ಸಿಡಿಲು ಬಡಿತಕ್ಕೆ ಒಬ್ಬ ವ್ಯಕ್ತಿ ಎರಡು ಎತ್ತುಗಳು ಸಾವು
ಸೇಡಂ, ಮೇ,27: ನಿನ್ನೆ ಸಂಜೆ ಸಿಡಿಲು ಬಡಿತಕ್ಕೆ ಒಬ್ಬ ವ್ಯಕ್ತಿ ಹಾಗೂ ಎರಡು ಎತ್ತುಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿರುವ ಮೋಹನ ತಂದೆ ದೇವಜ್ಯಾ ನಾಯಕ್ ಧನದ ಕೊಟ್ಟಿಗೆಯಲ್ಲಿ ಮಳೆಯಿಂದ ಆಶ್ರಯ ಪಡೆಯಲು ಕೂಳಿತ ಸಂದರ್ಭದಲ್ಲಿ ಸಿಡಿಲು ಬಡಿತಕ್ಕೆ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮ್ ಲೆಕ್ಕಾಧಿಕಾರಿ ಕಾಶಿನಾಥ್ ಹಾಗೂ ಗ್ರೇಟ್ ಟು ತಹಸಿಲ್ದಾರ್ ಸಿದ್ದರಾಮ ನಾಚವಾರ ಮತ್ತು ಪೆÇೀಲಿಸ್ ಸಿಬ್ಬಂದಿ ಪಶು ವೈದ್ಯಾಧಿಕಾರಿ ಡಾ.ಶರಣ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು