.
ಇವರು ವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ರವಿಯುವರ ಮಾರ್ಗದರ್ಶನದಲ್ಲಿ  ‘ ಗ್ರೋಥ್  ಅಂಡ್ ಪರ್ಫಾರ್ಮೆನ್ಸ್ ಆಫ್ ಸೆಲೆಕ್ಟ್ ಕಮರ್ಷಿಯಲ್ ಬ್ಯಾಂಕ್ಸ್ ಇನ್ ಪ್ರಿಯಾರಿಟಿ ಸೆಕ್ಟರ್ ವಿತ್ ಸ್ಪೆಷಲ್ ರೆಫರೆನ್ಸ್ ಟು ಕರ್ನಾಟಕ ‘ ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ಕೈಗೊಂಡು ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ನೀಡಿದೆ.