ಗ್ರಾಮೀಣ ಬ್ಯಾಂಕ್ ರೈತರಿಗೆ ಓಟಿಎಸ್ ನೀಡಲುಬ್ಯಾಂಕರ್ ಗಳ ಸಮಿತಿ ಸೂಚನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,27- ರಾಜ್ಯದ 22 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಸುಸ್ತಿದಾರರಾಗಿರುವ ರೈತರ ಸಾಲವನ್ನು ಏಕ ತೀರುವಳಿ(ಓಟಿಎಸ್) ಮೂಲಕ ಬಗೆಹರಿಸಬೇಕೆಂದು ಬ್ಯಾಂಕಿನ ಅಧ್ಯಕ್ಷರಿಗೆ. ರಾಜ್ಯ ಮಟ್ಟದ ಬ್ಯಾಂಕ್ ರ್ಗಳ ಸಮಿತಿಯ ಬಿ.ಪಾರ್ಶವನಾಥ ನಿರ್ದೇಶನ ನೀಡಿದ್ದಾರೆಂದು ರೈತ ಸಂಘ ಹೇಳಿದೆ.
ಸಂಘದ ಅಧ್ಯಕ್ಷ ಆರ್.ಮಾಧವರೆಡ್ಡಿ  ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದ್ದಾರೆ.
ಗ್ರಾಮೀಣ ಬ್ಯಾಂಕ್ ನಲ್ಲಿ   54 ರೈತರಿದ್ದಾರೆ. ಆದರೆ  ಬ್ಯಾಂಕಿನವರು ಒಂದು ಲಕ್ಷದ 61 ಸಾವಿರ ರೈತರು ಮಾತ್ರ ಒಟಿಎಸ್ ಗೆ ಅರ್ಹರಿದ್ದಾರೆಂದು ಹೇಳುತ್ತಿದ್ದಾರೆ. ಆದರೆ ನಮ್ಮ ಪ್ರಕಾರ 40 ಲಕ್ಷ ರೈತರು ಓಟಿಎಸ್ ಗೆ ಅರ್ಹರಿದ್ದಾರೆಂದರು.
ಬ್ಯಾಂಕ್ ಬಡ್ಡಿಗೆ ಬಡ್ಡಿ ಹಾಕು ಸಾಲದ ಮೊತ್ತವನ್ನು ದೊಡ್ಡದು ಮಾಡಿದೆ. ಆದರೆ  ಈಗಾಗಲೇ ನಾವು ತೆಗೆದುಕೊಂಡ ಸಾಲದ ಮೊತ್ತದಲ್ಲಿ  ಶೇ50 ರಷ್ಟು ಮಾತ್ರ ಪಾವತಿ‌ಮಾಡಲು ಸಿದ್ದರಿರುವುದಾಗಿ ಹೇಳಿದೆ.
ಗ್ರಾಮೀಣ ಬ್ಯಾಂಕಿನ ಪ್ರಾಯೋಜಿತ ಬ್ಯಾಂಕ್ ಆಗಿರುವ  ಕೆನರಾ ಬ್ಯಾಂಕ್ ಶೇ 15 ಓಟಿಎಸ್ ನೀಡಿದೆ. ಹೀಗಿರುವಾಗ ಗ್ರಾಮೀಣ ಬ್ಯಾಂಕ್ ಸಹ ಓಟಿಎಸ್ ನೀಡಬೇಕೆಂದರು.
ಓಟಿಎಸ್ ಗಾಗಿ ಹಲವು ರೀತಿತ ಹೋರಾಟ ಕಳೆದ ಎರೆಡು ವರ್ಷಗಳಿಂದ ನಡೆಸುತ್ತಾ ಬಂದಿದೆ. ಈಗ ಬ್ಯಾಂಕ್ ರ್ಗಳ ಸಮಿತಿಯ ನಿರ್ದೇಶನದಂತೆ ಬರುವ ಜೂನ್ ತಿಂಗಳಲ್ಲಿ ಓಟಿಎಸ್ ಪ್ರಕಟಿಸಿ ವ್ಯಾಪಕ ಪ್ರಚಾರ ಮಾಡಬೇಕಿದೆ.
ಓಟಿಎಸ್ ನಲ್ಲಿ ಹಣ ಪಾವತಿಸಿಕೊಂಡು ಹೊಸ ಸಾಲ ನೀಡಬೇಕು ಎಂಬುದು ನಮ್ಮ‌ಆಗ್ರಹವಾಗಿದೆಂದರು.
ಸರ್ಕಾರದಿಂದ ವಿವಿಧ ರೀತಿಯ ಪರಿಹಾರ, ಸೌಲಭ್ಯದ ಹಣ ಬಂದರೆ ಸಾಲದ ಖಾತೆಗೆ ಜಮೆ ಮಾಡುವುದು ಸರಿಯಲ್ಲ. ಸಿಎಂ ಅವರು ಸಹ ಹಾಗೆ ಮಾಡದಿರಲು ಹೇಳಿದ್ದರು. ಬ್ಯಾಂಕ್ಗಳು ಸಾಲಕ್ಕೆ ಜಮೆ ಮಾಡುತ್ತಿರುವುದನ್ನು ನಿಲ್ಲಿಸಲು ಡಿಸಿಯವರು ಸೂಚನೆ ನೀಡಲು ಮನವಿ ಸಲ್ಲಿಸಲಿದೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ  ಸಂಘಟನೆಯ ಮುಖಂಡರುಗಳಾದ ಶ್ರೀಶೈಲ ಆಲದಹಳ್ಳಿ, ಲೇಪಾಕ್ಷಿ ಅಸುಂಡಿ, ಪಂಪಾಪತಿ, ಬಸರೆಡ್ಡಿ, ಅಬ್ದುಲ್ ಸುಕುರ್, ಸುರೇಂದ್ರ, ಬೈರಾಪುರ ತಿಮ್ಮನಗೌಡ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾಂಕಿನ ನಿರ್ಧಾರ್ ?
ಓಟಿಎಸ್ ನೀಡಲು ನಿರ್ದೇಶನ ಬಂದಿದೆ. ಈಗ ಬ್ಯಾಂಕ್ ಯಾವ ಪ್ರಮಾಣದಲ್ಲಿ ಓಟಿಎಸ್ ನೀಡುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ರೈತರು ಬಯಸಿದಂತೆ ಪಡೆದ ಸಾಲಕ್ಕೆ ಶೇ 50 ಕ್ಕೆ ಓಟಿಎಸ್ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಇಲ್ಲದಿದ್ದರೆ ಮತ್ತೆ ಹೋರಾಟ ಅನಿವಾರ್ಯವಾಗಲಿದೆ.