ಗರ್ಭಕೋಶ ಸ್ತನ ಕ್ಯಾನ್ಸರ್ ಗೆ   ಭೀತಿ ಬೇಡ: ಡಾ ಶೋಭಾರಾಣಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ ಸೆ24:  ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯವರು  ಜಿಲ್ಲೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಗರ್ಭಕೋಶದ ಕ್ಯಾನ್ಸರ್ ಮತ್ತು ಹೆಚ್.ಪಿ.ವಿ ವ್ಯಾಕ್ಸೀನ್ ಬಗ್ಗೆ ಅರಿವು ಮತ್ತು ತಪಾಸಣಾ ಶಿಬಿರವನ್ನು ಎಸ್ಪಿ  ಕಛೇರಿ ಸಭಾಂಗಣದಲ್ಲಿ ನಿನ್ನೆ ಹಮ್ಮಿಕೊಂಡಿತ್ತು.
ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಡಾ. ಶೋಭರಾಣಿ, ಗರ್ಭ ಕೋಶ ಮತ್ತು ಸ್ತನ ಕ್ಯಾನ್ಸರ್ ನಲ್ಲಿ ಸಾವಿನ ಸಂಖ್ಯೆ ಹೆಚ್ಚು ಕಂಡು ಬರುತ್ತಿದೆ. ಅದರಲ್ಲಿಯೂ ಮಹಿಳೆಯರಿಗೆ ಶೇಕಡಾ77./. ರಷ್ಟು  ಮಹಿಳೆಯರಲ್ಲಿ ಸಾವು ನೋವು ಹೆಚ್ಚಾಗಿದೆ.  ಅಂದರೆ ಭಾರತದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭ ಕೋಶದ ಕ್ಯಾನ್ಸರ್ ನಿಂದ ಸಾವನಪ್ಪುತ್ತಿದ್ದಾಳೆ. ಹಾಗಾಗಿಯೇ  ಈ ಬಗ್ಗೆ ಅರಿವು ಹಾಗೂ ತಪಾಸಣೆಯ ಮಹತ್ವವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಟಿ. ಜಿ ವಿಠ್ಠಲ,  ನಮ್ಮ ಸಂಸ್ಥೆಯು ಕಳೆದ 75 ವರ್ಷದಿಂದ ಆರೋಗ್ಯ ಸೇವೆ ನೀಡುತ್ತಾ ಬಂದಿದೆ ಹಾಗೆಯೇ ಇದು ಲಾಭದಾಯಕ ಸಂಸ್ಥೆ ಅಲ್ಲದಿರುವುದರಿಂದ ಕೇವಲ ಆರೋಗ್ಯ ಸೇವೆಗಾಗಿ ಇರುವ ಸಂಸ್ಥೆ ಎಂದರು. ಆಧುನಿಕ ತಂತ್ರ ಬಳಸಿ ಗರ್ಭಕಂಠದ ಕ್ಯಾನ್ಸರ್ ನ್ನು ನಿಖರವಾಗಿ ಪತ್ತೆ ಹಚ್ಚಿ ಮತ್ತು ಅದರ ತಪಾಸಣೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ಮಾಡಿಕೊಡುವ ವ್ಯವಸ್ಥೆಯನ್ನು ಹೊಂದಿದೆಂದರು.
ಸಂಪನ್ಮೂಲ ವ್ಯಕ್ತಿ ಡಾ. ಪ್ರಣೀತಾ ಅಜಯ್, ಗರ್ಭ ಕೋಶದ ಕ್ಯಾನ್ಸರ್ ಹಾಗೂ ಸ್ಥನ ಕ್ಯಾನ್ಸರ್  ಹೇಗೆ ಹರಡುತ್ತದೆ  ಹಾಗೂ ಅದು ಬಾರದಹಾಗೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಹೆಚ್.ಪಿ.ವಿ ಲಸಿಕೆ ಯ ಬಗ್ಗೆ  ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ  ಸದಸ್ಯ ವಿಷ್ಣು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.