ಪಲ್ಲಾಗಟ್ಟೆ ಗ್ರಾಮದ ದಲಿತ ಕಾಲೋನಿಗಿಲ್ಲ ಮೂಲಭೂತ ಸೌಲಭ್ಯ.!


ಜಗಳೂರು.ಮೇ.೨೭ :-ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ದಲಿತ ಕಾಲೋನಿಯಲ್ಲಿ ರಸ್ತೆ ಚರಂಡಿಗಳಿಲ್ಲದೆ ಸಂದೂ ಗಂದುಗಳ ಇಕ್ಕಟ್ಟಿನಲ್ಲಿ ಓಡಾಡುವ ಪರಿಸ್ಥಿತಿ ದಲಿತರಿಗೆ ಎದುರಾಗಿದೆ ದಲಿತ ಕೇರಿ ಅಕ್ಕಪಕ್ಕದಲ್ಲಿ ಸಗಣೆ ತಿಪ್ಪೆ ಕಸ,ಚರಂಡಿ ಸ್ವಚ್ಛತೆ ಯಿಲ್ಲದೆ ದುರ್ವಾಸನೆಯಿಂದ ಕೂಡಿರುವುದು ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.ಹೌದು ಕಳೆದ ಕೆಲ ವರ್ಷಗಳಿಂದ ದಲಿತ ಕಾಲೋನಿ ಪಕ್ಕದಲ್ಲಿ ಸಂಗ್ರಹವಾಗಿರುವ ಸಗಣಿಕಸದ ತಿಪ್ಪೆಯಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಿದೆ.ಆದರೆ ಇದರ ಬಗ್ಗೆ ಸೌಜನ್ಯಕಾದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಕೇವಲ ಕುರ್ಚಿಗೆ ಮಾತ್ರ ಸೀಮಿತವಾಗಿದ್ದಾರೆ ಅಲ್ಲಿನ ಪರಿಸ್ಥಿತಿ ಕಂಡರೂ ಕೂಡ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದೆ.ಗ್ರಾಮ ಪಂಚಾಯಿತಿಗಳಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಶೇ.25 ರಷ್ಟು ಮೀಸಲಿಡುವುದು ಎಸ್.ಸಿ ಎಸ್.ಟಿ ಕಾಲೋನಿ ಯಲ್ಲಿ ಸ್ವಚ್ಛತೆ, ಅವರಿಗೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಂಗಡದವರ ಅಭಿವೃದ್ಧಿ ಗೆಂದೆ ರಾಜ್ಯ ಸರ್ಕಾರ ಇಂತಿಷ್ಟು ಹಣ ಎಂದು ಬಜೆಟ್  ಆಯವ್ಯದಲ್ಲಿ ನಿಗದಿಪಡಿಸಿದೆ ಆದರೆ ಅಧಿಕಾರಿಗಳು ಪ್ರಬಲರಿಗೆ ಮೇಧಾವಿಗಳಿಗೆ ಸೇರಿದಂತೆ ಕಚೇರಿಯ ಬೇರೆ ಬೇರೆ ಕೆಲಸಗಳಿಗೆ ಬಳಸುತ್ತಿದ್ದಾರೆ ಎಂದು ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತು ಗ್ರಾಮ ಪಂಚಾಯಿತಿಯ ಲ್ಲಿ ಅನುದಾನ ದುರ್ಬಳಕೆ ಯಾಗುತ್ತಿದ್ದು ಸ್ವಚ್ಛತೆ ಮೂಲ ಭೂತ ಸೌಕರ್ಯಗಳು ಮರೀಚಿಕೆ ಮತ್ತು ದಲಿತರ ಉದ್ದಾರ ವಾಗುವುದು ಎಲ್ಲಿ ಬಂತು.ಸ್ವಾತಂತ್ರ್ಯ ದೊರೆತು 8 ದಶಕಗಳಾದರೂ ದಲಿತ ಕಾಲೋನಿಯ ಸರ್ವತೋಮುಖ ಅಭಿವೃದ್ದಿಗೆ ಕಾಳಜಿವಹಿಸಬೇಕಿದ್ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಮತ್ತು ತಾಲೂಕು ಪಂಚಾಯಿತಿ ಯಾವೊಬ್ಬ ಅಧಿಕಾರಿಗಳು ಆ ದಲಿತ ಕಾಲೋನಿಗೆ ಚರಂಡಿ. ರಸ್ತೆ. ಸ್ವಚ್ಛತೆ. ಬಗ್ಗೆ ಯಾರೂ ಕೂಡ ತಲೆ ಹಾಕಿ ಸಹ ತಿರುಗಿ ನೋಡಿಲ್ಲ.!ಆದರೆ ಪಲ್ಲಾಗಟ್ಟೆ ದಲಿತ ಕಾಲೋನಿ ಸೇರಿದಂತೆ ತಾಲೂಕಿನ ಕೆಲವೊಂದು ದಲಿತ ಕಾಲೋನಿಯ ಮೂಲ ಸೌಕರ್ಯದ ಬಗ್ಗೆ ಇದುವರೆಗೂ ತಾಲೂಕು ಪಂಚಾಯಿತಿ ಇ.ಓ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅಭಿ ವೃದ್ಧಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದು.ಇನ್ನು ಮುಂದೆ ಯಾದರೂ ಅಧಿಕಾರಿಗಳು ಇತ್ತಕಡೆ ಗಮನಹರಿಸುತ್ತಾರೆ ಯೇ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.ಈಗಲಾದರೂ ದಾವಣಗೆರೆ ಜಿಲ್ಲಾಧಿಕಾರಿಗಳು.ಜಿಲ್ಲಾ ಪಂಚಾಯಿತಿ ಸಿಇಓ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಗಳೂರು ತಾಲೂಕಿನಲ್ಲಿ ಮೂಲಭೂತ ಸೌಕರ್ಯ ವಂಚಿತ ಗೊಂಡಿರುವ ದಲಿತ ಕಾಲೋನಿಗೆ ಭೇಟಿ ನೀಡಿ ನಮ್ಮ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಈಗಲಾದರೂ ಕ್ರಮವಹಿಸಿ ಇಲ್ಲಿನ ಸಮಸ್ಯೆಗಳಾದ ಸ್ವಚ್ಛತೆ ರಸ್ತೆ ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯ ಗಳು ದೊರಕಿಸಿಕೊಡಬೇಕೆಂದು ಇಲ್ಲಿನ ದಲಿತ ಜನಾಂಗ ದವರು ಒತ್ತಾಯಿಸಿದ್ದಾರೆ.