ದೇವನಗರಿ ಪ್ರೊ ಇಮೇಜ್ – 2024 ಪೋಸ್ಟರ್ ಬಿಡುಗಡೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೭; ಮಧ್ಯ ಕರ್ನಾಟಕದ ಬೃಹತ್ ಛಾಯಾ ಚಿತ್ರ ವಸ್ತು ಪ್ರದರ್ಶನದದೇವನಗರಿ ಪ್ರೊ ಇಮೇಜ್ – 2024 ಪೋಸ್ಟರ್ ಅನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌ ತಮ್ಮ ನಿವಾಸದಲ್ಲಿ ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು  ಛಾಯಾಗ್ರಾಹಕರ ಒಳಿತಿಗಾಗಿ ದಾವಣಗೆರೆ, ಚಿತ್ರದುರ್ಗ, ಗದಗ, ಕೊಪ್ಪಳ, ಹಾವೇರಿ, ಶಿವಮೊಗ್ಗ, ವಿಜಯನಗರ ಸೇರಿದಂತೆ 7 ಜಿಲ್ಲೆಯ  ಛಾಯಾಗ್ರಾಹಕರು ಸೇರಿ ದಾವಣಗೆರೆ  ನಗರದಲ್ಲಿ ಆಗಸ್ಟ್ 24- 25 ರಂದು ಮಧ್ಯ ಕರ್ನಾಟಕದ ಬೃಹತ್ ಛಾಯಾ ವಸ್ತು ಪ್ರದರ್ಶನವನ್ನು ಮಾಡುತ್ತಿದ್ದಾರೆ ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದರು. ವಸ್ತು ಪ್ರದೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀನಾಥ್ ಪಿ ಅಗಡಿ,  ದಾವಣಗೆರೆ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಜಾಧವ್,  ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ  ಸೈಯದ್ ರೆಹಮತ್ ವುಲ್ಲಾ,  ಹಾವೇರಿ    ಜಿಲ್ಲಾಧ್ಯಕ್ಷರಾದ  ರಾಜೇಂದ್ರ ರಿತ್ತಿ, ಕೊಪ್ಪಳ ಜಿಲ್ಲಾ ಕಾರ್ಯದರ್ಶಿಯಾದ ಪ್ರಾಣೇಶ್ ಕಂಪ್ಲಿ, ವಿಜಯನಗರ ಜಿಲ್ಲೆಯ ಸುರೇಶ್ , ದಾವಣಗೆರೆ  ಜಿಲ್ಲಾ ಕಾರ್ಯದರ್ಶಿ ಚನ್ನಬಸವರಾಜು ಹಾಗೂ ಹೊನ್ನಳ್ಳಿಯ ತಾ ಅಧ್ಯಕ್ಷರಾದ  ಬಸವನಗೌಡ್ರು, ನ್ಯಾಮತಿ ತಾಲೂಕು ಅಧ್ಯಕ್ಷರಾದ ರಾಘವೇಂದ್ರ, ಜಗಳೂರು ತಾಲೂಕು ಸಂಘದ ಉಪಾಧ್ಯಕ್ಷರಾದ ಹನುಮಂತಪ್ಪ,  ಹರಿಹರ ತಾಲೂಕು ಸಂಘದ ಅಧ್ಯಕ್ಷರಾದ  ಸಂತೋಷ್ ಕಿರೋಜಿ, ದಾವಣಗೆರೆ ತಾಲೂಕು ಸಂಘದ ಕಾರ್ಯದರ್ಶಿಯಾದ ದುಗ್ಗಪ್ಪ ಕಡೆಮನಿ, ತಿಪ್ಪೇಸ್ವಾಮಿ, ಎಸ್ ಆರ್ ಕಿರಣ್ ಕುಮಾರ್, ಮಿಥುನ್ ಬಸವರಾಜ್,ತಿಲಕ್, ಮಂಗಳಮ್ಮ, ಶ್ರೀಮತಿ  ರುದ್ರಮ್ಮ, ಕಾಸಿಂ ಹಾಗೂ ಏಳು ಜಿಲ್ಲೆಯ ಜಿಲ್ಲಾ ತಾಲೂಕು  ಪದಾಧಿಕಾರಿಗಳು ಉಪಸ್ಥಿತರಿದ್ದರು.