ಸಾಕ್ಷರತಾ ಸೇವೆಗೆ ಬಸವರಾಜ್ ಕಟ್ಟಿಗೆ ಡಾಕ್ಟರೇಟ್ ಪ್ರಧಾನ
ಜೇವರ್ಗಿ:ಮೇ.27: ಸುಮಾರು ಎರಡು ದಶಕದಿಂದ ಸಾಕ್ಷರತಾ ಸೇವೆಗಾಗಿ ಆಗಲು ಇರಲು ಎನ್ನದೆ ಶ್ರಮಿಸಿದ ತಾಲೂಕಿನ ಕೊಳಕೂರು ಗ್ರಾಮದ ಬಸವರಾಜ್ ಕಟ್ಟಿ ಇವರಿಗೆ ಭಾರತ ವರ್ಜಿನಲ್ ಯೂನಿವರ್ಸಿಟಿ ವತಿಯಿಂದ ಡಾಕ್ಟರೇಟ್ ಪ್ರಧಾನ ಮಾಡಲಾಯಿತು ಡಾಕ್ಟರೇಟ್ ಪ್ರಧಾನ ಮಾಡಿದ ಸಲುವಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಮರಿಯಪ್ಪ ಬೇಗರ ಹರ್ಷ ವ್ಯಕ್ತಪಡಿಸಿದ್ದಾರೆ ಈ ಸಂದರ್ಭದಲ್ಲಿ ರಾಯಪ್ಪ ಕೊಳಕೂರ ಮಲ್ಲಪ್ಪ ಹೊಸ್ಮನಿ ಗ್ರಾಮ ಪಂಚಾಯತ್ ಅಧ್ಯಕ್ಷರು ಚಂದ್ರು ಮ್ಯಾಗೇರಿ ಗುರು ಮದ್ರಿಕಿ ಸೇರಿದಂತೆ ಅನೇಕರು ಇದ್ದರು