ಯಾರದೋ ಒತ್ತಾಯಕ್ಕೆ ಕೋರ್ಸುಗಳ ಆಯ್ಕೆ ಸರಿಯಲ್ಲ
ಬಸವಕಲ್ಯಾಣ:ಮೇ.27: ಯಾರದೋ ಒತ್ತಾಯಕ್ಕೆ ಕೋರ್ಸುಗಳ ಆಯ್ಕೆ ಸರಿಯಲ್ಲ ಎಂದು ಕಲ್ಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಮಾಜೀದ್ ಮಣಿಯಾರ್ ತಿಳಿಸಿದರು
ಅವರು ಇಲ್ಲಿನ ವರ್ಷಾ ಕಲ್ಯಾಣ ಮಂಟಪದಲ್ಲಿ ಎಸ್.ಐ.ಒ. ವತಿಯಿಂದ ಹಮ್ಮಿಕೊಂಡ ಎಸ್. ಎಸ್. ಎಲ್. ಸಿ .ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಉನ್ನತ ಕ್ಷೇತ್ರದ ಕೊರ್ಸುಗಳಾದ ವೈದ್ಯಕೀಯ ನಸಿರ್ಂಗ್ ವಿವಿಧ ಯಂತ್ರಚಾಲಕರಿಗಾಗಿರುವ ಡಿಪೆÇ್ಲೀಮಾ ಇನ್ನಿತರ ಕೋರ್ಸ್ ಮಾಡಬಹುದು ಅಲ್ಲದೆ ಶಿಕ್ಷಕರ ಹುದ್ದೆಗಳಿಗೂ ಸಹ ಬಹಳಷ್ಟು ಬೇಡಿಕೆ ಇದೆ ಎಂದರು ಶಿಕ್ಷಕರಾದ ಅಲ್ತಾಫ್ ಅಮ್ಜಾದ್ ಮಾತನಾಡಿ ಕಠಿಣವಾದ ಪರಿಶ್ರಮದಿಂದ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸಬಹುದು ಎಂದರು ಮೌಲಾನಾ ಇಜಹಾರ್ ಉಲ್. ಎಸ್. ಐ .ಓರಾಜ್ಯ ಘಟಕದ ಕಾರ್ಯದರ್ಶಿ ನಾಸಿರ್ ಜಿಲ್ಲಾ ಘಟಕದ ಅಧ್ಯಕ್ಷ ಸೈಫೆÇೀದ್ದಿನ್ ತಾಲೂಕಾ ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್ ಸಹ ಮಾತನಾಡಿದರು ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದ ಕಿತ್ತೂರಾಣಿ ಚೆನ್ನಮ್ಮ ಶಾಲೆಯ ಆರತಿ .ಗಣಪತಿ ಆದರ್ಶ ವಿದ್ಯಾಲಯದ ಶ್ರಾವಣಿ .ಸಾಕ್ಷಿ ಜಿಕ್ರಾ ಪ್ರೌಢಶಾಲೆ ಮಹೇಕ್. ಫಾತಿಮಾ ಜ್ಞಾನಪ್ರಿಯ ಪ್ರೌಢಶಾಲೆಯ .ಕೀರ್ತಿ. ಜಗದೀಶ್ ಮತ್ತು ಕಾವ್ಯ .ಗೌರಿಶಂಕರ್ .ಎಸ.ಬಿ.ಆರ ಶಾಲೆಯ .ಸುಮಿತ್ .ಗಿರಿಧರ್. ದಾನೂರೆ .ಶಾಂತಿನಿಕೇತನ ಪ್ರೌಢ ಶಾಲೆಯ .ದೀಪಿಕಾ ಗೋಪಾಲ್. ರೇಣುಕಾ ನಾಗರಾಜ್. ಈ ರೀತಿ ಅನೇಕ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಪುಣ್ಯಕೋಟಿ ಕಾಲೇಜಿನ ಪ್ರಾಚಾರ್ಯ .ಎಸ್. ಎಸ್ ಶಿಲವಂತ್ .ಪ್ರಮುಖರಾದ ನಯಿಮೋದ್ದಿನ್. ಚಾಬುಕ್ ಸವಾರ್. ಕೂತುಬೋದ್ದೀನ್. ರಿಯಾಜ್ ಪಟೇಲ್ .ಮಹಮದ್. ರೌಫಖಾದ್ರಿ. ಸವೂದ .ಸೇರಿದಂತೆ ಅನೇಕರು ಭಾಗವಹಿಸಿದ್ದರು.