ಮಾಜಿ ಸಚಿವ ಆಂಜನೇಯರನ್ನು ಎಂಎಲ್ ಸಿ ಮಾಡಲು ಒತ್ತಾಯ.
ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.27: ಮಾದಿಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಾಜಿ ಸಚಿವ ಹೆಚ್.ಆಂಜನೇಯಲು ರವರನ್ನು ಎಂಎಲ್ ಸಿ ಮಾಡುವಂತೆ ಮಾದಿಗ ಸಮುದಾಯದ ಮುಖಂಡರು ಕಾಂಗ್ರೆಸ್ ಹೈಕಮಾಂಡನ್ನು‌ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಮುಖಂಡರಾದ ರಾಮಚಂದ್ರ, ಕೆ.ಬಸವರಾಜ್, ಭರತ್ ಕುಮಾರ, ದೇವಪ್ಪ, ರಾಮಾಂಜನೇಯ, ವಿರೇಶ್, ಸಂತೋಷ್ ಸಮುದಾಯದ ಸಂಘಟನೆ ಸಮಗ್ರ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡ ನಾಯಕರಾಗಿರುವ ಆಂಜನೇಯಲು ರವರನ್ನು ಉದ್ದೇಶ ಪೂರ್ವಕವಾಗಿಯೇ ಸೋಲಿಸಲಾಗುತ್ತಿದೆ.  ಕಾಂಗ್ರೆಸ್ ಪಕ್ಷ ಆಂಜನೇಯಲು ಅವರ ಸೇವೆಯನ್ನು‌ ಗುರುತಿಸಿ ಅವಕಾಶ ನೀಡಬೇಕು ಎಂದರು. ಆರ್ಥಿಕವಾಗಿ ದುಸ್ಥಿಯಲ್ಲಿರುವ ಸಮುದಾಯದವರಿಗೆ ಅನೇಕ ಯೋಜನೆಗಳು ದೊರೆಯುವಂತೆ ಮಾಡಿ ಸಮುದಾಯದ ಬೆಳೆವಣಿಗೆಗೆ ಸಹಕಾರ ನೀಡುತ್ತಿದ್ದಾರೆ ಎಂದರು. ಅವರಿಗೆ ಯೋಗ್ಯವಾದ ಸ್ಥಾನಮಾನವನ್ನು ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.