ವೈಜನಾಥ ಕರ್ಪೂರಮಠರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲು : ಚನಬಸಯ್ಯ ಹಿರೇಮಠ ಆಗ್ರಹ
ವಿಜಯಪುರ :ಮೇ.27: ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಟಾವಂತರಾಗಿ ಪಕ್ಷ ಸಂಘಟನೆಯಲ್ಲಿ ಹಗಲಿರುಳೆನ್ನದೇ ಸಂಪೂರ್ಣವಾಗಿ ತೊಡಗಿಸಿಕೊಂಡು ಹತ್ತು ಹಲವಾರು ಹುದ್ದೆಗಳನ್ನು ಪಡೆದು ಬಹಳ ಶ್ರದ್ಧೆಯಿಂದ ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಹಿರಿಯರಿಂದ ಸಹಿ ಎನ್ನಿಸಿಕೊಂಡಿರುವ ಪಕ್ಷ ಕಟ್ಟುವಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿರುವ ಪಕ್ಷದ ಹಿರಿಯರಾದ ವೈಧ್ಯನಾಥ ಕರ್ಪೂರಮಠ ಅವರಿಗೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ ಕಳಿಸಬೇಕು ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಚನಬಸಯ್ಯ ಹಿರೇಮಠ ಹಾಗೂ ಅವರ ಸಂಘಡಿಗರು ಒತ್ತಾಯಿಸಿದ್ದಾರೆ.
ವೈಜನಾಥ ಕರ್ಪೂರಮಠ ಅವರು ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಮಾನ್ಯ ತಳಮಟ್ಟದ ಕಾರ್ಯಕರ್ತನಿಂದ ಹಿಡಿದು ಜಿಲ್ಲಾ ಕಾರ್ಯಕಾರಣಿ ಸದಸ್ಯರಾಗಿ, ಮಾನವ ಹಕ್ಕುಗಳ ಉಪಾಧ್ಯಕ್ಷರಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಉದ್ಯೋಗ ಸಮಿತಿಯ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಕಟ್ಟಡ ಸಮಿತಿಯ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಹಂಗಾಮಿ ಅಧ್ಯಕ್ಷರಾಗಿ ಇನ್ನು ಅನೇಕ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಜಿಲ್ಲೆಯ ಉದ್ದಗಲಕ್ಕೂ ತಮ್ಮದೇ ಚಾಪನ್ನು ಮುಡಿಸಿ ತಮ್ಮ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಆದ್ದರಿಂದ ಈ ಭಾರಿಯ ವಿಧಾನ ಪರಿಷತ್ ಸದಸ್ಯರಾಗಿ ವೈಜನಾಥ ಕರ್ಪೂರಮಠ ಅವರನ್ನು ಆಯ್ಕೆಮಾಡಬೇಕೆಂದು ಪಕ್ಷದ ಹಿರಿಯರಲ್ಲಿ ಈ ಮೂಲಕ ಒತ್ತಾಯಿಸುತ್ತೆವೆ ಎಂದರು
ಈ ವೇಳೆ ಕಿಸಾನ ಕಾಂಗ್ರೆಸ್ ಮುಖಂಡರಾದ ಪ್ರದೀಪ ಮಿಷ್ಕಿನ್, ರಾಮನಗೌಡ ಪಾಟೀಲ, ಎಂ.ಎಸ್.ಮಠ, ಮಂಜುನಾಥ ದೊಡಮನಿ, ಬಸಯ್ಯ ಹಿರೇಮಠ, ಕಾಂಚನಾ ಚಲವಾದಿ, ಪ್ರವಿಣ ಕಿಚಡಿ, ಹಸನಪಟೇಲ ಶಿವಣಗಿ, ಬಿ.ಬಿ ಮಠ, ಭೀಮಯ್ಯ ಹಿರೇಮಠ ಅವರು ಇದ್ದರು.